ಕತ್ತಲೆಯಿಂದ ಬೆಳಕಿನೆಡೆಗೆ ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ದೀಪ ಪ್ರಜ್ವಲನ:ರುದ್ರಮುನಿ ಶಿವಾಚಾರ್ಯರು

ಬೀದರ:ಡಿ.9: ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ವತಿಯಿಂದ ದೀಪ ಪೂಜನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ ಷ.ಬ್ರ.ಡಾ|| ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ ಇವರು ಮಾತನಾಡುತ್ತಾ ಒಂದು ಶಿಕ್ಷಣ ಸಂಸ್ಥೆಯಲ್ಲಿ ದೀಪ ಪೂಜನ ಕಾರ್ಯಕ್ರಮ ವಿಶೇಷವಾಗಿದೆ ಈ ಕುಂಬಾರ ಮಾಡಿರುವ ಹಣತ್ತೆಯಲ್ಲಿನ ದೀಪ ಶಾಶ್ವತವಾಗಿದೆ. ನಮ್ಮಲಿರುವ ಅಂಧಕಾರವನ್ನು ಅಳಿಸಿ ಬೇಳಕುಮೂಡಿಸುವುದು ಈ ದೀಪವನ್ನು ಕಣ್ಣಿನಿಂದ ನೋಡಿದಾಗ ಒಂದು ಶಕ್ತಿ ಸಂಚಾರವಾಗುವುದು. ನಮ್ಮ ಪ್ರತಿಯೊಂದು ಆಚರಣೆಗಳು ವೈಜ್ಞಾನಿಕ ಕಾರಣಗಳನ್ನು ಹೊಂದಿವೆ. ದೀಪ ಪೂಜನ ಕಾರ್ಯಕ್ರಮ ಸಮಾಜದಲ್ಲಿ ಸಂಸ್ಕøತಿ, ಆಚಾರ, ವಿಚಾರ ತರುವಂತೆ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಮಾಡುತ್ತಿದೆ. ದೀಪಕ್ಕೆ ಜಾತಿ, ಮತ, ಪಂಥ ಯಾವುದು ಇಲ್ಲ ಅದು ಬೇಳಕು ಮಾತ್ರ ನೀಡುವುದು. ನಾವು ನಿವೆಲ್ಲರೂ ಈ ದೀಪದಂತೆ ಬಾಳೋಣ ಎಂದು ಹರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿರುವ ಸಂಸ್ಥೆಯ ಅಧ್ಯಕ್ಷರಾದ ಪೆÇ್ರೀ. ಎಸ್.ಬಿ. ಸಜ್ಜನ ಶೆಟ್ಟಿ ಇವರು ಮಾತನಾಡುತ್ತಾ ಈ ದೀಪ ಪೂಜನ ಕಾರ್ಯಕ್ರಮವನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಚರಿಸುತ್ತೇವೆ. ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ ದೀಪ ಪ್ರಜ್ವಲಿಸಿಯೇ ಪ್ರಾರಂಭಿಸುವ ಸಂಪ್ರದಾಯ ನಮ್ಮದಾಗಿದೆ. ಆಚರಣೆಗಳು ಸನಾತನ ಕಾಲದಿಂದ ಇಂದಿನ ವರೆಗೂ ರೂಡಿಯಲ್ಲಿವೇ ಈ ದೀಪ ಪ್ರಜ್ವಲನ ಉತ್ತಮ ಸಮಾಜಕ್ಕಾಗಿ ಹಾಗೂ ದೇಶದ ಒಳಿತಿಗಾಗಿ ಒಳ್ಳೆಯ ವಾತಾವರಣ ನಿರ್ಮಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಹನುಮಂತರಾವ ಪಾಟೀಲ ಹಾಗೂ ಸಂಸ್ಥೆಯ ಸದಸ್ಯರಾದ ನಾರಾಯಣರಾವ ಮುಖೇಡಕರ ದಂಪತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಪರಿಚಯ ಮಾತೃಭಾರತಿಯ ಮಾತೆಯರಾದ ಶ್ರೀಮತಿ ಮಾಣಿಕೇಶ್ವರಿ ಪಾಟೀಲ ಇವರು ಮಾಡಿದರು. ವೈಯಕ್ತಿಕ ಗೀತೆ ಶ್ರೀಮತಿ ರಮಾ ಕುಲಕರ್ಣಿ ಹಾಡಿದರು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಜ್ಯೋತಿ ಕುಂಬಾರ, ವಂದನಾರ್ಪಣೆ ಶ್ರೀಮತಿ ಸುಧಾ ಕಲ್ಲಪ್ಪಾ ಇವರು ಮಾಡಿದರು.