ಕತ್ತಿ ಸಚಿವ ಸ್ಥಾನಕ್ಕೆ ಯೋಗ್ಯರಲ್ಲ,ಕೂಡಲೇ ರಾಜೀನಾಮೆ ನೀಡಲಿ

ಮುದ್ದೇಬಿಹಾಳ:ಎ.29: ಸಧ್ಯ ರಾಜ್ಯದಲ್ಲಿ ರೇಷನ್ ನಲ್ಲಿ 5 ಕೇ ಜಿ ಬದಲಾಗಿ 3 ಕೇಜಿ ಅಕ್ಕಿ ನೀಡಲಾಗುತ್ತದೆ ಮೊದಲೆ ಲಾಕ್ ಡೌನ್ ಬಿದ್ದಿದೆ ಇಂತಹ ಸಂದರ್ಭದಲ್ಲಿ ಹೇಗೆ ನಾವು ಬದುಕ ಬೇಕಾ ಇಲ್ಲಾ ಸಾಯಬೇಕಾ ಎಂದು ಸಾರ್ವಜನಿಕರೊಬ್ಬರು ರಾಜ್ಯದ ಆಹಾರ ಸಚೀವ ಉಮೇಶ ಕತ್ತಿವರನ್ನು ಪ್ರಶ್ನೀಸಿದರೇ ಅವರುನ್ನು ನೀವು ಸಾಯುತ್ತಿದ್ದರೆ ಸತ್ತು ಬಿಡಿ ಎಂದು ಮಾನವಿಯತೆ ಇಲ್ಲದೇ ಈ ರೀತಿ ಬೇಜವ್ದಾರಿ ಉತ್ತರ ನೀಡಿದ್ದಲ್ಲದೇ ತಾವೋಬ್ಬ ಈ ರಾಜ್ಯ ಉತ್ತನಸ್ಥಾನದ ಸಚೀವರಾಗಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಈ ಕೂಡಲೇ ಸಚೀವ ಉಮೇಶ್ ಕತ್ತಿಯವರು ಸಚೀವ ಸ್ಥಾನಕ್ಕೆ ಯೋಗ್ಯರಲ್ಲ ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ ಹೇಳಿದರು.

ಪಟ್ಟಣದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೋರೊನಾ ಎರಡನೆ ಅಲೇ ಅಬ್ಬರಿಸಿದಲ್ಲದೇ ಜನರು ಸಾವು ನೋವುಗಳ ಮದ್ಯೆ ನೆಮ್ಮದಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪನವರು ಯಾವೂದೇ ಮುನ್ಸೂಚನೆ ಇಲ್ಲದೇ ಲಾಕ್ ಡೌನ ಹೇರಕೆ ಮಾಡಿದ್ದಾರಲ್ಲದೇ ಎಷ್ಟೋ ಜನ ಉದ್ಯೋಗ ಕಳೆದಕೊಂಡಿದ್ದಾರೆ ಜತೆಗೆ ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳು ಸಲುವಾಗಿ ತೀವ್ರ ಸಂಕಷ್ಟ ಪಡುವಂತಾಗಿದೇ. ಈ ಸಂದರ್ಭದಲ್ಲಿ ಸಚೀವ ಉಮೇಶ ಕತ್ತಿಯವರು ಬಡವರ ಮಾತಿಗೆ ವ್ಯಂಗಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ.

ಸಚೀವ ಉಮೇಶ ಕತ್ತಿಯವರೊಬ್ಬ ಬ್ಲಾಕ್ ಮೇಲೆ ರಾಜಕಾರಿಣಿಯಾಗಿದ್ದಾರೆ ಅವರಿಗೆ ಸಚೀವ ಸ್ಥಾನ ಕೊಡದೇ ಇರುವಾಗ ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪನವರನ್ನು ಬ್ಲಾಕ್ ಮೇಲೆ ಮಾಡಿ ಸಚೀವ ಸ್ಥಾನ ಪಡೆದಿದ್ದಾರೆ ವಿನಃ ಇವರಗೆ ಜನ ಸೇವೆ ಮಾಡುವ ಯಾವ ಲಕ್ಷಣಗಳು ಇವರಲ್ಲಿಲ್ಲ ಇದರಿಂದಲೇ ಗೊತ್ತಾಗುತ್ತಿದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಸಂಪೂಣ ವಿಫಲವಾಗಿದೆ ಕೋರೊನಾದಲ್ಲೂಂತೂ ಆಡಳಿತ ನಡೆಸಲು ಸಹÀ ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದ್ದಾರೆ.