ಕಣ್ಣು, ಕನ್ನಡ, ಫಿಟ್ನೆಸ್ ಶರ್ಮಿತಾ‌ ಫಸ್ಲ್ ಪಾಯಿಂಟ್

ಬಣ್ಣದ ಬದುಕು ಎಲ್ಲರನ್ನೂ ಆಕರ್ಷಿಸಿದರೂ ಕಲಾ ಸರಸ್ವತಿಯ ಸೇವೆ ಮಾಡಲು ಕೆಲವರಿಗೆ ಮಾತ್ರ ಅವಕಾಶ ಸಿಗಲಿದೆ. ಅಚಾನಕ್ ಆಗಿ ಬಣ್ಣದ ಬದುಕು ಪ್ರವೇಶಿಸಿದ ಮಂದಿ ಬದುಕು ಕಂಡುಕೊಂಡಿದ್ದಾರೆ. ಮತ್ತೆ ಈ ಪ್ರಯತ್ನದಲ್ಲಿ ಹೆಜ್ಜೆ ಹಾಕಿದ್ದಾರೆ.
ವಿನುಬಳಂಜ ಧಾರಾವಾಹಿ ” ಜಾನಕಿ ರಾಘವ”
ಮೂಲಕ ಅಭಿನಯದ ಹೊಸಲೋಕ ಪ್ರವೇಶಿಸಿ, ತಮಿಳಿನ ” ನೀಲಾ” ದಲ್ಲಿ ಮಿಂಚಿ ಮೊದಲ ಪ್ರಯತ್ನದಲ್ಲಿ ನಟನೆಗೆ ಪ್ರಶಸ್ತಿ ಪಡೆದವರು. ಆ ಬಳಿಕ “ಗೀತಾ”ದಲ್ಲಿ ಮನ ಮೆಚ್ಚಿದ ಅತ್ತೆ ಎನ್ನುವ ಗೌರವಕ್ಕೆ ಪಾತ್ರರಾಗಿ ಇದೀಗ “ಯಾರಿವಳು”..ಎನ್ನುವಂತೆ ಎಲ್ಲರನ್ನೂ ಆಕರ್ಷಿಸಿದಾಕೆ.
ಕುತೂಹಲವೇ.‌ ಚಿಕ್ಕಮಗಳೂರಿನ‌ ಚಿಕ್ಕಮಲ್ಲಿಗೆ ಎಂ.ಎಸ್ಸಿ ಬಯೋಕೆಮಿಸ್ಟ್ರಿ ಯಲ್ಲಿ ಮೊದಲ ರ್ಯಾಂಕ್‌ ಗಳಿಸಿ ಚಿನ್ನದ ಪದಕ‌ ಪಡೆದಾಕೆ. ನ್ಯೂಟ್ರಿಷಿಯನ್, ಮದುವೆಯಾಗಿ ಮಗುವಿದ್ದರೂ “ಸಂತೂರ್ ಮಮ್ಮಿ” ಎನ್ನುವ ಪ್ರಶಂಸೆಗೆ ಸಿಕ್ಕಿದ್ದು “ಮಿಸೆಸ್ ಕರ್ನಾಟಕ” ಸ್ಪರ್ಧೆಯ ಮೊದಲ ರನ್ನರ್ ಅಪ್. ಆನಂತರ “ಸೈಕೋ‌ಶಂಕರ” ನ ಶುಭಾಶಯ ಕೋರಿದ ವಿಡಿಯೋ ಬಣ್ಣದ ಬದುಕಿಗೆ ತಿರುವು ಕೊಟ್ಟಿದೆ.
ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಗೊತ್ತಾಗಿರಲೇ ಬೇಕು.ಅವರೇ ಶರ್ಮಿತಾ ಗೌಡ. ಇನ್ನು ಅವರದೇ ಮಾತುಗಳು ಇಲ್ಲಿದೆ. ಓವರ್ ಟು ಶರ್ಮಿತಾ,…‌ಎಂ.ಎಸ್ ಸಿ ಬಯೋಕೆಮಿಸ್ಟ್ರಿ,ಗೋಲ್ಡ್ ಮೆಡಲ್ ಪಡೆದಿದ್ದೇನೆ.ಬಣ್ಣದ ಬದುಕಿಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಿಎಚ್ ಡಿ ಮಾಡುವ ಕನಸಿತ್ತು ಫ್ಯಾಮಿಲಿ ಕಮಿಟ್ ಮೆಂಟ್ ಆಗಲಿಲ್ಲ.
ಓದಿ ಸುಮ್ಮನೆ ಕುಳಿತುಕೊಳ್ಳುವುದೇಕೆ ಎಂದು ಫಿಟ್ನೆಸ್ ಸೆಂಟರ್ ನಲ್ಲಿ ನ್ಯೂಟ್ರೀಶಿಯನ್ ಕೆಲಸ ಆರಂಭಿಸಿದೆ.
ಮದುವೆಯಾಗಿ ಮಗುವಾದ ಮೇಲೂ ಇಷ್ಟೊಂದು ಫಿಟ್ ನೆಸ್‌ ಆಗಿ ಇರಬಹುದಾ‌ ಎನ್ನುವ ಅನೇಕರ ಸಲಹೆ ಮೇರೆಗೆ “ಮಿಸೆಸ್ ಕರ್ನಾಟಕ” ಸ್ಪರ್ದೆಯಲ್ಲಿ ಮೊದಲ ರನ್ನರ್ ಅಪ್ ಪಡೆದೆ.ಬಳಿಕ ಧಾರಾವಾಹಿಯಿಂದ ಅವಕಾಶ ಬರಲು ಆರಂಭಿಸಿದವು.
“ಸೈಕೋ ಶಂಕರ” ಚಿತ್ರಕ್ಕೆ ವಿಡಿಯೋ ಬೈಟ್ ಬೇಕು ಎಂದು ಕೇಳಿ ಪಡೆದಿದ್ದರು .ವಿಡಿಯೋ ನೋಡಿ ನಿರ್ದೇಶಕ ವಿನು ಬಳಂಜ‌ ಅವರ ಧಾರಾವಾಹಿ “ಜಾನಕಿ ರಾಘವ” ದಲ್ಲಿ‌ನೆಗಟೀವ್ ಪಾತ್ರ. ಸಿಕ್ಕಿತು.ಅಲ್ಲಿಂದ ಆರಂಭವಾದ ಬಣ್ಧದ ಬದುಕಿನ ಯಾನ ಮುಂದುವರಿದೆ.ನಾಲ್ಕು ಧಾರಾವಾಹಿಯಲ್ಲಿ ನೆಗೆಟೀವ್ ಪಾತ್ರ ಸಿಕ್ಕಿದೆ. ಸಿನಿಮಾದಲ್ಲಿ ಪಾಸಿಟೀವ್ ಪಾತ್ರ ಎಂದರು.

ಫ್ಲಸ್ ಪಾಯಿಂಟ್

“ಕಣ್ಣು ಚೆನ್ನಾಗಿದೆ. ಕನ್ನಡ ಸ್ಪಷ್ವವಾಗಿ ಮಾತನಾಡ್ತಾರೆ ಎನ್ನುವುದು ಫ್ಲಸ್ ಪಾಯಿಂಟ್.” ಜಾನಕಿ‌ರಾಘವ” ದಿಂದ ಬಣ್ಣದ ಬದುಕಿನ ಜರ್ನಿ ಆರಂಭವಾಯಿತು . ಯಾವುದೇ ಕೆಲಸ ಮಾಡಿದರೂ ಅದಕ್ಕೆ ಶೇ.100 ರಷ್ಟು ಪ್ರಯತ್ನ ಹಾಕುತ್ತೇನೆ. ಹೊಸದನ್ನು ಬೇಗ ಕಲಿಯುತ್ತೇನೆ.ಮೊದಲ ಬಾರಿ ಮೇಕಪ್ ಹಾಕಿಸಿಕೊಂಡಾಗ ಥ್ರಿಲ್ಲ್ ಆಗಿತ್ತು”
– ಶರ್ಮಿತಾ ಗೌಡ,ನಟಿ

ಹೊಸ ಭರವಸೆ

ಕೆಲವು ಮುಖಗಳನ್ನು ಎಲ್ಲಾ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಬಹುದು ಆ ಕಲೆ ನಿಮ್ಮಲ್ಲಿ ಇದೆ. ಹಾಗಾಗಿ ಕಣ್ಣುಗಳೇ ಆಟ ಆಡಬುಹದು‌ ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು‌‌ ವಿನು ಬಳಂಜ‌ ಹೇಳಿದ್ದರು ಅದು ನನ್ನಲ್ಲಿ ಮತ್ತಷ್ಟು ಭರವಸೆ ಮೂಡಿಸಿತು.
ಗೀತಾದಲ್ಲಿ ಅಧಿಕಾರಕ್ಕಾಗಿ ಹಪಹಪಿಸುವ ತಾಯಿ,ಇದಕ್ಕಾಗಿ ಅತ್ಯುತ್ತಮ ಅತ್ತೆ ಪ್ರಶಸ್ತಿ ಬಂತು. ನನಗೆ ಸ್ಟೈಲಿಶ್ ಐಕಾನ್ ನಲ್ಲಿ ಪ್ರಶಸ್ತಿ ಬರುತ್ತದೆ ಎನ್ನುವ ನಿರೀಕ್ಷೆ ಇತ್ತು.ಅದಕ್ಕೆ ಬರಲಿಲ್ಲ ಎಂದರು ಶರ್ಮಿತಾ ಗೌಡ.


ತಮಿಳು ಧಾರಾವಾಹಿ ಪೂರ್ಣ

ತಮಿಳಿನಲ್ಲಿ ತಾವು ಮಾಡುತ್ತಿದ್ದ ಧಾರಾವಾಹಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.ಕೋವಿಡ್ ಕಾರಣಕ್ಕೆ ಚೆನ್ನೈ ಗೆ ಹೋಗಲು ಸಾದ್ಯವಾಗಲಿಲ್ಲ.‌ಬೇರೆ ಕಲಾವಿದರನ್ನು ತಮ್ಮಪಾತ್ರಕ್ಕೆ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಹೇಳಿದ್ದೆ.ಅದರಂತೆ ಮಾಡಿಕೊಂಡಿದ್ದರು.ಮತ್ತೆ ಕರೆದು ನೀವೇ ಬೇಕು ಅಂದರು. ಕೆಲವು ವಾರ ನಟಿಸಿದೆ. ಅಲ್ಲಿ ಧಾರಾವಾಹಿ ಪೂರ್ಣಗೊಂಡಿದೆ.ಅಲ್ಲಿ ಮಾಡುವಾಗ ಸಿಕ್ಕ ಧಾರಾವಾಹಿಯೇ” ಯಾರಿವಳು”


ಕಣ್ಸನ್ನೆ ಚೆಲುವೆ

ದೇವಸ್ತಾನ, ಸೂಪರ್ ಮಾರುಕಟ್ಟೆ ಎಲ್ಲೇ ಹೋದರೂ ಜನರು ಕಣ್ಣಲ್ಲಿ ಕಂಡು ಹಿಯುತ್ತಾರೆ.ಮಾಸ್ಕ್ ಹಾಕಿಕೊಂಡಿದ್ದರೂ ಗುರುತಿಸಿತ್ತಾರೆ.ಇದು ಖುಷಿಯ ಸಂಗತಿ. ವಿಲನ್ ಪಾತ್ರದಲ್ಲಿ ರಿಜಿಸ್ಟರ್ ಆಗಿದ್ದೇನೆ .ಮಾಡಿರುವ ಮೂರು ಸಿನಿಮಾಗಳಾದ ಪ್ಯಾಮಿಲಿ‌ಪ್ಯಾಕ್, ಸೀತಾಯಣ ಹಾಗು ವೆಂಕಟ್ ಭಾರಧ್ವಜ್ ಚಿತ್ರದಲ್ಲಿ ಪಾಸಿಟೀವ್ ಪಾತ್ರ ಸಿಕ್ಕಿದೆ ಎಂದರು ಶರ್ಮಿತಾ.
ಒಂದು ಧಾರಾವಾಹಿ ಮಾಡುವಾಗ ಮತ್ತೊಂದು ಧಾರಾವಾಹಿ ಮಾಡಿದರೆ ದಿನಾಂಕ ಹೊಂದಿಸುವುದು ಕಷ್ಟವಾಗುತ್ತದೆ ತಂಡವನ್ನು ‌ಕನ್ವಿನ್ಸ್ ಮಾಡಿ ಎಲ್ಲಿಯೂ ತೊಂದರೆ ಆಗದಂತೆ ನಟಿಸುತ್ತಿದ್ದೇನೆ .ವಯಸ್ಸಿಗೆ ಮೀರಿದ ಪಾತ್ರ ಮಾಡೋದು ಇನ್ನೂ ಖುಷಿ ಎಂದರು.

https://ssl.gstatic.com/ui/v1/icons/mail/no_photo.pngReplyForward