ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ

ಕಾಗವಾಡ :ನ.9: ಎಲ್ಲೆಡೆ ಅಶಾಂತಿ, ಅಸಮಾಧಾನ, ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಆದರ್ಶ, ಮಾನವೀಯ ಮೌಲ್ಯಗಳ ಸಂರಕ್ಷಣೆಯ ಅಗತ್ಯವಿದ್ದು, ಸಾಮಾಜಿಕ ಮೌಲ್ಯಗಳ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಗೊಳಿಸಲು ಸಾದ್ಯ ಎಂದು ಶ್ರೀ ಶಿವಲಿಂಗ ಶಿವಾಚಾರ್ಯ
ಮಹಾಸ್ವಾಮಿಗಳು ಬೆಳ್ಳಂಕಿ ಮಹಾಸ್ವಾಮಿಗಳು ನುಡಿದರು.
ಕಾಗವಾಡ ತಾಲುಕಿನ ಮಂಗಸೂಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಭವ್ಯ ಪ್ರಾಂಗಣದಲ್ಲಿ ಸೋಮವಾರ ಕಾರ್ತಿಕ ಮಾಸದ ನಿಮಿತ್ಯ ದಶ ಸಹಸ್ರ ದೀಪೆÇೀತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಶೀರ್ವಚನ ನೀಡಿದ ಅವರು ಮನುಷ್ಯನ ಜೀವನದಲ್ಲಿ ಹಣಗಳಿಕಯೊಂದೇ ಪ್ರಗತಿಗೆ ಕಾರಣವಾಗದು, ಹಣದಿಂದ ಔಷಧಿ ಕೊಳ್ಳಬಹುದು, ಆದರೆ ಆರೋಗ್ಯ ಕೊಳ್ಳಲಾಗದು, ಹಣದಿಂದ ಹಾಸಿಗೆ ಕೊಳ್ಳಬಹುದು, ನಿದ್ರೆ ಕೊಳ್ಳಲಾಗದು, ಹಣದಿಂದ ಆಹಾರ, ವಸ್ತು, ಪುಸ್ತಕ, ಮನೆ, ಕೊಳ್ಳಬಹುದು, ಜ್ಞಾನ, ಮನಶಾಂತಿ, ಮತ್ತು ಸತ್ಯವನ್ನು ಕೊಳ್ಳಲಾಗದೆಂದರು.

ಕೌಲಗುಡ್ಡದ ಪಪೂ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಮಂಗಸೂಳಿ ಗ್ರಾಮದಲ್ಲಿ ಜಾತಿ, ಮತ, ಪಂತಗಳನ್ನು ಮೀರಿ ಸರ್ವ ಸಮಾಜ ಬಾಂಧವರು ಅಪ್ಪಿಕೊಂಡು ನಡೆಸುತ್ತಿರುವ ಈ ದಶ ಸಹಸ್ರ ದೀಪೆÇೀತ್ಸವ ಹೆಮ್ಮೆಯ ಸಂಗತಿ ಎಂದರು. ಈ ಕ್ಷೇತ್ರದಲ್ಲಿ ಆಚರಿಸುವ ದೀಪೆÇೀತ್ಸವದಂತಹ ಧಾರ್ಮಿಕ ಆಚರಣೆಗಳಿಂದ ವಿಶೇಷವಾದ ಪುಣ್ಯವು ಪ್ರಾಪ್ತಿಯಾಗುತ್ತದೆ. ಒಂದೇ ಸ್ಥಾನವನ್ನು ಆಶ್ರಯಿಸಿಕೊಂಡು ಆಚರಿಸುವ ಧಾರ್ಮಿಕ ಸತ್ಕಾರ್ಯಗಳಿಗೆ ಅನುಷ್ಠಾನವೆಂದು ಕರೆಯುತ್ತಾರೆ. ನಿಸ್ವಾರ್ಥ ಭಾವದಿಂದ ಮತ್ತು ದೃಢವಾದ ಶ್ರದ್ಧೆಯಿಂದ ಪುಣ್ಯಕಾರ್ಯಗಳನ್ನು ಮಾಡುವುದರಿಂದ ಆತ್ಮಶಾಂತಿ ಹಾಗೂ ಲೋಕಕಲ್ಯಾಣ ಎರಡೂ ಉಂಟಾಗುತ್ತವೆ ಎಂದರು.
ಈ ವೇಳೆ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿಯ ಅಧ್ಯಕ್ಷ ಚಿದಾನಂದ ಮಾಳಿ ಕಳೆದ ಹಲವಾರು ವರ್ಷಗಳಿಂದ ನಡೆದು ಬಂದ ಧಾರ್ಮಿಕ ಪರಂಪರೆ ಕುರಿತು ಸುದೀರ್ಗವಾಗಿ ಮಾತನಾಡುತ್ತ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ದೇಣಿಗೆ ನೀಡಿದ ಎಲ್ಲ ಸದ್ಭಕ್ತರನ್ನು ಸ್ವಾಗತಿಸಿಕೊಂಡು ಮಾರ್ಮಿಕವಾಗಿ ಮಾತನಾಡಿದರು.
ಈ ವೇಳೆ ಮಾಜಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಪುಜಾರಿ, ಸಂಜಯ ತಳವಲಕರ ಅವರು ಶ್ರೀಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಧಾರ್ಮಿಕ ಪರಂಪರೆ ಕುರಿತು ಮಾತನಾಡಿದರು. ಈ ವೇಳೆ ಹಲವಾರು ಜನ ದಾನಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿದರು.
ನಂತರ ಪುಜ್ಯರು ದೇವಾಲಯದಲ್ಲಿ ದೀಪ ಹಚ್ಚುವ ಮೂಲಕ ದೀಪೆÇೀತ್ಸಕ್ಕೆ ಚಾಲನೆ ನೀಡಿದರು. ನಂತರ ನೂರಾರು ಸದ್ಬಕ್ತರು ದೀಪ ಬೆಳಗಿಸಿ ಸಂಬ್ರಮಿಸಿದರು. ನಂತರ ಮಹಾಪ್ರಸಾದ ಮತ್ತು ವಿವಿಧ ಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಿತು..
ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿಯ ಅಧ್ಯಕ್ಷ ಚಿದಾನಂದ ಮಾಳಿ, ರವೀಂದ್ರ ಪುಜಾರಿ, ಸಂಜಯ ತಳವಲಕರ, ಅಭಯ ಪಾಟೀಲ, ಪುಂಡಲೀಕ ಪಾಟೀಲ, ಪ್ರಕಾಶ ಮಾಳಿ ಮಾತನಾಡಿದರು.
ಈ ವೇಳೆ ಪ್ರವೀಣ ಮಾಳಿ, ರಾಮು ಮಾಳಿ, ಪರುಶರಾಮ ಮಾಳಿ, ರಾಜು ಮಾಳಿ, ವಿಷ್ಣು ಮಾಳಿ, ಸುರೇಶ ಕುಂಬಾರ, ಸಂಗಮೇಶ ಕಾಮೇರಿ, ಸಂಜಯ ತೇಲಿ, ಶಶಿಕಾಂತ ತೇಲಿ, ಅಮೂಲ ಮಾಳಿ, ಶ್ರೀಕಾಂತ ಪುಜಾರಿ, ಪ್ರವೀಣ ಪುಜಾರಿ, ವಿಠ್ಠಲ ಮಾಳಿ, ಓಂಕಾರ ಮಾಳಿ, ಸುಶಾಂತ ಮಾಳಿ, ಸಂತೋಷ ಮಾಳಿ, ಉಮೇಶ ಮಾಳಿ, ಮಹೇಶ ಮಾಳಿ, ಮಲ್ಲಿಕಾರ್ಜುನ ಕಾಮೇರಿ, ಅಕ್ಷಯ ಮಾಳಿ, ಗುಂಡು ಮಾಳಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.


ಭಗವಂತ ಏನೆಲ್ಲವನ್ನು ಕೊಟ್ಟಿದ್ದರೂ ಮನುಷ್ಯನಿಗೆ ತೃಪ್ತಿ ಇಲ್ಲ. ಭೌತಿಕ ಸಂಪತ್ತಿನ ವ್ಯಾಮೋಹವೇ ಇದಕ್ಕೆ ಕಾರಣ. ಸತ್ಯ ಶುದ್ದವಾದ ಮಾರ್ಗದಲ್ಲಿ ಮುನ್ನಡೆಸುವುದೇ ಗುರುವಿನ ಕರ್ತವ್ಯ. ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುದೇ ನಿಜವಾದ ಧರ್ಮದಿಂದ ನಡೆಯಬೇಕು
ಶ್ರೀ ಶಿವಲಿಂಗ ಶಿವಾಚಾರ್ಯ
ಮಹಾಸ್ವಾಮಿಗಳು ಬೆಳ್ಳಂಕಿ