ಕತ್ರೀನಾ ಕೆನ್ನೆಯಂಥಾ ರಸ್ತೆ ಮಾಡ್ತೀವಿ: ಗುಧಾ

ಜೈಪುರ, ನ. ೨೫- ಬಾಲಿವುಡ್ ನಟಿ ಕತ್ರೀನಾ ಕೈಪ್ ಅವರ ಕೆನ್ನೆಯಂತೆ ರಸ್ತೆಗಳನ್ನು ಮಾಡ್ತೀನಿ ಅಂತ ರಾಜಸ್ಥಾನದ ಸಚಿವರೊಬ್ಬರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
‘ನೋಡುತ್ತಾ ಇರಿ. ನಮ್ಮ ತಾಲೂಕಿನ ರಸ್ತೆಗಳನ್ನು ಹೇಗೆ ಮಾಡಿಸುತ್ತೇವೆ ಅಂತ. ಸದ್ಯದಲ್ಲೇ ಅವು ಬಾಲಿವುಡ್ ನಟಿ ಕತ್ರಿನಾ ಕೈಫ್ ಕೆನ್ನೆಯಂತೆ ನಯವಾಗಿರಲಿವೆ’- ಹೀಗೆಂದು ರಾಜಸ್ಥಾನದ ನೂತನ ಸಚಿವ, ಗುಧಾ ಕ್ಷೇತ್ರದ ಶಾಸಕ ಸಚಿವ ರಾಜೇಂದ್ರ ಗುಧಾ, ತಮ್ಮ ಕ್ಷೇತ್ರದ ಜನರಿಗೆ ಆಶ್ವಾಸನೆ ನೀಡಿದ್ದಾರೆ!
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ರ ಸಂಪುಟ ಪುನಾರಚನೆ ವೇಳೆ, ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ರಸ್ತೆಗಳ ದುಃಸ್ಥಿತಿ ಬಗ್ಗೆ ಸಾರ್ವಜನಿಕರು ಪ್ರಸ್ತಾಪಿಸಿದಾಗ ಅವರು ಹೀಗೆ ಉತ್ತರಿಸಿದರು. ಅದಕ್ಕೆ ಬೆಂಬಲಿಗರಿಂದ ಚಪ್ಪಾಳೆಯ ಸ್ವಾಗತವೂ ಸಿಕ್ಕಿದೆ.
ಕೆಲ ವರ್ಷಗಳ ಹಿಂದೆ ರಾಜಕೀಯ ನಾಯಕರು ಬಾಲಿವುಡ್ ನಟಿ, ಸಂಸದೆ ಹೇಮಮಾಲಿನಿ ಕೆನ್ನೆಯಂತೆಯೇ ರಸ್ತೆ ನಿರ್ಮಿಸುವ ವಾಗ್ಧಾನ ನೀಡಿದ್ದರು.