ಕತ್ರೀನಾ ಎದರು ವಿಜಯ್ ಸೇತುಪತಿ

ಮುಂಬೈ,ಜ.೧೨- ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ತಮಿಳು ನಟ ವಿಜಯ್ ಸೇತುಪತಿ ಜೊತೆಯಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಶ್ರೀರಾಮ್ ರಾಘವ್ ಮುಂದಿನ ಸಿನಿಮಾದಲ್ಲಿ ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪತಿ ಒಟ್ಟಿಗೆ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
ವಿಜಯ್ ಈಗಾಗಲೇ ‘ಮುಂಬೈಕರ್ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಕತ್ರಿನಾ ಕೈಫ್ ಜೊತೆಗೆ ಹೊಸ ಸಿನಿಮಾಕ್ಕೆ ಸಹಿ ಹಾಕಲಿದ್ದಾರೆ.
ಅಮೀರ್ ಖಾನ್ ಜೊತೆಗೆ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಜಯ್ ಸೇತುಪತಿ ಆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುದು ಖಚಿತವಾಗಿದೆ.