ಕಣ್ಮನ ಸೆಳೆದ ಪಾದಯಾತ್ರೆ ಜನ ಸಾಗರ

ಬೀದರಃ ಸೆ.23:ದೈವ ಕೃಪೆಯ ಆಶೀರ್ವಾದ ಸದಾ ಇರಲಿ ಎಂದು ಭಕ್ತಾದಿಗಳು ನಡೆದುಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶಿಸುವುದು ಹಿಂದಿನಿಂದ ಬಂದ ರೂಡಿ. 20ನೇ ಶತಮಾನ ಕಂಡ ಮಹಾನ್ ತಪಸ್ವಿ ಪವಾಡಪುರುಷ ಧರ್ಮರಕ್ಷಕ ದಯಾಸಿಂಧು ಶ್ರೀಮಂತ್ರ ಮಹರ್ಷಿ ಎನ್. ಬಿ.ರೆಡ್ಡಿ ಸದ್ಗುರೂಜಿ, ಲೋಕಕಲ್ಯಾಣಕ್ಕಾಗಿ ಮಾನವಧರ್ಮದ ಏಳಿಗೆಗಾಗಿ ಕೋಟಿ ಜಪ, ರುದ್ರ ಮತ್ತು ಮಹಾಯಜ್ಞ ಕಿಂತ ಶ್ರೇಷ್ಠ ಫಲ ನೀಡುವ 20ನೇ ಸದ್ಗುರುವಿನ ಭವ್ಯಪಾದಯಾತ್ರೆಗೆ ಬೀದರ್ ಜಿಲ್ಲೆ ಕರ್ನಾಟಕ ನಾಡಿನ ಮೂಲೆಮೂಲೆಗಳಿಂದ ಮತ್ತು ಸುಮಾರು 16 ಹೊರ ರಾಜ್ಯಗಳಿಂದ(ದೆಹಲಿ ,ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ,ಆಂಧ್ರ ,ಕೇರಳ ಇನ್ನಿತರ ರಾಜ್ಯಗಳಿಂದ) ಸ್ವಯಂಪ್ರೇರಿತರಾಗಿ ಕಂಡುಕೇಳರಿಯದ ಜನಸಾಗರ ಬಂದು ಸಕ್ರಿಯವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ನೋಡುವದೆ ಕಣ್ಮನ ಸೆಳೆಯುವಂತಿತ್ತು.
ಶ್ರೀಮಾನೆ ಗೋಪಾಳೆ ಬಸವಕಲ್ಯಾಣ ಪರಿವಾರದಿಂದ ಬೆಳಗ್ಗೆ 8ಗಂಟೆಗೆ ಸದ್ಗುರುಗಳ ನಿವಾಸದಲ್ಲಿ ಪಾದಪೂಜೆ ಮತ್ತು ಮಹಾಮಂಗಳಾರತಿಯ ನಂತರ ಪರಮಪೂಜ್ಯ ಸದ್ಗುರು ಗಳನ್ನು ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಗುರುಬಸವೇಶ್ವರ ಸಂಸ್ಥಾನಮಠ ಹುಲಸೂರಿನ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಮತ್ತು ಗದುಗಿನ ವಿರೇಶ್ವರ ಪುಣ್ಯಾಶ್ರಮದ ಮಹಾನ್ ತಪಸ್ವಿಗಳಾದ ಪೂಜ್ಯ ಶ್ರೀ ಕಲ್ಲ?????ಜ್ಜ ಅವರನ್ನು ಶ್ರೀ ಸಿದ್ದರಾಮಯ್ಯ ಹಿರೇಮಠ ಇವರು ಪಾದಯಾತ್ರೆ ಉದ್ಘಾಟನಾ ಸಮಾರಂಭಕ್ಕೆ ವೇದಿಕೆ ಮೇಲೆ ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಎಲ್ಲಾ ಪೂಜ್ಯರಿಗೆ ಹೃತ್ಪೂರ್ವಕವಾಗಿ ಸ್ವಾಗತ ಕೋರಿದರು ಮತ್ತು ಅವರ ಅಮೃತಹಸ್ತದಿಂದ ಸಂಜೀವಿನ ಮಂತ್ರದ ಕಾರ್ಡ್ ಬಿಡುಗಡೆ ಮಾಡಿಸಿದರು. ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಪ್ರಸ್ತಾವಿಕವಾಗಿ ಮಾತನಾಡಿ ಜಗದ್ಗುರುಗಳು ಜನರ ಕಲ್ಯಾಣಕ್ಕಾಗಿ ಮತ್ತು ಜನರ ಜೀವನದಲ್ಲಿ ಸಂತೋಷ ಶಾಂತಿ ಮತ್ತು ಸಮೃದ್ಧಿಗಳನ್ನು ತರಲು ಭೂಮಿಗೆ ಬಂದ ದೇವಮಾನವರು ಎಂದು ಬಣ್ಣಿಸಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಲ್ಲ?????ಜ್ಜನವರು ಸದ್ಗುರುಗಳು ಸಮಾಜಕ್ಕಾಗಿ ಮತ್ತು ಧರ್ಮಕ್ಕಾಗಿ ಮಾಡುತ್ತಿರುವ ಸೇವೆ ಬಣ್ಣಿಸಲು ಸಾಧ್ಯವಿಲ್ಲ ಅವರ ಜೀವನ ಸಮಾಜದ ಎಲ್ಲ ವರ್ಗದ ಜನರ ಏಳಿಗೆಗಾಗಿ ಮೀಸಲು ಎಂದು ಹೇಳಿದರು. ತದನಂತರ ಸದ್ಗುರು ಗಳನ್ನ ಭಕ್ತರಾದ ನಾಗಭೂಷಣ ಕಂಠಾಣ ಇವರು ನಾಣ್ಯಗಳಿಂದ ಮತ್ತು ಹಣ್ಣುಗಳಿಂದ ವೈಭವದ ತುಲಾಭಾರ ಮಾಡಲಾಗಿ ಸಾವಿರಾರು ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.
ನಂತರ ಗುರು ಶಂಭುಲಿಂಗ ಮಾತೆ ಬಸ್ಸಮ್ಮ ಸದ್ಗುರು ಜಿ ಮಹಾರಾಜ್ ಕೀ ಜೈ ಎಂದು ಹರ್ಷೋಲ್ಲಾಸ ದಿಂದ ಪಾದಯಾತ್ರೆ ಪ್ರಾರಂಭವಾಯಿತು ದಾರಿಯುದ್ದಕ್ಕೂ ಭಕ್ತರು ಪಾದಪೂಜೆ ಮಾಡುತ್ತ ಹೂಮಾಲೆ ಅರ್ಪಿಸಿ ದೀರ್ಘದಂಡ ನಮಸ್ಕಾರ ದೊಂದಿಗೆ ಘೋಷಗಳನ್ನು ಹಾಕುತ್ತಾ ಭಕ್ತಿಯಿಂದ ನಮಸ್ಕರಿಸುತ್ತಿದ್ದರು. ಹರ್ ಹರ್ ಮಹದೇವ್, ಓಂ ಭರಾ ಶಂಕರ ಭರಾ ,ಜಗದ್ಗುರುಜಿ ಮಹಾರಾಜ್ ಕೀ ಜೈ ಶಂಭುಲಿಂಗೇಶ್ವರ ಮಹಾರಾಜ್ ಕೀ ಜೈ, ಭಕ್ತ ಶಿರೋಮಣಿ ಬಸಮ್ಮ ಮಾತಾ ಕೀ ಜೈ ಎಂದು ಜಯಘೋಷ ಹಾಕುತ್ತಾ ಭಕ್ತರು ಡೊಳ್ಳು ಹಲಗೆ ತುರಾಯಿ ವಾದ್ಯಗಳೊಂದಿಗೆ ಮೈಮರೆತು ಕುಣಿದು ಕುಪ್ಪಳಿಸಿದರು, ಸಂಗೀತ ಕಲಾವಿದರ ತಂಡ ವಿವಿಧ ಹಾಡುಗಳು ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿದರು.
ಸಾಯಂಕಾಲ 5:00 ಗಂಟೆಗೆ ಪಾದಯಾತ್ರೆ ಸುಕ್ಷೇತ್ರ ರೇಕುಳಗಿಯ ಶಂಭುಲಿಂಗೇಶ್ವರ ಆಶ್ರಮ ತಲುಪಿತ್ತು ಭಕ್ತರು ಶಂಭುಲಿಂಗೇಶ್ವರ, ಮತ್ತು ಮಾತೆ ಬಸಮ್ಮ ತಾಯಿಯ ದರ್ಶನ ಪಡೆದು ಅಗ್ನಿಕುಂಡ ಜಲ ಕೊಂಡಕ್ಕೆ ನಮಸ್ಕರಿಸಿ ಸದ್ಗುರುಗಳನ್ನ ಹೃದಯಕಮಲದಲ್ಲಿ ಸ್ಮರಿಸಿ ಪ್ರಸಾದ ಸ್ವೀಕರಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಲೆಂದು ಬೇಡಿಕೊಂಡು ಸಂತೋಷದಿಂದ ತಮ್ಮ ಮನೆಗೆ ತೆರಳಿದರು.
ಪಾದಯಾತ್ರೆಯಲ್ಲಿ ಭಕ್ತಿ ಸೇವೆ ಸಲ್ಲಿಸಿದ ಎಲ್ಲರಿಗು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸೇವೆಸಲ್ಲಿಸಿದ ಭಕ್ತರನ್ನು ದೇವಸ್ಥಾನದ ಕಮಿಟಿ ಅಭಿನಂದನೆಗಳು ಸಲ್ಲಿಸುತ್ತದೆ.
ಹೊರ ರಾಜ್ಯದಿಂದ ಬಂದ ಅನೇಕ ಭಕ್ತರು ಮತ್ತು ಪ್ರತಿಷ್ಠಿತ ಅಧಿಕಾರಿಗಳು ಪಾದಯಾತ್ರೆ ನಮ್ಮ ಜೀವನದಲ್ಲಿ ನೋಡಿದ್ದೆ ಭಾಗ್ಯ ಎಂದು ಬಣ್ಣಿಸಿದರು.ಮತ್ತು ಯುವ ನಾಯಕರಾದ ಶ್ರೀ ಅಭಿಷೇಕ್ ಪಾಟೀಲ್, ಶ್ರೀ ದೀಪಕ್ ಸಲಗರ್, ಶ್ರೀ ಧನರಾಜ್ ತಾಡಂಪಳ್ಳಿ ಮತ್ತು ಶ್ರೀ ಶೈಲೆಂದ್ರ ಬೆಲ್ದಾಳೆ ಇವರು ಭಾಗವಹಿಸಿದರು