ಕಣ್ಣು ಬದುಕಿನ ಬೆಳಕು 

ಹಿರಿಯೂರು :ಮಾ.18- ಕಣ್ಣುಗಳನ್ನು ಶಸ್ತ್ರಚಿಕಿತ್ಸೆಯ ಮೊದಲು ನಂತರ ಸೋಂಕಿಗೆ ಒಳಗಾಗದಂತೆ ಜೋಪಾನ ಮಾಡಿಕೊಳ್ಳುವುದರಿಂದ ಶಿಬಿರದ ಪೂರ್ಣ ಪ್ರಯೋಜನ ಪಡೆದಂತೆ ಆಗುವುದುಎಂದು ನೀಡ್ಸ್ ಸಂಸ್ಥೆಯ ಉಪಾಧ್ಯಕ್ಷರು ಹಾಗೂ   ಸಾಮಾಜಿಕ ಕಾರ್ಯಕರ್ತರಾದ ಶಶಿಕಲಾ ರವಿಶಂಕರ್ ಹೇಳಿದರು.ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸುಜಲಾನ್‌ ಫೌಂಡೇಶನ್, ನೀಡ್ಸ್ ಸಂಸ್ಥೆ, ರಾಣೇಬೆನ್ನೂರು,ಶ್ರೀ ಬಸವೇಶ್ವರ ಗ್ರಾಮಾಭಿವೃದ್ಧಿ ಸಂಘ, ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಬಿ ಜಿ ಹಳ್ಳಿಯಲ್ಲಿ ಆಯೋಜಿಸಿದ್ದಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.ಕಣ್ಣು ದೇಹದಲ್ಲಿನ ಅತೀ ಸೂಕ್ಷ್ಮವಾದ ಅಂಗ, ವೃಧ್ಯಾಪ್ಯ ಜೀವನದಲ್ಲಿ  ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು, ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು, ಶಸ್ತ್ರ ಚಿಕಿತ್ಸೆ ನಂತರ ಅಷ್ಟೇ ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಸುಜಲಾನ್ ಫೌಂಡೇಶನ್  ಮ್ಯಾನೇಜರ್ ದೀಪಕ್ ಮಾತನಾಡಿ, ಕಣ್ಣು ತಪಾಸಣೆ ನಂತರ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡವರನ್ನು ಹೊಳಲ್ಕೆರ ಮೂಲಕ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು. ಸುಜಲಾನ್ ವಲಯ ಅಧಿಕಾರಿ ಟಿ.ಎನ್.ನಾಗಭೂಷಣ್ಹೆಚ್. ಎಂ. ಪ್ರಸಾದ್, ನೇತ್ರಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ, ಬಿ.ದುರ್ಗ, ಜೆ. ವೀಣಾ, ನೇತ್ರಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಹೊಳಲ್ಕೆರೆ, ರಮೇಶ್, ಆರೋಗ್ಯಾಧಿಕಾರಿಗಳು ಚಿತ್ರಹಳ್ಳಿ ಮತ್ತು ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಸ.ಹಿ.ಪ್ರಾ.ಪಾಠ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಲತಾ ಮತ್ತು ಸಿಬ್ಬಂದಿ ವರ್ಗ, ಶಾಲಾ ಸುಧಾರಣಾ ಸಮಿತಿ, ಗ್ರಾಮ ಪಂಚಾಯತ್ ಟಿ ನುಲೇನೂರುಶ್ರೀ ಬಸವೇಶ್ವರ ಗ್ರಾಮಾಭಿವೃದ್ಧಿ ಸಂಘದ ಸರ್ವ ಸದಸ್ಯರು ಹಾಗೂ ಬಿ ಜಿ ಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು, ಶಿಬಿರದಲ್ಲಿ  14 ಜನರಿಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.