ಕಣ್ಣು ಮುಚ್ಚಿ ಕುಳಿತ ಪಂಚಾಯತ್ ಅಧಿಕಾರಿಗಳು

ಐದನಾಳ ಗ್ರಾಮ : ಭಾರಿ ಮಳೆ ದಲಿತ ಕಾಲೋನಿ ಜಲಾವೃತ
ಲಿಂಗಸುಗೂರು.ಆ.೦೨- ತಾಲ್ಲೂಕಿನ ಕಾಳಾಪುರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಐದನಾಳ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸುರಿದ ಭಾರಿ ಮಳೆಗೆ ದಲಿತ ಕಾಲೋನಿ ಸಂಪೂರ್ಣ ಜಲಾವೃತವಾಗಿವೆ.
ಈ ಗ್ರಾಮದಲ್ಲಿ ಮೊದಲಿನಿಂದಲೂ ಮಳೆಗಾಲ ಬಂದರೆ ಸಾಕು ದಲಿತರ ಬದುಕು ಹೆಳತಿರದು ಹಾಗೂ ಈ ಗ್ರಾಮದ ಮೂಲಕ ಹಾದುಹೊದ ನಾರಾಯಣ ಪುರ ಬಲದಂಡೆ ಕಾಲುವೆ ನಿರ್ಮಾಣವಾದಾಗಿನಿಂದಲು ಈ ಕಾಲುವೆಯಿಂದ ಬಸಿನೀರು ಬಂದು ಗ್ರಾಮದ ದಲಿತ ಕಾಲೋನಿಗೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡ ಬಸಲಿಂಗಪ್ಪ ಐದನಾಳ ಇವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಾಳಾಪುರ ಪಂಚಾಯತ್ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತು ದಲಿತರ ಕಾಲೋನಿಗೆ ಅಭಿವೃದ್ಧಿ ಮಾಡದೆ ಬಂದ ಅನುದಾನ ಅಡ್ಡದಾರಿ ಹಿಡಿಯಲು ಪಂಚಾಯತ್ ಅಧಿಕಾರಿಗಳ ಕೈಚಳಕ ತೋರಿಸಿ ಬೋಗಸ್ ಬಿಲ್ ಪಾವತಿ ಮಾಡುವ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳಿಗೆ ಮಳೆ ನೀರು ದಲಿತರ ಬದುಕು ದುಸ್ತರ ದಲಿತರ ಅಭಿವೃದ್ಧಿಗೆ ಬಂದ ಅನುದಾನ
ದುರುಪಯೋಗ ಐದನಾಳ ಗ್ರಾಮದಲ್ಲಿ ರಸ್ತೆ ಚರಂಡಿ ನಿರ್ಮಾಣಕ್ಕೆ ಈಗಾಗಲೇ ಅನೇಕ ಬಾರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಆಗಿರುತ್ತದೆ ಆದರೆ ಪಂಚಾಯತ್ ಅಧಿಕಾರಿಗಳು ಗುತ್ತಿಗೆದಾರರ ಜೋತೆ ಕೈಜೋಡಿಸಿ ಕಳಪೆ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೆ ಹಾಗೂ ಪ್ರಸ್ತುತ ಸಮಯದಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತು ದಲಿತರ ಪರಿಶಿಷ್ಟ ಜಾತಿ ಜನಾಂಗದವರ ಸುಮಾರು ೧೦ಮನೆಗಳಿಗೆ ಮಳೆ ನೀರು ನುಗ್ಗಿದೆ ಇದರಿಂದ ಇವರ ಬದುಕು ದುಸ್ತರವಾಗಿದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದಲಿತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ದಲಿತ ಮುಖಂಡರು
ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಮ್ಮ ಕಾಲೋನಿಗೆ ಅಭಿವೃದ್ಧಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗದಿದ್ದರೆ ಪಂಚಾಯತ್ ಕಾರ್ಯಲಯದ ಮುಂದೆ ಹೊರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ದಲಿತ ಮುಖಂಡರಾದ ವಿರಭದ್ರಪ್ಪ ಹನುಮಂತಪ್ಪ ಶಿವಪ್ಪಾ ಶಶೀಧರ ದುರುಗಪ್ಪ ಭೋವಿ ಯಲ್ಲಮ್ಮ ಅಮರಮ್ಮ ಈರಮ್ಮ ವಿಜೆಯಮ್ಮ ಸೇರಿದಂತೆ ಇತರರು ಈ ರೀತಿ ಒಗ್ಗಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.