ಕತ್ತಲೆಯಾದ ಛಾಯಾಗ್ರಾಹಕನ ಬದುಕು

ಆಲಮೇಲ:ನ.2:ಕರೋನಾ ಅಟ್ಟಹಾಸ ವ್ಯಾಪಕವಾಗಿ ಹರಡುತ್ತಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಾಕ್‍ಡೌನ್ ಮಾಡಿದ್ದರಿಂದ ಫೋಟೋ ಗ್ರಾಪರ್ ವೃತ್ತಿ ಸಂಪೂರ್ಣ ಸ್ಥಗಿತಗೊಂಡಿತು, ವೃತ್ತಿಯನ್ನೆ ನಂಬಿಕೊಂಡು ಹಲವಾರು ಕುಟುಂಬಗಳು ಬದುಕುತ್ತಿದ್ದವು ಆದರೆ ಅವು ಈಗ ಸಂಕಷ್ಟಕ್ಕೆ ಒಳಗಾಗಿವೆ ನಮ್ಮ ಬದುಕಿಗೆ ಆಸರೆ ನೀಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಆಲಮೇಲ ವಲಯ ಛಾಯಾ ಚಿತ್ರಕಾರರ ಸಂಘದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
ರಾಜ್ಯ ಛಾಯಾವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ,ವಿವಿಧ ಬೇಡಿಕೆಗಳನ್ನು ಈಡೇರಿಸಲು ಬೃಹತ್ ಪ್ರತಿಭಟನೆಗೆ ಬೆಂಬಲಿಸಿ ಕರ್ನಾಟಕ ರಾಜ್ಯದಾದ್ಯಂತ ಛಾಯಾಗ್ರಹಣದ ಉದ್ಯಮ ಬಂದ್ ಕರೆಗೆ ಆಲಮೇಲದ ಫೋಟೋ ಗ್ರಾಪರ್ಸ್ ಸಂಘದ ವತಿಯಿಂದ ಉಪ ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿ ಮಾತನಾಡಿದರು.
ಕರೋನಾದಿಂದ ಅನೇಕ ವೃತ್ತಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಅದರಲ್ಲಿ ಛಾಯಾ ಚಿತ್ರಕಾರ ವೃತ್ತಿಯೂ ಒಂದು. ಸಂಕಷ್ಟದಲ್ಲಿದ್ದ ವೃತ್ತಿಕಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರ ನೀಡಿದೆ ಆದರೆ ಛಾಯಾ ಗ್ರಾಹಕ ವೃತ್ತಿದಾರರನ್ನು ಕಡೆಗಣಿಸಿರುವದು ಖಂಡನೀಯ.ಸುಮಾರು 4 ತಿಂಗಳ ಕಾಲ ಛಾಯಾ ಗ್ರಾಹಕನ ವೃತ್ತಿ ಸಂಪೂರ್ಣ ಸ್ಥಗಿತಗೊಂಡು ಅದನ್ನೆ ನಂಬಿಕೊಂಡ ಕುಟುಂಬಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಒದಗಿಸಿ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದರು.

ಉಪ ತಹಶೀಲ್ದಾರ ಪರವಾಗಿ ಗ್ರಾಮ ಲೆಕ್ಕಾಧಿಕಾರಿ ಗುರುರಾಜ ಗತಾಟೆ ಮನವಿ ಸ್ವೀಕರಿಸಿ ಮಾತನಾಡಿ ಸರ್ಕಾರಕ್ಕೆ ಈ ಮನವಿ ಸಲ್ಲಿಸಲಾಗುವದು ಎಂದು ಹೇಳಿದರು. ಪ್ರಭು ನಲವಡೆ, ಅಂಬೋಜಿ ಬಂಡಗಾರ, ಸಿದ್ದು ಪಾಲವೆ, ಹಣಮಂತ ಬಂಡಗಾರ, ನಾಗರಾಜ ಆಳೂರ, ಶಿವರಾಜ ನಲವಡೆ,ಪಂಡಿತ ಬಿರಾದಾರ,ಅವಧೂತ ಬಂಡಗಾರ, ಕೊರಳ್ಳಿಯ ಪ್ರಭಾತ ಸ್ಟುಡಿಯೋ ಸೇರಿದಂತೆ,ಗುಂದಗಿ,ಬಳಗಾನೂರ,ಬಮ್ಮನಹಳ್ಳಿ,ದೇವಣಗಾಂವ,ಗುಡ್ಡಳ್ಳಿ ವಿವಿಧ ಗ್ರಾಮದ ಛಾಯಾಗ್ರಾಹಕರು ಇದ್ದರು.