ಕತ್ತೆ ಚಳುವಳಿಗೆ ಅಡ್ಡಿಪಡಿಸಿದ ಪೊಲೀಸ್ ಇಲಾಖೆಃ ಆಮರಣ ಉಪವಾಸ ಆರಂಭ

ವಿಜಯಪುರ, ಡಿ.29-ಮುರಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತದಿಂದ ವಂಚನೆಗೊಳಗಾದ ಗ್ರಾಹಕರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದ ನಿಮಿತ್ಯವಾಗಿ ಇಂದು ಹಮ್ಮಿಕೊಂಡಿದ್ದ ಕತ್ತೆ ಚಳುವಳಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಧರಣಿ ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸಿ ಕತ್ತೆ ಚಳುವಳಿಗೆ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಗ್ರಾಹಕರ ಮದ್ಯೆ ಮತ್ತು ಪೊಲಿಸ್ ಇಲಾಖೆಯ ಸಿಬ್ಬಂದಿಗಳ ನಡುವೆ ಮಾತಿನ ವಾಗ್ವಾದ ನಡೆಯಿತು.
ಕತ್ತೆಗಳ ಮೇಲೆ ಅನುಕಂಪ ತೋರಿಸಿದರೆ ವಿನಃ ಹಣ ಕಳೆದುಕೊಂಡವರ ಗ್ರಾಹಕರ ಬಗ್ಗೆ ಕಿಂಚಿತ್ತು ಗಮನ ಹರಿಸಲಿಲ್ಲ. ಪ್ರಾಣ ಹತ್ಯೆ ಸಾಕಷ್ಟು ನಡೆಯುತ್ತಿದ್ದರೂ ಅದರ ಕಡೆಗೆ ಗಮನ ಹರಿಸುತ್ತಿಲ್ಲ. ಪ್ರಾಣಿಗಳನ್ನು ದಿನನಿತ್ಯ ಹತ್ಯೆ ಮಾಡುವದನ್ನು ತಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕತ್ತೆ ಚಳುವಳಿ ಕೈಬಿಟ್ಟು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆಮರಣ ಉಪವಾಸವನ್ನು 29-12-2020 ರಿಂದ ಪ್ರಾರಂಭಿಸಲು ನಿರ್ಧಾರ ಕೈಗೊಳ್ಳಲಾಯಿತು.