ಕಣ್ಸನ್ನೆಯ ಹುಡುಗಿ ಪ್ರೀತಿಯ ಹಿಂದೆ ಶ್ರೇಯಸ್

“ಪಡ್ಡೆಹುಲಿ” ಚಿತ್ರದ ಬಳಿಕ ನಟ ಶ್ರೇಯಸ್ ಪ್ರೀತಿಯ ಹಿಂದೆ ಬಿದ್ದಿದ್ದಾರೆ ಅದಕ್ಕಾಗಿ “ವಿಷ್ಣು ಪ್ರಿಯ” ಸಹಕಾರ ಪಡೆದಿದ್ದಾರೆ.

ಕಣ್ಸನ್ನೆಯ ಮೂಲಕ ರಾತ್ರೋರಾತ್ರಿ ಜನಪ್ರಿಯವಾದ ಪ್ರಿಯಾ ಪ್ರಕಾಶ್ ವಾರಿಯರ್ ಅವರೊಂದಿಗೆ ಶ್ರೇಯಸ್ ಪ್ರೀತಿ ಮಾಡಲು ಮುಂದಾಗಿದ್ದಾರೆ

ಆಶ್ಚರ್ಯವಾಗುವುದು ಬೇಡ‌. ಶ್ರೇಯಸ್ ನಟಿಸುತ್ತಿರುವ ಹೊಸ ಚಿತ್ರದ ಹೆಸರು “ವಿಷ್ಣು ಪ್ರಿಯಾ”.

ನಿರ್ಮಾಪಕ ಕೆ ಮಂಜು ಅವರು ಪುತ್ರನಿಗಾಗಿ  ನಿರ್ಮಾಣ ಮಾಡಿರುವ ಚಿತ್ರ ಇದು. ಕಳೆದ ವಾರ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವಿತ್ತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ,ನಿರ್ದೇಶಕ ಇಂದ್ರಜಿತ್ ಲಂಕೇಶ್ ,ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಅನೇಕರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ಅವರು ಟ್ರೈಲರ್ ಚೆನ್ನಾಗಿ ಮೂಡಿಬಂದಿದೆ. ನಟ ಶ್ರೇಯಸ್ ಮತ್ತು ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

ಕನ್ನಡ , ಮಲಯಾಳಂ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರ ನಿರ್ದೇಶನ ಮಾಡಿರುವ ವಿ.ಕೆ ಪ್ರಕಾಶ್ ವಿಷ್ಣುಪ್ರಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಕೆ ಮಂಜು, ನಮ್ಮ ಬ್ಯಾನರ್ ನಲ್ಲಿ ಮೊದಲ ಬಾರಿಗೆ ಮಗನ ಚಿತ್ರ ನಿರ್ಮಾಣ ಮಾಡಿದ್ದೇನೆ. ಚಿತ್ರಕ್ಕಾಗಿ ನೂರರಿಂದ 125 ಕಥೆಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಬೆಳಗಾವಿಯಿಂದ ಹುಡುಗಿಯೊಬ್ಬಳು ನೀಡಿದ ಕಥೆಆಯ್ಕೆ ಮಾಡಿಕೊಂಡು ಚಿತ್ರೀಕರಣ ಮಾಡಲಾಗಿದೆ.1990ರಲ್ಲಿ ನಡೆಯುವ ನೈಜ ಪ್ರೇಮಕಥೆಯನ್ನು ಸಿನೆಮಾರೂಪಕ್ಕೆ ತರಲಾಗಿದೆ ಎಂದು ಅವರು ಹೇಳಿದರು.

ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನೀಡಿದ್ದು ವಿನೋದ್ ಭಾರತಿ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಅಥವಾ ಜೂನ್ ತಿಂಗಳಲ್ಲಿ ಚಿತ್ರವನ್ನು ತೆರೆಯ ಮೇಲೆ ತರುವ ಉದ್ದೇಶವಿದೆ ಎಲ್ಲರ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು.

ನಿರ್ದೇಶಕ ವಿ.ಕೆ ಪ್ರಕಾಶ್ ಮಾತನಾಡಿ ಕನ್ನಡದಲ್ಲಿ ಇದು ಎರಡನೇ ಚಿತ್ರ .ಒಳ್ಳೆಯ ತಂಡ ಸಿಕ್ಕಿದೆ ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಕಲಾವಿದರಿಗೆ ಹತ್ತು ದಿನಗಳ ಕಾಲ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು ಇದು ಚಿತ್ರೀಕರಣಕ್ಕೆ ಸಹಕಾರಿಯಾಯಿತು. ಕನ್ನಡ ಚಿತ್ರರಂಗ ಇತ್ತೀಚಿಗೆ ಗಡಿದಾಟಿ ಮುನ್ನುಗುತ್ತಿದೆ ಇದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದರು.

ನಟ ಶ್ರೇಯಸ್, ಮಾತನಾಡಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ ಮೊದಲ ಸಿನಿಮಾಗಿಂತ ಈ ಸಿನಿಮಾದಲ್ಲಿ ಮತ್ತಷ್ಟು ತಪ್ಪುಗಳನ್ನು ತಿದ್ದಿಕೊಂಡು ನಟಿಸಿದ್ದೇನೆ ಚಿತ್ರ ಜೀವನಕ್ಕೆ ಮತ್ತೊಂದು ಹೆಜ್ಜೆ ಮೇಲೇರಲು ಚಿತ್ರ ಸಹಕಾರಿಯಾಲಿದೆ ಎಂದರು.

ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಆನಂದ್ ಆಡಿಯೋ ಶ್ಯಾಮ್ ಮಾಹಿತಿ ಹಂಚಿಕೊಂಡರು. ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಅಚ್ಚುತ್ ಕುಮಾರ್ ,ಅಶ್ವಿನಿ ಗೌಡ,ಸೇರಿದಂತೆ ಕಿರುತೆರೆಯ ಕಲಾವಿದರ ದೊಡ್ಡ ದಂಡೇ ಇದೆ.