ಕತ್ತಲಿನಿಂದ ಬೆಳಕಿನತ್ತ ಸಾಗುತ್ತಿರುವ ಬೇಡ ಜಂಗಮ ಸಮಾಜ

ವಿಜಯಪುರ ಜು.18- ಬಬಲೇಶ್ವರ ಸಂಪೂರ್ಣ ಬೇಡ ಜಂಗಮರು ಬಬಲೇಶ್ವರ ಗ್ರಾಮದಲ್ಲಿ ದಿನಾಂಕ 16-07-2022ರಂದು ಮಮದಾಪೂರ ವಿರಕ್ತ ಮಠದದಲ್ಲಿ ಪೂರ್ವ ಭಾವಿ ಸಭೆ ಜರುಗಿತು. ಬೆಂಗಳೂರಿನಲ್ಲಿ ನಡೆಯುವ ಸತ್ಯಾಗ್ರಹ ಪಾಲ್ಗೊಳ್ಳಲು ಸಮಸ್ತ ಬಬಲೇಶ್ವರ ತಾಲೂಕಿನಿಂದ 500 ಜನ ಬೆಂಗಳೂರಿಗೆ ತೆರಳಲು ತಯಾರ ನಡೆಸುವ ಬಗ್ಗೆ ಸಭೆ ಜರುಗಿತ್ತು. ಸಭೆಯಲ್ಲಿ ಬೇಡ ಜಂಗಮ ಸಮಾಜದವರು ಕತ್ತಲಿನಿಂದ ಬೆಳಕಿನತ್ತ ಹೋಗಲು ಸಂಕಲ್ಪ ಮಾಡಬೇಕೆಂದು ಮಮದಾಪೂರದ ಬೇಡ ಜಂಗಮ ಮುಖಂಡ ಸದಾಶಿವಯ್ಯ ಕಾಖಂಡಕಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇನ್ನೋರ್ವ ಚನ್ನಬಸಯ್ಯ ಹಿರೇಮಠ ವೀರಶೈವ ಲಿಂಗಾಯತ ಸೌಹಾರ್ದದ ಉಪಾಧ್ಯಕ್ಷ ಬೇಡ ಜಂಗಮ ಸಮಾಜದ ಪ್ರಮಾಣ ಪತ್ರಕ್ಕಾಗಿ ಪ್ರೀಡಂ ಪಾರ್ಕ್ ಬೆಂಗಳೂರಲ್ಲಿ ನಡೆಯುವ ವ್ಹಿ.ಡಿ. ಹಿರೇಮಠ ನೇತೃತ್ವದ ಸತ್ಯಾಗ್ರಹಕ್ಕೆ ತೆರಳಲು ಸಮಸ್ತ ಬೇಡ ಜಂಗಮರು ಸ್ವಯಂ ಪ್ರೇರಿತವಾಗಿ ಬರಬೇಕೆಂದು ಪ್ರತಿ ತಾಲೂಕಿನಿಂದ ಸುಮಾರು 500 ಜನ ಬೇಡ ಜಂಗಮರು 131-7-2022ರಂದು ಬೆಂಗಳೂರಿಗೆ ಹೋಗಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸಮಾಜದ ಏಳ್ಗೆಗಾಗಿ ಶ್ರಮವಹಿಸಬೇಕೆಂದು ಕರೆ ನೀಡಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಂತಹ ಬೇಡ ಜಂಗಮ ಹಕ್ಕನ್ನು ಪ್ರಮಾಣ ಪತ್ರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದ್ದು, ಇದಕ್ಕೆ ಸಮಾಜದ ಸಮಸ್ತ ಬೇಡ ಜಂಗಮದವರು ಒಟ್ಟಾಗಿ ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದರು.
ಬೇಡ ಜಂಗಮ ಸಮಾಜದ ಪ್ರಮುಖ ಪ್ರಭುಸ್ವಾಮಿ ಹಿರೇಮಠ ಜೈನಾಪೂರ ಇವರು ಮಾತನಾಡಿ, ಬಬಲೇಶ್ವರ ತಾಲೂಕಿನಲ್ಲಿ ಬರುವಂತಹ ಸುಮಾರು 7ರಿಂದ 8 ಸಾವಿರ ಬೇಡ ಜಂಗಮ ಮತದಾರರಿದ್ದು, ಬೇಡ ಜಂಗಮರ ಸಮಸ್ಯೆಗೆ ಸರ್ಕಾರ ತೀವ್ರ ಗತಿಯಲ್ಲಿ ಸ್ಪಂಧನೆ ಮಾಡಬೇಕು ಮತ್ತು ಬೇಡಿಕೊಂಡು ತಿನ್ನುವ ಬೇಡ ಜಂಗಮರ ಸಮಸ್ಯೆಗೆ ಸರ್ಕಾರ ತೀವ್ರ ಗತಿಯಲ್ಲಿ ಪ್ರಮಾಣ ಪತ್ರ ನೀಡಲು ಸರಳಿಕರಣ ಗೊಳಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಮದಾಪುರದ ಮಠದ ಪಿಠಾಧಿಕಾರಿಗಳಾದ ಮುರುಘೇಂದ್ರ ಮಹಾಸ್ವಾಮಿಗಳು ವಿರಕ್ತಮಠ, ಮುಖ್ಯಅತಿಥಿಯಾಗಿ ಆಗಮಿಸಿದ ಅಡವಿ ಸಿದ್ಧೇಶ್ವರ ಶಿವಾಚಾರ್ಯ ಜಂಬಗಿ, ವಿವೇಕಾನಂದ ದೇವರು ಹಿರೇಮಠ ಗುಣದಾಳ, ಜಿಲ್ಲಾ ಬೇಡ ಜಂಗಮ ಸಮಾಜದ ಎಸ್.ಎಸ್. ಹಿರೇಮಠ, ಕಾಖಂಡಕಿಯ ನಿಜಲಿಂಗಯ್ಯ ಹಿರೇಮಠ, ಕೋಲ್ಹಾರ ಚಂದ್ರಶೇಖರಯ್ಯ ಘನಕುಮಾರ, ಪಡದಯ್ಯ ಹಿರೇಮಠ, ದಯಾನಂದ ಧಾರವಾಡಮಠ, ಬಸಲಿಂಗಯ್ಯ ಗಡ್ಡದೇವರಮಠ, ಕಣಬೂರದ ಬೇಡ ಜಂಗಮ ಯುವ ನಾಯಕ ಚಿಕ್ಕಯ್ಯ ಮಠದ, ಬಸಲಿಂಗಯ್ಯ ಗಡ್ಡದ ಮಠ, ತೊರವಿಯ ಚನ್ನಬಸಯ್ಯ ಹಿರೇಮಠ ಇತರರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸದಾಶಿವಯ್ಯ ಕಾಖಂಡಕಿಮಠ, ಬಸಲಿಂಗಯ್ಯ ಗಡ್ಡದಮಠ ವಂದಿಸಿದರು.