ಕತ್ತಲಲ್ಲಿ ದಸರಾ ಆಚರಣೆ: ಡಿಸಿಗೆ ಪತ್ರ

ವಾಡಿ:ಅ.28: ಬದುಕಿನ ಕತ್ತಲೆಯನ್ನು ಕಳೆದು ಜೀವನಕ್ಕೆ ಹೊಸ ಚೈತನ್ಯವನ್ನು ನೀಡುವ ಸಾಂಪ್ರದಾಯಿಕ ಹಬ್ಬವಾದ ದಸರಾ ಕೋಟ್ಯಾಂತರ ಹಿಂದೂಗಳ ನಂಬಿಕೆ, ಆದರೆ ನಿನ್ನೆ ವಾಡಿ ಪಟ್ಟಣದ ದಸರಾ ಆಚರಣೆ ಕಗ್ಗತ್ತಲಿಗೆ ಸಾಕ್ಷಿಯಾಗಿತ್ತು. ಈಗಿನ ಪುರಸಭೆಯ ಆಡಳಿತ ವ್ಯವಸ್ಥೆಯ ಹಿಂದೂ ವಿರೋಧಿ ಆಡಳಿತಕ್ಕೆ ಕೈಗನ್ನಡಿಯಾಗಿದೆ ಈಗಾಗಲೇ ಪಟ್ಟಣದಲ್ಲಿ ಕರೋನದಿಂದ, ಭೀಕರ ಮಳೆಯಿಂದ ತುಂಬಾ ಅನಾನುಕೂಲ ಅನುಭವಿಸುತ್ತಿರುವ ಜನ ಸರಳ ಹಬ್ಬವನ್ನು ಸಹ ಕತ್ತಲಲ್ಲಿ ಭಯದ ವಾತಾವರಣದಲ್ಲಿ ಆಚರಿಸುವಂತಾಯಿತು ಎಂದು ಆರೋಪಿಸಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಈ ಮೇಲ ಮೂಲಕ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರಿಗೆ ಪತ್ರ ಬರೆದಿದ್ದಾರೆ. ಪ್ರಮುಖ ಚೌಕ ಗಳಾದ ಆಜಾದ್ ಚೌಕ, ಬಸವೇಶ್ವರ್ ಚೌಕ್ ,ಗುಡಿ ಚೌಕ್, ಶಿವಾಜಿ ಚೌಕ್ ಇತ್ಯಾದಿ ಚೌಕಗಳನ್ನು ಹೊಂದಿದ ಬೃಹತ್ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ದೀಪಗಳನ್ನು ಇದ್ದರೂ ಸಹ ಅದನ್ನು ರಿಪೇರಿ ಸರಿಪಡಿಸುವ ಗೋಜಿಗೆ ಹೋಗದೆ ಜನಸಾಮಾನ್ಯರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ, ಕರ್ತವ್ಯಪ್ರಜ್ಞೆ ಮೆರೆಯದೆ ಬೇಜವಬ್ದಾರಿತನದಿಂದ ಪುರಸಭೆ ಆಡಳಿತ ವ್ಯವಸ್ಥೆ ಕೂಡಿದ್ದು , ಕಳೆದ ತಿಂಗಳು ಪಟ್ಟಣದಲ್ಲಿ ಹಾವು ಕಚ್ಚಿ ಬಾಲಕಕ ಮೃತ ಪಟ್ಟಿದ್ದರು, ಇಂತಹ ಅನೇಕ ಘಟನೆಗಳು ಘಟ್ಟಿಸಿದರು ಪುರಸಭೆ ಇನ್ನೂ ಜಾಗೃತ ಆಗದೇ ಇರುವುದು, ಇಂಥ ಒಂದು ಅವ್ಯವಸ್ಥಿತ ಆಡಳಿತಕ್ಕೆ ಆಡಳಿತ ಪಕ್ಷದ ಪುರಸಭೆ ಸದಸ್ಯರೇ ಆರೋಪಿ ಸುವಂತಾಗಿದೆ, ತಾವುಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಆಡಳಿತ ವ್ಯವಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪಟ್ಟಣದ ಜನಕಾಳಜಿ ಆಡಳಿತ ನೀಡುವಂತ ಕ್ರಮಕ್ಕೆ ಮುಂದಾಗುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಈ ರೀತಿಯಾದ ಯಾವುದೇ ಧರ್ಮದ ಆಚರಣೆಗೆ ನಿರ್ಲಕ್ಷ ವಯಿಸುವಂತಹ ಆಡಳಿತ ನಾವು ಎಂದೂ ಸಹಿಸುವುದಿಲ್ಲ ಇದೇ ರೀತಿ ಮುಂದುವರಿದರೆ, ನಾವು ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಎಂದು ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಕಾರ್ಯದರ್ಶಿ ವೀರಣ್ಣ ಯಾರಿ, ಪುರಸಭೆ ವಿರೋಧ ಪಕ್ಷದ ನಾಯಕ ಪ್ರಕಾಶ ನಾಯಕ, ಎಸ್‍ಸಿ ಮೋರ್ಚಾ ತಾಲ್ಲೂಕ ಅಧ್ಯಕ್ಷ ರಾಜು ಮುಕ್ಕಣ್ಣ, ಹರಿ ಗಲಾಂಡೆ ಎಚ್ಚರಿಕೆ ನೀಡಿದ್ದಾರೆ.