ಕತ್ತು ನೋವು ಕಾಡುತ್ತಿದೆಯೇ ಇಲ್ಲಿದೆ ಪರಿಹಾರ

ಇತ್ತೀಚಿಗೆ ಹಲವಾರು ಮಂದಿ ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ ಯಾಕೆಂದರೆ ಕಚೇರಿಯಲ್ಲಿ ಕುಳಿತು ದಿನದಲ್ಲಿ ೮ ರಿಂದ ೧೦ ತನಕ ಕೆಲಸ ಮಾಡುತ್ತಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ಸಮಸ್ಯೆಯಲ್ಲ ಆದರೂ ಇದನ್ನು ನಾವು ನಿರ್ಲಕ್ಷಿಸುವಂತಿಲ್ಲ ಇದು ಮುಂದೆ ನಮ್ಮನ್ನು ನಿರಂತರವಾಗಿ ಕಾಡಬಹುದು.

ಕತ್ತು ನೋವಿಗೆ ಹಲವಾರು ಕಾರಣಗಳಿವೆ. ನೀವು ಸರಿಯಾದ ಭಂಗಿಯಲ್ಲಿ ಮಲಗದಿದ್ದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ತಲೆ ದಿಂಬು ಸರಿಯಾಗಿಲ್ಲದಿದ್ದರೂ ಈ ನೋವು ಬರುತ್ತದೆ ಮತ್ತು ತಲೆ ದಿಂಬು ಹೆಚ್ಚು ಎತ್ತರವಾಗಿ ಇಟ್ಟುಕೊಂಡಲ್ಲಿ ಸಹ ಕಾಣಿಸಿಕೊಳ್ಳುತ್ತದೆ.

ಕಚೇರಿಯಲ್ಲಿ ನೀವು ಒಂದೇ ಕಡೆ ಕುಳಿತು ತಲೆ ಬಗ್ಗಿಸಿ ಕೆಲಸ ಮಾಡಿದರೂ ಈ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ಒತ್ತಡ ಹೆಚ್ಚಾದಾಗಲೂ ಈ ಸಮಸ್ಯೆ ಬರುತ್ತದೆ.

ಕತ್ತಿನ ಮೇಲೆ ಭಾರ ಎತ್ತುವಾಗ ಸ್ನಾಯುಗಳಿಗೆ ಆಯಾಸವಾಗಿ ಅಥವಾ ಉಳುಕಿ ಕತ್ತು ನೋವು ಬರುವ ಸಾಧ್ಯತೆ ಉಂಟು.

ಇನ್ನು ಹಲವಾರು ರೀತಿಯ ಕಾರಣಗಳಿಂದ ನಿಮಗೆ ಕತ್ತು ನೋವು ಬರಬಹುದು ಆದ್ದರಿಂದ ಈ ರೀತಿಯಾಗಿ ಮಾಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಅತಿಯಾಗಿ ತಲೆ ದಿಂಬನ್ನು ಅಂದರೆ ಎತ್ತರದ ದಿಂಬು ಬಳಸಬೇಡಿ. ಕತ್ತು ನೋವಿಗೆ ನೀವು ಪ್ರತಿದಿನ ಬೆಳಗ್ಗೆ ೫ ರಿಂದ ೧೦ ನಿಮಿಷಗಳ ಕಾಲ ವ್ಯಾಯಾಮವನ್ನು ಮಾಡಿ ಅದರಿಂದ ನೋವು ನಿವಾರಿಸಿಕೊಳ್ಳಬಹುದು .

ಕತ್ತು ನೋವು ವಿಟಮಿನ್ ಡಿ ಕೊರತೆಯಿಂದ ಬರುವ ಸಾಧ್ಯತೆ ಇರುವುದರಿಂದ ಈ ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಿ. ಹೀಗೆ ನಾವು ಮಾಡುವುದರಿಂದ ಕತ್ತು ನೋವಿಗೆ ಪದೇ ಪದೇ ವೈದ್ಯರ ಬಳಿ ಹೋಗಿ ಹಣ ಖರ್ಚು ಮಾಡುವ ಬದಲು ನಾವೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.