ಕತ್ತಲುಮಯವಾದ ಪೊಲೀಸ್ ಠಾಣೆ ಆವರಣ

ಸಿರವಾರ.ಮಾ೨೮- ಪಟ್ಟಣಕ್ಕೆ ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆಯ ಮುಂಭಾಗ, ಆವರಣ ಕತ್ತಲು ಆವರಸಿದರೂ, ಒಂದೇ ಒಂದು ಲೈಟ್ ಬೆಳಕು ಅಳವಡಿಸುವಲಿ ಪೊಲೀಸರು ವಿಫಲರಾಗಿದ್ದಾರೆಂಬುದು ಸಾರ್ವಜನಿಕರ ಆರೋಪವಾಗಿದೆ.
ಸಿರವಾರ ಠಾಣೆಯು ದೊಡ್ಡ ಠಾಣೆಯಾಗಿದೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಪೊಲೀಸ್ ಠಾಣೆ ಇದೆ. ಆದರೆ ಠಾಣೆ ಮುಂಭಾಗ, ದ್ವಾರ, ಆವರಣದಲ್ಲಿ ಒಂದೇ ಒಂದು ಲೈಟ್ ಇಲ್ಲದೆ ಕತ್ತಲುಯವಾಗಿರುವದಿಂದ ಅಕ್ರಮ ಚಟುವಟಿಕೆಗೆ ಸಹಾಯವಾಗುತ್ತದೆ. ರಾತ್ರಿಯಾದರೆ ಸಾಕು ಠಾಣೆಯ ಮುಂಭಾಗ ಕತ್ತಲು ಮಯವಾಗುತ್ತದೆ. ಸಂಜೆ- ರಾತ್ರಿ ವೇಳೆಯಲ್ಲಿ ಪೊಲೀಸರು ಠಾಣೆಯ ಮುಂಭಾಗದಲ್ಲಿ ವಾಹನಗಳ ತಪಾಸಣೆ ಮಾಡುತ್ತಾರೆ. ರಾತ್ರಿಯಾಗಿರುವ ಕಾರಣ ಯಾರು ಏನು ಮಾಡುತ್ತಿದ್ದಾರೆಂಬುದು ಗೊತ್ತಾಗುವುದಿಲ್ಲ ಎಂಬುದು ಸಾರ್ವಜನಿಕರ ಹೇಳುತ್ತಾರೆ.
ಸಿರವಾರ ಪೊಲೀಸ್ ಠಾಣೆ ಎಂಬ ನಾಮಪಲಕದಲ್ಲಿಯೂ ಲೈಟ್‌ಗಳು ಇಲ್ಲಾ, ಮುಖ್ಯದ್ವಾರದ ನಾಮಪಲಕವು ಸಹ ಬಣ್ಣ ಮಾಸಿಹೊಗಿದ್ದರೂ ಠಾಣೆಯ ಪಿಎಸ್‌ಐ ಗೆ ಕಾಣುತ್ತಿಲವೆ ಎಂದು ಪ್ರಶ್ನಿಸುತ್ತಾರೆ. ಇನ್ನೂ ಠಾಣೆಯ ಮುಂಭಾಗದಲ್ಲಿ ಅನೇಕ ದಿನಗಳಿಂದ ಸಿಸಿ ಕ್ಯಾಮರ ಅಳವಡಿಸಲಾಗಿದೆ. ರಾತ್ರಿ ವೇಳೆ ಕತ್ತಲಿನಲ್ಲಿ ಚಿತ್ರಣ ಹೇಗೆ ಮುದ್ರಿತವಾಗುತ್ತದೆ. ಠಾಣೆಯ ಮುಂಭಾಗದಿಂದಲೇ ಮರಳು ತುಂಬಿರುವ ಲಾರಿ, ಟ್ರ್ಯಾಕ್ಟರ್ ಹೊಗುತ್ತವೆ ಅದು ಮುದ್ರಣವಾಗಬಾರದೆಂದು ಲೈಟ್‌ಗಳನ್ನು ಹಾಕಿಸದೆ ಈ ರೀತಿ ಕತ್ತಲು ಮಾಡಲಾಗಿದೆ ಎಂದು ಸಾರ್ವಜನಿಕರು ಗುಸುಗುಸು ಮಾತನಾಡುತ್ತಾರೆ. ಬೇಗ ಠಾಣೆಯು ಬೆಳಕುಮಯವಾಗಲೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.