ಕತ್ತು ಕೊಯ್ದು ವೃದ್ಧನ ಕೊಲೆ

ಇಂಡಿ,ಸೆ.17-ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಕತ್ತು ಕೊಯ್ದು ವೃದ್ಧನ ಕೊಲೆ ಮಾಡಲಾಗಿದೆ.
ಶಿವಯೋಗಪ್ಪ ಬಡಿಗೇರ (55) ಕೊಲೆಯಾದವರು.
ಜಮೀನಿನಲ್ಲಿ ಮಲಗಿದ್ದ ಶಿವಯೋಗಪ್ಪ ಅವರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಗೆ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದು ಇಂಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.