ಕತ್ತಿ ನಿಧನಕ್ಕೆ ಹಲವರ ಸಂತಾಪ


ಬಳ್ಳಾರಿ:ಸೆ.7- ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಜಿಲ್ಲೆಯ ಹಲವು ಗಣ್ಯರು ಸಂತಾಪ ಕೋರಿದ್ದಾರೆ.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ,  ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಂತಾಪ ಸಂದೇಶ ಕಳುಹಿಸಿ. ಕತ್ತಿ ಅವರು ಅತಿ ಚಿಕ್ಕ ವಯಸ್ಸಿನಿಂದಲೇ ಶಾಸಕರಾಗಿ ಮೂರುವರೆ ದಶಕಗಳ ಕಾಲ ಜನಪ್ರತಿನಿಧಿಯಾಗಿ ಜನ ಸೇವೆ ಮಾಡಿದ್ದರು. ಬೆಗಾವಿ ಜಿಲ್ಲೆಯ ಜನರ ಮೆಚ್ಚನ ನಾಯಕರಾಗಿದ್ದ ಅವರು ಹಾಸ್ಯ ಸ್ವಭಾವದಿಂದ ಎಲ್ಲ ರೊಡನೆ ಪಕ್ಷಾತೀತವಾಗಿ  ಬೆರೆತು ಸ್ನೇಹ ಜೀವಿಯಾಗಿದ್ದರು. ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.