ಕತ್ರೀನಾ ವಿವಾಹಕ್ಕೆ ಸಲ್ಮಾನ್ ಗಿಲ್ಲ ಅಹ್ವಾನ

ಮುಂಬೈ, ಡಿ.೨- ಬಾಲಿವುಡ್ ನಟಿ ಕತ್ರೀನಾ ಕೈಫ್ ಹಾಗೂ ನಟ ವಿಕಿ ಕೌಶಾಲ್ ಅವರ ವಿವಾಹ ಸಮಾರಂಭಕ್ಕೆ ನಟ ಸಲ್ಮಾನ್ ಖಾನ್ ಹಾಗೂ ಮತ್ತವರ ಕುಟುಂಬಕ್ಕೆ ಆಹ್ವಾನ ನೀಡಿಲ್ಲ.
ಜೈಪುರದಲ್ಲಿ ಡಿ. ೯ ರಂದು ಇವರಿಬ್ಬರ ಅದ್ಧೂರಿ ವಿವಾಹ ನಿಗದಿಯಾಗಿದೆ. ಈ ಮೊದಲು ಕತ್ರೀನಾ ಕೈಫ್ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಸದಸ್ಯರಿಗೆ ಆಹ್ವಾನ ನೀಡಲಾಗಿತ್ತು.
ಆದರೇ ಔಪಚಾರಿಕವಾಗಿ ಆಹ್ವಾನ ನೀಡಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ನಿನ್ನೆಯೂ ಕೂಡ ಸಲ್ಮಾನ್ ಖಾನ್, ಸಹೋದರಿಯರಾದ ಅರ್ಪಿತಾ ಖಾನ್, ಅಲ್ವೀರಾಖಾನ್ ಅಗ್ನಿಹೋತ್ರಿ ಅವರನ್ನು ವಿವಾಹ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ವರದಿಗಳು ತಿಳಿಸಿದ್ದವು. ಈ ಸಂಬಂಧ ಅರ್ಪಿತಾ ಅವರನ್ನು ಸಂಪರ್ಕಿಸಿದಾಗ ಕತ್ರೀನಾ ಕೈಫ್ ಮತ್ತು ವಿಕಿ ಕೌಶಾಲ್ ಅವರ ವಿವಾಹದ ಆಮಂತ್ರಣ ಸ್ವೀಕರಿಸಿಲ್ಲ. ಈ ರೀತಿಯ ಬೆಳವಣಿಗೆಗಳು ನಡೆದಿವೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ.
ಈ ಮೂಲಕ ಮದುವೆಗೆ ಸಲ್ಮಾನ್‌ಖಾನ್ ಅವರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆಯೇ ಎಂಬ ಕುತೂಹಲದ ಪ್ರಶ್ನೆಗೆ ತೆರೆ ಬಿದ್ದಿದೆ. ಏಕೆಂದರೆ ಈ ರೀತಿಯ ಆಹ್ವಾನ ರವಾನೆಯಾಗಿಲ್ಲ.
ಸಲ್ಮಾನ್ ಸಹೋದರಿಯರೂ ಕೂಡ ಕತ್ರೀನಾ ಅವರಿಂದ ಯಾವುದೇ ಆಮಂತ್ರಣ ಸ್ವೀಕರಿಸಿಲ್ಲ. ಈ ವಿವಾಹ ಸಮಾರಂಭದಲ್ಲಿ ಸಲ್ಮಾನ್ ಖಾನ್ ಕುಟುಂಬ ಭಾಗವಹಿಸಲಿದೆ ಎಂಬುದು ಸುಳ್ಳು ಎಂದು ಕುಟುಂಬದ ಮೂಲಗಳು ತಿಳಿಸಿದೆ.