ಕತಾರ್‌ನಲ್ಲಿ ಗುಂಡಿಕ್ಕಿ ೨೯ ಶ್ವಾನಗಳ ಹತ್ಯೆ


ದೋಹಾ,ಜು.೨೨- ಗುಂಡಿಕ್ಕಿ ೨೯ ನಾಯಿಗಳ ಮಾರಣಹೋಮ ಮಾಡಿರುವ ಹೃದಯವಿದ್ರಾವಕ ಘಟನೆ ದೋಹಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಂಪೌಂಡ್ ಒಳಗೆ ಕೂಡಿಹಾಕಿ ಮರಿಗಳ ಸಹಿತ ನಾಯಿಮರಿಗಳನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೊಲ್ಲಿ ಒಕ್ಕೂಟದ ರಾಷ್ಟ್ರ ಕತಾರ್‌ನಲ್ಲಿ ಈ ಅಮಾನುಷ ಘಟನೆ ನಡೆದಿದೆ. ಈ ಪೈಶಾಚಿಕ ಕೃತ್ಯದ ಗ್ಗೆ ಪ್ರಾಣಿದಯಾ ಸಂಘಟನೆಯ ಕಾರ್ಯಕರ್ತರು ಮತ್ತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಮನಕಲಕುವ ಘಟನೆ ಬಹಿರಂಗವಾಗಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೋಹಾದ ಕಾರ್ಖಾನೆಯೊಂದರ ಗೇಟ್‌ನೊಳಗೆ ನಾಯಿಗಳನ್ನು ಕೂಡಿಹಾಕಿ ಶ್ವಾನಗಳಿಗೆ ಆಹಾರ ನೀಡುವ ವೇಳೆ ಈ ಹತ್ಯೆ ಮಾಡಲಾಗಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.
ಘಟನೆಯಲ್ಲಿ ಮೂರು ನಾಯಿಗಳು ತೀವ್ರವಾಗಿ ಗಾಯಗೊಂಡಿದ್ದು, ೨ ನಾಯಿಗಳು ಗರ್ಭಧರಿಸಿದ್ದವು ಎಂದು ಹೇಳಲಾಗಿದೆ. ಈ ಬೀಭತ್ಸ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆಯಿಂದಷ್ಟೇ ಮಾಹಿತಿ ಹೊರ ಬರಬೇಕಾಗಿದೆ.
ಇಸ್ಲಾಂ ಧರ್ಮದಲ್ಲಿ ನಾಯಿಗಳನ್ನು ಅಶುದ್ಧ ಎಂದು ಪರಿಗಣಿಸಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪ್ರಾಣಿದಯಾ ಸಂWದ ಹೋರಾಟಗಾರರು ಸಂಶಯ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯಲ್ಲಿದ್ದ ಭದ್ರತಾಪಡೆಯ ಬಳಿ ತೆರಳಿ ನಮ್ಮ ಮಗುವಿಗೆ ನಾಯಿ ಕಚ್ಚಿದೆ ಎಂಬ ನೆಪ ಹೇಳಿ ಒಳ ಪ್ರವೇಶಿಸಿ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಮತ್ತೋರ್ವ ಪ್ರಾಣಿದಯಾ ಕಾರ್ಯಕರ್ತ ತಿಳಿಸಿದ್ದಾರೆ.
ಈ ಶ್ವಾನಗಳ ಮಾರಣಹೋಮದ ಬಗ್ಗೆ ಕತಾರ್ ಆಡಳಿತ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಈ ಘಟನೆಯ ಬಗ್ಗೆ ಖಂಡನೆಯಷ್ಟೆ ವ್ಯಕ್ತವಾಗಿದೆ.