ಕತ್ತೆಗಳೂ ಮೂಸಿ ನೋಡದ ತಂಬಾಕನ್ನು ಮನುಷ್ಯರು ಸೇವಿಸುವುದು ಸರಿಯಲ್ಲ: ಅರವಿಂದ ಕುಲಕರ್ಣಿ

ಬೀದರ:ಜೂ.2:ತಂಬಾಕು ಬೆಳೆಯುವ ಹೊಲದಲ್ಲಿ ಕತ್ತೆಯನ್ನು ಬಿಟ್ಟರೆ ಅದು ಕೂಡ ತಂಬಾಕಿನ ಬೆಳೆಯ ಮೂಸಿ ನೋಡಲು ಇಚ್ಛೆ ಪಡುವುದಿಲ್ಲ. ಆದರೆ ಮನುಷ್ಯರಾದ ನಾವು ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಉಪಯೋಗಿಸುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ತಂತ್ರಜ್ಞ ಅಧಿಕಾರಿಯಾದ ಅರವಿಂದ ಕುಲಕರ್ಣಿಯವರು ಬೇಸರ ವ್ಯಕ್ತ ಪಡಿಸಿದರು. ಅವರು ಇಂದು ಬೀದರ್ ನಗರದ ಬರೀಶಾಹಿ ಉದ್ಯಾನದಲ್ಲಿ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಜಂಟಿ ಸಹಯೋಗ ದಲ್ಲಿ ಆಚರಿಸಲಾದ “”ತಂಬಾಕು ರಹಿತ (ವಿರೋಧಿ) ದಿನಾಚರಣೆ” ಯಲ್ಲಿ ಮಾತನಾಡುತ್ತಿದ್ದರು.
ತಂಬಾಕಿನ ಉತ್ಪನ್ನದ ಬಳಕೆಯಿಂದ ಕ್ಯಾನ್ಸರ್, ಹೃದಯದ ರಕ್ತನಾಳದ ಕಾಯಿಲೆ, ಹಲ್ಲುಗಳ ಕಲೆ, ಹಲ್ಲಿನ ಕೊಳೆತ, ನಾಲಿಗೆ, ಧ್ವನಿಪಟ್ಟಿಗೆ ಮತ್ತು ಗಂಟಲ ಕುಳಿ, ಹೊಟ್ಟೆ ಪಿತ್ತಕೋಶ, ಮೂತ್ರಕೋಶ, ಗರ್ಭಕಂಠ/ ಗರ್ಭಾಶಯ ಮತ್ತು ಶ್ವಾಸಕೋಶದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುವುದರಿಂದ, ಬೀಡಿ, ಸಿಗ ರೇಟು, ಗುಟ್ಕಾ ಸೇವನೆಗಳಿಂದ ದೂರವಿರಬೇಕೆಂದು ಜನತೆಗೆ ಕರೆ ನೀಡಿದರು. ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ರವರು ಮಾತನಾಡಿ, 1987 ರಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿ Wಊಂ ಯಲ್ಲಿ 40.38 ರ ನಿರ್ಣಯ ವನ್ನು ಅಂಗೀಕರಿಸಿ, ದಿನಾಂಕ 7.4.1988 ರಂದು “ವಿಶ್ವ ಧೂಮಪಾನ ನಿಷೇಧ ದಿನ” ಎಂದು ಘೋಷಿಸಲಾಯಿತು. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಜನತೆಗೆ ಮನ ಮುಟ್ಟುವಂತೆ ತಿಳಿಸುವ ಉದ್ದೇಶದಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ 2003 ಅಡಿಯಲ್ಲಿ, ಸರಕಾರಗಳು ಹಾಗೂ ಸಂಘ-ಸಂಸ್ಥೆಗಳು ಪ್ರತಿ ವರ್ಷ ಮೇ 31ರಂದು ತಂಬಾಕು ನಿಷೇಧ/ ವಿರೋಧಿ ದಿನಾಚರಣೆ ಯನ್ನು ಆಯೋಜಿಸಿ, ಜನ ಜಾಗೃತಿ ಮೂಡಿಸುತ್ತಲೇ ಇವೆ. ಆದಾಗ್ಯೂ ಪ್ರಪಂಚದ ಅಭಿವೃದ್ಧಿಶೀಲ ದೇಶಗಳಲ್ಲಿ ತಂಬಾಕಿನ ಬಳಕೆಯು ವರ್ಷ ದಿಂದ ವರ್ಷಕ್ಕೆ ಏರಿಕೆ ಯಾಗುತ್ತಲೇ ಇರುವುದು ಖೇದಕರವಾದ ಸಂಗತಿ ಯಾಗಿದ್ದು, ಮಹಿಳೆಯರೂ ತಂಬಾಕು ಸೇವನೆಯ ದಾಸರಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದರು. ಹಿರಿಯ ನ್ಯಾಯ ವಾದಿಗಳಾದ ಗಂಗಪ್ಪ ಸಾವಳೆಯವರು ಮಾತ ನಾಡಿ, ಹಿರಿಯ ನಾಗರಿಕರು ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಯುವಕರಿಗೆ ಹಾಗೂ ಜನರಿಗೆ ತಿಳುವಳಿಕೆ ಮೂಡಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸಿಗರೇಟು ದಹನವನ್ನು ಮಾಡಲಾಯಿತು.
ಬರೀದಶಾಹಿ ಗಾರ್ಡನ್ ನಲ್ಲಿರುವ ಸಂದೇಶ ಭೋಸಲೆ,ಶಿವರಾಮ, ಗಣಪತರಾವ, ಸೂಜಾಲ್,ಸುದೀಪ, ಚಂದ್ರಕಾಂತ, ರಾಜಪ್ಪ, ಬಂಡೆದ್ದು, ಹನ್ನುಮಿಯಾ, ಶಿವಾನಂದ ಸ್ವಾಮಿ, ತುಕಾ ರಾಮ ಸೇರಿದಂತೆ ಅನೇಕ ಜನರು ಹಾಜರಿದ್ದರು.