ಕಣ್ಣು ತಪಾಸಣೆ-ಉಚಿತ ಶಿಬಿರ ಆಯೋಜನೆ

ಆನೇಕಲ್,ಸೆ೧೯:ಕಲ್ಲುಬಾಳು ಗ್ರಾಮದ ಸ್ವಾಮಿ ವಿವೇಕಾನಂದ ಕೇಂದ್ರ ವಿದ್ಯಾಲಯದ ಆವರಣದಲ್ಲಿ ಪ್ರದಾನಿ ನರೇಂದ್ರ ಮೋದಿರವರ ಜನ್ಮ ದಿನಾಚರಣೆ ಅಂಗವಾಗಿ ಬೆಂಗಳೂರು ದಕ್ಷಿಣ ವಿಧಾನ ಸಭಾ ಗ್ರಾಮಾಂತರ ಮಂಡಲ ಹಾಗೂ ರೈತ ಮೋರ್ಚಾದ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಉಚಿತ ಕಣ್ಣಿನ ತಪಾಸಣೆ ಶಿಭಿರದ ನೇತೃತ್ವವನ್ನು ಕಲ್ಲುಬಾಳು ಮಂಜುನಾಥ್ ಗೌಡರು ಮತ್ತು ಕೋನಸಂದ್ರ ನವೀನ್ ಮತ್ತು ಚೇತನ್ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಾಜ್ ಶೇಖರ್ ರೆಡ್ಡಿ, ನಾಗೇಶ್, ವೀರಸಂದ್ರ ರಾಜೇಂದ್ರಪ್ಪ, ನಾಗೇಂದ್ರ, ರಮೇಶ್, ಗಿರೀಶ್, ದೀಪು, ವಸಂತ್, ನರೇಂದ್ರ ಕುಮಾರ್, ವಸಂತ್, ಹರೀಶ್ ರೆಡ್ಡಿ, ಹರೀಶ್ ಗೌಡ, ಶ್ರೀನಿವಾಸ್, ಬುಕ್ಕಸಾಗರ ಮಂಜುನಾಥ್ ರೆಡ್ಡಿ, ರಮೇಶ್, ಲಿಖಿತ್, ಸ್ಥಳೀಯ ಹಿತರಕ್ಷಣಾ ವೇದಿಕೆ ಮತ್ತು ರೋಟರಿ ಸಂಸ್ಥೆಯ ಸತೀಶ್, ಸುರ್ದಶನ್, ಮಂಜುನಾಥ್ ಭಾಗವಹಿಸಿದ್ದರು.