ಕಣ್ಮನ ಸೆಳೆದ ಆರ್‌ಪಿಎಂ ಆಟೋಮೋಟಿವ್ ಶೋ

ಶಿವಮೊಗ್ಗ, ಮಾ.12: ಬೆಂಗಳೂರಿನ ಖ್ಯಾತ ಆಟೋ ಎಕ್ಸ್‌ಪೋ ಆಯೋಜಕರಾದ ಆರ್‌ಪಿಎಂ ಕಂಪನಿಯಿಂದ ಮಾ.೧೨ರ ವರೆಗೆ ಶಿವಮೊಗ್ಗದ ಹಳೆ ಜೈಲ್ ಆವರಣದ ಫ್ರೀಡಂ ಪಾರ್ಕ್ ನಲ್ಲಿ ಆರ್‌ಪಿಎಂ ಆಟೋಮೋಟಿವ್ ಶೋ ಹಮ್ಮಿಕೊಳ್ಳಲಾಗಿದೆಶಿವಮೊಗ್ಗದಲ್ಲಿ ೨೦೧೪ ಮತ್ತು ೨೦೧೭ರಲ್ಲಿ ಆಟೋಮೋಟಿವ್ ಶೋ ಆಯೋಜಿಸಿ ಅಭೂತಪೂರ್ವ ಯಶಸ್ವಿಯ ಬಳಿಕ ಈಗ ೩ನೇ ಬಾರಿ ಆಯೋಜಿಸಲಾಗಿದ್ದು, ಈ ಶೋನಲ್ಲಿ ಪ್ರಸಿದ್ಧ ಕಂಪನಿಗಳ ಕಾರು ಹಾಗೂ ಬೈಕ್‌ಗಳ ಪ್ರದರ್ಶನ ಹಾಗೂ ಮಾರಾಟವಿದ್ದು, ಲಕ್ಸುರಿ ಕಾರ್‌ಗಳಾದ ಮರ್ಸಿಡಿಸ್ ಬೆಂಜ್ಸ್, ಬಿಎಂಡಬ್ಲ್ಯೂ, ಆಡಿ, ಜಾಗ್ವಾರ್, ರೇಂಜ್ ರೋವರ್, ಎಂ.ಜಿ.ಹೆಕ್ಟಾರ್, ಟೊಯೋಟಾ, ಮಾರುತಿ ಸುಜುಕಿ, ಸ್ಕೋಡಾ ನೆಕ್ಸಾ, ಟಾಟಾ, ಕಿಯಾ ಕಾರುಗಳು ಮತ್ತು ಸೂಪರ್ ಬೈಕ್ಗಳಾದ , ಬೆನೆಲಿ, ಕೆ.ಟಿ.ಎಂ. ಯಮಹಾ, ಏತರ್ ಮತ್ತು ವಿನೂತನ ಮತ್ತು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ವೈವಿಧ್ಯ ಎಲೆಕ್ಟ್ರಿಕ್ ಕಾರ್ ಹಾಗೂ ಬೈಕ್‌ಗಳು ಕಣ್ಮನ ಸೆಳೆದವು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಏರ್ಪಡಿಸಿರುವ ಲೈಫ್ಸ್ಟೈಲ್ ಎಕ್ಸಿಬಿಷನ್ ನಲ್ಲಿ ಸೀರೆ, ಕುರ್ತಿ, ಬೆಳ್ಳಿ ಮತ್ತು ಇಮಿಟೇಷನ್ ಆಭರಣ, ಬ್ಯಾಗ್ಗಳು ದೊರೆಯಲಿದ್ದು, ವಿಧ ವಿಧವಾದ ತಿನಿಸುಗಳನ್ನು ಸವಿಯುವ ಅವಕಾಶವಿದೆ. ಶಾಖಾಹಾರ, ಮಾಂಸಾಹಾರ, ಚಾಟ್ಸ್, ಐಸ್ಕ್ರೀಂ, ಜ್ಯೂಸ್ ಲಭ್ಯವಿದೆ. ಪ್ರವೇಶ ಶುಲ್ಕ ೫೦ ರೂ.ಇದ್ದು, ಟಿಕೇಟ್‌ನ್ನು ಅಲ್ಲೇ ಕೌಂಟರ್‌ನಲ್ಲಿ ತೆಗೆದುಕೊಳ್ಳಬಹುದಾಗಿದೆ.