ಕತ್ತಿ ವರಸೆಗೆ ಕೈ-ದಳ ಕೆಂಡಾಮಂಡಲ ಸಂಪುಟದಿಂದ‌ ವಜಾಕ್ಕೆ ಆಗ್ರಹ

ಬೆಂಗಳೂರು,ಏ.28- ಪಡಿತರ ಅಕ್ಕಿ ಕಡಿಮೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಸಿದ ಜನ ಸಾಮಾನ್ಯ ನನ್ನು ” ಹೋಗಿ ಸಾಯಿ ” ಎನ್ನುವ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಟೀಕೆ, ಖಂಡನೆ ವ್ಯಕ್ತ ವಾಗಿದೆ.

ಜೊತೆಗೆ ಕಾಂಗ್ರೆಸ್, ಹಾಗು ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವ ಉಮೇಶ್ ಕತ್ತಿ ಅವರನ್ನು ಸಚಿವ ಸಂಪುಟದಿಂದ‌ ಕಿತ್ತೊಗೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ನಾಚಿಕೆ ಆಗುವುದಿಲ್ಲವೇ?

ಪಡಿತರ ಅಕ್ಕಿ‌ಎರಡು ಕೆ.ಜಿ‌‌ ಕಡಿಮೆ ಮಾಡಿದ ವ್ಯಕ್ತಿಯೋರ್ವನನ್ನು ಸಾಯಿ ಹೋಗು ಎಂದು ಹೇಳುವ ಮೂಲಕ ಸಚಿವ ಉಮೇಶ್ ಕತ್ತಿ ದರ್ಪ ತೋರಿದ್ದಾರೆ.ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

ಕೊರೋನಾ ಸಂಕಷ್ಟದ ಕಾಲದಲ್ಲಿ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಬೇಕಾದ ಸಚಿವರ ಬೇಜಬವ್ದಾರಿ ಹೇಳಿಕೆ ಖಂಡನೀಯ, ಸಚಿವ ಸ್ಥಾನದಲ್ಲಿ ‌ಮುಂದುವರಿಯಲು ಅವರು ಅರ್ಹರಿಲ್ಲ ಎಂದು ಹರಿಹಾಯ್ದಿದ್ದಾರೆ.

ಜವಬ್ದಾರಿ ಸಚಿವರಾಗಿ ಬೇಜವಬ್ದಾರಿಯಿಂದ ವರ್ತಿಸಿದ ಸಚಿವರ ನಡೆ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗುವಂತಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಕೆ.ಜಿ ಅಕ್ಕಿ ಯಾಕೆ‌ ಕಡಿಮೆ ಮಾಡಿದ್ದೀರಿ ಎಂದು ಕೇಳುವುದು ತಪ್ಪಾ ಪ್ರಶ್ನೆ ಕೇಳಿದವರನ್ನು ಸಾಯಿ ಎಂದ ಸಚಿವ ಉಮೇಶ್ ಕತ್ತಿ ಕ್ಷಣ ಮಾತ್ರದಲ್ಲಿ‌ ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಕಿಡಿ ಕಾರಿದ್ದಾರೆ.

ಎಚ್.ಡಿಕೆ ಆಕ್ರೋಶ:

ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ‌ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವುದು ಅತ್ಯಂತ ಅಮಾನವೀಯ ಎಂದು ಕಿಡಿಕಾರಿದ್ದಾರೆ.

ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಖಂಡನಾರ್ಹ, ಜನಸಾಮಾನ್ಯರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.