ಕಣ್ಮರೆಯಾಗುತ್ತಿರುವ ಜನಪದ ಸಂಸ್ಕøತಿ ಕಷ್ಟಪಟ್ಟು ಉಳಿಸಿ:ಕೆ. ಎಚ್. ಚನ್ನೂರ್

ಕಲಬುರಗಿ:ಆ.6:ಇಂದಿನ ದಿನಗಳಲ್ಲಿ ಜನಪದ ಸಂಸ್ಕೃತಿ ಮತ್ತು ಸಾಹಿತ್ಯ ಕಣ್ಮರೆಯಾಗುತ್ತಿದೆ.ಬೆಳೆಯುತ್ತಿರುವ ನಾಗರಿಕ ಸಂಸ್ಕೃತಿಯಲ್ಲಿ ಜನಪದ ಸಂಸ್ಕೃತಿ ಮರೆಮಾಚಿ ಹೋಗುತ್ತಿದೆ.ಅದನ್ನು ಕಷ್ಟಪಟ್ಟು ಉಳಿಸಬೇಕಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಅಕಾಡೆಮಿ ಅದಕ್ಕಾಗಿ ಶ್ರಮಿಸುತ್ತಿವೆ ಎಂದು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕರಾದ ಕೆ ಎಚ್.ಚನ್ನೂರ ಹೇಳಿದರು. ಅವರು ಶ್ರೀ ಪುಟ್ಟರಾಜ ಸಾಂಸ್ಕೃತಿಕ ಕಲಾ ಅಭಿವೃದ್ದಿ ಸಂಸ್ಥೆಯು ಗೋಕುಲ ನಗರ ಮಹಾಂತ ಜ್ಯೋತಿ ಪ್ರತಿಷ್ಟಾಪನದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಏರ್ಪಡಿಸಿದ ಕಲ್ಯಾಣ ಕರ್ನಾಟಕ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟಿಸಿ ಮಾತನಾಡುತ್ತಿದ್ದರು.ಸರ್ಕಾರ ನೀಡುವ ಅನುದಾನದಲ್ಲಿ ಇಂತಹ ಅದ್ಬುತವಾದ ಕಾರ್ಯಕ್ರಮ ಏರ್ಪಡಿಸಿದ್ದು, ಸಂಸ್ಥೆಯ ಘನತೆಯನ್ನು ಎತ್ತಿ ತೋರಿಸುತ್ತದೆ. ಇದೆ ರೀತಿ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳು ಆಯೋಜಿಸಬೇಕೆಂದು ಸಲಹೆ ನೀಡಿದರು.
ಪರಮಪೂಜ್ಯ ಶ್ರೀ ಜಗದ್ಗುರು ಡಾ ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿಗಳು ಶ್ರೀಶೈಲಂ, ಸುಲಫಲ್ ಮಠ, ಕಲಬುರಗಿ ದಿವ್ಯ ಸಾನಿಧ್ಯವಹಿಸಿದ್ದರು.ಶ್ರೀ ಸಾ ಶಿ ಬೇನಕನಹಳ್ಳಿ ಹಿರಿಯ ಪತ್ರಕರ್ತರು ಉದ್ಘಾಟಿಸಿದರು. ಕಲಬುರಗಿ ಜಿಲ್ಲಾ ಗಾಣಿಗರ ನೌಕರರ ಸಂಘದ ಅಧ್ಯಕ್ಷರಾದ ಸಂಗಣ್ಣಗೌಡ ಪಾಟೀಲ ಅಧ್ಯಕ್ಷತೆಯ ಸ್ಥಾನ ವಹಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ದತ್ತಪ್ಪ ಸಾಗನೂರ, ಕಲಬುರಗಿ ಜಿಲ್ಲಾ ಬಿ ಜೆ ಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಭಾಗಿರಥಿ ಗುನ್ನಾಪೂರ, ಶ್ರೀಮತಿ ಮಹಾದೇವಿ ಎಸ್ ಪಾಟೀಲ, ಆಲಗೂಡ, ಗೋಕುಲ ನಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷರು,ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಈ ಸಂದರ್ಭದಲ್ಲಿ ಶರಣಬಸವರಾಜ ಸೋಮಶೇಖರ ಉಪ್ಪಿನ ಹಾಗೂ ಪಿ ಎಸ್ ಮಠ ವಕೀಲರು ಬಂದರವಾಡ ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದತ್ತರಾಜ ಕಲಶೆಟ್ಟಿ ಸಂಸ್ಥೆಯ ಅಧ್ಯಕ್ಷರು, ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಗುರುಶಾಂತಯ್ಶಾ ಸ್ಥಾವರಮಠ, ಬಾಬುರಾವ ಕೋಬಾಳ, ಅಣ್ಣರಾವ ಮತ್ತಿಮುಡು, ಸೈದಪ್ಪಾ ಸಪ್ಪನಗೊಳ, ನಾಗಲಿಂಗಯ್ಯ ಸ್ಥಾವರಮಠ, ಸೂರ್ಯಕಾಂತ ಡುಮ್ಮಾ , ಸಿದ್ದಣ್ಣ ದೇಸಾಯಿ ಕಲ್ಲೂರ್, ಮಹಾಂತಪ್ಪ ಮಂದೇವಾಲ, ಚೇತನ ಕೋಬಾಳ, ಅನಿಲ್ ಮಠಪತಿ, ಸಾಗರ್ ಭೀಮಳ್ಳಿ, ಶಿವರಾಯ ಹುಳ್ಳಿ. ಬಲಭೀಮ ನೆಲೋಗಿ.ಅನೇಕ ಕಲಾವಿದರಿಂದ ಶಾಸ್ತ್ರೀಯ ಸಂಗೀತ,ಸುಗಮ ಸಂಗೀತ, ಜಾನಪದ ಸಂಗೀತ, ತತ್ವಪದ ಗಾಯನ.ಕಾರ್ಯಕ್ರಮ ನಡೆಯಿಸಿಕೊಟ್ಟರು. ಸಭೆಯ ನಿರೂಪಣೆಯನ್ನು ಮಹಾಂತ ಜ್ಯೋತಿ ಪ್ರತಿಷ್ಟಾಪನದ ಅಧ್ಯಕ್ಷರಾದ ಶ್ರೀ ಶಿವರಾಜ ಪಾಟೀಲ ನಡೆಸಿಕೊಟ್ಟರು.