ಕತ್ತಲಾದರೂ ಮತ ಎಣಿಕೆ ಕೇಂದ್ರದಿಂದ ತೆರಳದ ಜನರು: ಪೊಲೀಸರಿಂದ ಲಘು ಲಾಠಿ ಪ್ರಹಾರ

ಕಲಬುರಗಿ:ಡಿ.30: ರಾತ್ರಿಯಾದರೂ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ ನೂರಾರು ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಚ್ ಮಾಡಿದ್ದಾರೆ. ಕಲಬುರಗಿ ತಾಲೂಕಿನಲ್ಲಿ ಮತ ಏಣಿಕೆಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಗುರುತಿಸಲಾಗಿತ್ತು. ಕೇಂದ್ರದ ಮುಂಭಾಗ ಬೆಳಗ್ಗೆಯಿಂದಲೇ ಜನಸಂದಣಿ ಏರ್ಪಟ್ಟಿತ್ತು.
ಇತ್ತ ಸಂಜೆಯಾದರೂ ಜನ ತೆರಳದೇ ಅಲ್ಲಿಯೇ ನಿಂತಿದ್ದರು. ಹೀಗಾಗಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದು, ಜನರನ್ನು ಚದುರಿಸುವ ಕಾರ್ಯ ಮಾಡಿದ್ದಾರೆ. ಇಷ್ಟಾದರೂ ಜನ ಮಾತ್ರ ಕೇಂದ್ರದ ಬಳಿಯಿಂದ ಕೊಂಚ ದೂರು ತೆರಳಿ ನಿಂತಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.