ಬೆಂಗಳೂರು, ಜು. ೭- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಣ್ಣಿನ ಶಿಬಿರಗಳು, ಕನ್ನಡಕ ವಿತರಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳು ನಡೆಸಲು ಆಶಾಕಿರಣ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿ, ರಾಜ್ಯದಲ್ಲಿರುವ ೧೭೩ ಡಯಾಲಿಸಿಸ್ ಕೇಂದ್ರಗಳನ್ನು ೨೧೯ಕ್ಕೆ ಹೆಚ್ಚಿಸಿ, ೯೨ ಕೋಟಿ ಅನುದಾನ ನೀಡಲಾಗುವುದು ಎಂದರು.
ಗ್ರಾಮೀಣಾ ವ್ಯವಸ್ಥೆ ಬಲಪಡಿಸಲು ೨೩ ಪಿಎಚ್‌ಸಿಗಳನ್ನು ಸಿಎಚ್‌ಸಿ ಗಳಾಗಿ ಮೇಲ್ದರ್ಜೇಗೇರಿಸಿ ಅಗತ್ಯ ಸೌಲಭ್ಯ ಮಾನವ ಸಂಪನ್ಮೂಲ ಒದಗಿಸಲು ೭೦ ಕೋಟಿ ಒದಗಿಸಲಾಗುವುದು.
ನವಜಾತ ಶಿಶುಗಳು, ಮಕ್ಕಳು, ಹದಿಹgಯದವರು, ಗರ್ಭೀಣಿ ತಾಯಂದಿರು, ಮತ್ತು ಸಂತಾನೋತ್ಪತ್ತಿ ಮಹಿಳೆಯರಲ್ಲಿ ರಕ್ತಹೀನತೆ, ಅಪೌಷ್ಠಿಕತೆ ನಿವಾರಣೆಗೆ ೨೫ ಕೋಟಿ ಒದಗಿಸಲಾಗುವುದು ಎಂದರು.
ಮಧುಮೇಹ ರಕ್ತದೊತ್ತಡ ಹೊಂದಿದ ರೋಗಿಗಳನ್ನು ಪತ್ತೆ ಹಚ್ಚಲು ಹಾಗೂ ಅಗತ್ಯ ಔಷಧಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ರಾಜ್ಯದ ೪ ವಿಭಾಗಗಳ ೮ ಜಿಲ್ಲೆಗಳಲ್ಲಿ ಸಮಗ್ರ ತಪಾಸಣೆ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದರು.
ಡಾ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಯಲು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಇಡಿಗಳನ್ನು ಅಳವಡಿಸಲು ೬ ಕೋಟಿ ಒದಗಿಸಲಾಗುವುದು.
ಕೆಲವು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತ ಪ್ರಯೋಗಾಲಯ ಸೇವೆಯನ್ನು ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ವಿಸ್ತರಿಸಿ, ಕರ್ನಾಟಕ ಆರೋಗ್ಯ, ತಂತ್ರಜ್ಙಾನ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದರು.