ಕಣ್ಣು ಆರೋಗ್ಯದ ಒಂದು ಕಿಂಡಿ:ಡಾ.ಪ್ರಭುಗೌಡ

ತಾಳಿಕೋಟೆ:ಆ.9: ಕಣ್ಣು ಮನುಷ್ಯನಿಗೆ ಬಹಳೇ ಅವಶ್ಯವಾಗಿದ್ದು ಶಿಕ್ಷಣದಲ್ಲಿ ನಾವು ಏನನ್ನಾದರೂ ಸಾಧನೆ ಮಾಡಿದ್ದರೆ ಕಣ್ಣಿನಿಂದ ಶೇ.80 ರಷ್ಟು ಸಾದ್ಯವಿದೆ ಅದರ ಜೊತೆಗೆ ಶೇ.20 ದೈಹಿಕ ಸ್ಪರ್ಷ ಶ್ರವಣದಿಂದ ಮಾಡಿಕೊಳ್ಳುತ್ತೇವೆ ಆದರೆ ಕಣ್ಣು ಬಹಳೇ ಮುಖ್ಯವಾದ ಅಂಗವಾಗಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ನುಡಿದರು.

ಮಂಗಳವಾರರಂದು ಸ್ಥಳೀಯ ಎಸ್.ಕೆ.ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿಧ್ಯಾಲಯದಲ್ಲಿ ಎನ್.ಎಸ್.ಎಸ್.ಘಟಕ 1 ಹಾಗೂ 2 ಸಮನ್ವಯ ವಿಶೇಷ ಘಟಕದ ಆಶ್ರಯದಲ್ಲಿ ವಿಜಯಪುರ ಅನುಗ್ರಹ ವ್ಹಿಜನ್ ಪೌಂಡೇಶನ್ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಇವರ ಸಹಯೋಗದೊಂದಿಗೆ ಮಹಾ ವಿಧ್ಯಾಲಯದ ಸಭಾಭವನದಲ್ಲಿ ಏರ್ಪಡಿಸಲಾದ ಕಣ್ಣಿನ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಕಣ್ಣು ಹಾಗೂ ಆರೋಗ್ಯ, ಶಿಕ್ಷಣ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಯಾವ ವ್ಯಕ್ತಿ ದೃಷ್ಠಿಹೀನನಾಗಿರುತ್ತಾನೋ ಅವನು ಪರವಾಲಂಬಿಯಾಗಿ ಬಧುಕಬೇಕಾಗುತ್ತದೆ ಅಂತಹ ದುಸ್ಥಿತಿ ಬರಬಾರದೆಂದರು. ನಾವೇಲ್ಲರೂ ನಮ್ಮ ಕಣ್ಣುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕಾಗಿದೆ ಕಣ್ಣಿನ ಪ್ರಾಮುಖ್ಯತೆ ಏನೆಂಬುದು ತಿಳಿದುಕೊಳ್ಳಲು ಮುಂದಾಗಬೇಕಾಗಿದೆ ಎಂದರು. ಇತ್ತಿಚಗೆ ಮದ್ರಾಸ್ ಐ ಎಂಬುದು ಅಲ್ಲಲ್ಲಿ ಹರಡುತ್ತಾ ಈ ರೋಗ ಉಲ್ಬಣಗೊಳ್ಳುತ್ತಾ ಸಾಗಿದೆ ಈ ರೋಗ ಅಷ್ಟೇನು ಹೆಚ್ಚಿಗೆ ಯಾವುದೇ ನೋವನ್ನು ಉದ್ಬವಿಸದೇ ಕೇವಲ ಕಣ್ಣು ಕೆಂಪಾಗಿ 4, 5, ದಿವಸಗಳಲ್ಲಿ ಕಡಿಮೆಯಾಗುತ್ತದೆ ಎಂದರು. ಯಾವ ರೀತಿ 5, 10 ವರ್ಷಕ್ಕೊಮ್ಮೆ ಕಣ್ಣುಬೇನೆ ಬರುತ್ತವೆ ಇದರಿಂದ ಕಾಯಂ ಕಣ್ಣನ್ನು ನಿಷ್ಟಕ್ರೀಯ ಗೊಳಿಸುವ ಶಕ್ತಿ ಇಲ್ಲಾ ಸ್ವಲ್ಪು ಮಟ್ಟಲ್ಲಿ ತೊಂದರೆ ನೀಡಿ ಈ ರೋಗ ವಾಸಿಯಾಗುವ ರೋಗ ಇದಾಗಿದೆ ಎಂದರು. ಈ ರೋಗ ಬಂದವರು ಕಣ್ಣುಮುಟ್ಟಿಕೊಂಡು ಅವರು ಸ್ಪರ್ಷ ಮಾಡಿದ ಸ್ಥಳವನ್ನು ನಾವು ಮುಟ್ಟಿ ಕಣ್ಣಿಗೆ ಕೈ ಹಚ್ಚಿಕೊಂಡರೆ ಇದು ನಮಗೂ ಬರುತ್ತದೆ ಇದನ್ನು ತಪ್ಪಿಸಲು ಯಾವಾಗಲೂ ಕೈಯನ್ನು ಸ್ವಚ್ಚಗೆ ತೊಳೆದುಕೊಂಡು ಕಣ್ಣುಗಳನ್ನು ಮುಟ್ಟಿಕೊಳ್ಳಬೇಕೆಂದರು. ಇದಕ್ಕೆ ಔಷಧಗಳಿಲ್ಲಾ ಕೇವಲ 4, 5ದಿವಸಗಳಲ್ಲಿ ಗುಣಮುಖವಾಗುತ್ತದೆ ಗ್ರಾಮೀಣ ಭಾಗದಲ್ಲಿ ನಾಟಿ ವೈಧ್ಯರನ್ನು ಸಂಪರ್ಕಿಸುವ ಕಾರ್ಯನಡೆಯುತ್ತಿದೆ ಅದು ಸಮಂಜಸವಲ್ಲಾ ಕಣ್ಣಿಗೆ ಯಾವುದಾದರೂ ಸಮಸ್ಯಗಳು ಬಂದೇ ಬರುತ್ತವೆ ಈ ಕುರಿತು ನೆತ್ರ ತಜ್ಞರನ್ನು ಸಂಪರ್ಕಿಸಬೇಕೆಂದರು. ಔಷಧ ಅಂಗಡಿಯಲ್ಲಿ ಈ ಕುರಿತು ಕೇಳಿದಾಗ ಅಲ್ಲಿ ಅಚಿಟಿಬೈಟಿಕ್ ಔಷಧ ಕೊಡುತ್ತಾರೆ ಇಲ್ಲಿ ಅರ್ಥೈಸಿಕೊಳ್ಳುವದೇನೆಂದರೆ ಕೇವಲ ಐಂಟಿಬೈಟಿಕ್ ಇದ್ದರೆ ಏನು ಮಾಡುವದಿಲ್ಲಾ ಅದರ ಜೊತೆಗೆ ಸೀರಾಯ್ಡ್ ಮಿಶ್ರಿತ ಔಷಧ ಕೊಡುತ್ತಾರೆ ಅದರ ಮುಂದೆ ಡಿ ಎಂದು ಬರೆದಿರಲಾಗುತ್ತದೆ ಅದನ್ನು ಉಪಯೋಗ ಮಾಡಬಾರದೆಂದರು. ಈ ಕುರಿತು ಜ್ಞಾನವನ್ನು ಆನ್‍ಲೈನ್ ಮುಖಾಂತರ ಪಡೆಯಬಹುದಾಗಿದೆ ಕಣ್ಣು ಸುರಕ್ಷೀತವಾಗಿರಬೇಕೆಂದರೆ ಯಾವುದೇ ಸ್ಕ್ರೀನ್ ನೋಡಿದಾಗ 50 ಸೇಂಟಿ ಮೀಟರ್ ದೂರದಿಂದ ಅಂದರೆ ಅರ್ದ ಮೀಟರ್ ದೂರದಿಂದ ನೋಡಬೇಕು ಸಮೀಪ ನೋಡಿದರೆ ಕಣ್ಣಲ್ಲಿ ನೀರಿನಾಂಶ ಕಡಿಮೆಯಾಗಿ ಕಣ್ಣುನೋವು ಆಗುತ್ತವೆ ಕಾರಣ ಸ್ಕ್ರೀನ್ ನೋಡಿದ ನಂತರ 20 ನಿಮಿಷವಾದರೂ ರೇಸ್ಟ್ ತೆಗೆದುಕೊಳ್ಳಬೇಕೆಂದರು. ದೂರಕ್ಕೆ ಪರಿಶ್ರಮ ಬೇಕಾಗಿಲ್ಲಾ ಸಮೀಪ ನೋಡಲಿಕ್ಕೆ ಪರಿಶ್ರಮ ಬೇಕಾಗುತ್ತದೆ ಎಂದರು. ಈ ದೇಶದಲ್ಲಿ 130 ಕೋಟಿ ಜನರಲ್ಲಿ 15 ಕೋಟಿ ಜನರಿದ್ದಾರೆ ಅವರೆಲ್ಲರೂ ದೈನಂದಿನ ಚಟುವಟಿಕೆಗೆ ಮತ್ತೋಬ್ಬರ ಮೇಲೆ ಅವಲಂಬಿತರಾಗಿದ್ದಾರೆಂದರು. 1.50 ಕೋಟಿ ಜನರಲ್ಲಿ 40 ಲಕ್ಷ ಜನರ ದೃಷ್ಠಿ ದೋಷ ನಿವಾರಣೆ ಮಾಡಬೇಕಾದರೆ ಮತ್ತೋಬ್ಬರ ಕಣ್ಣಿನ ದಾನ ಅಗತ್ಯವಾಗಿದೆ ಕಾರಣ ಈ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದರು. ವ್ಯಕ್ತಿಯ ಅಂಗಾಂಗ ದಾನ ಮಾಡುವ ವ್ಯವಸ್ಥೆಗೆ ಮುಂದಾಗಬೇಕಿದೆ ನೇತ್ರ ದಾನದಿಂದ ಕೋಟ್ಯಾಂತರ ಕಣ್ಣುಗಳಿಂದ ಅಂದರೂ ಕೂಡಾ ಪುನರ್ ಜನ್ಮ ಪಡೆದಂತೆ ನೋಡುತ್ತಾರೆಂಬ ಭಾವನೆ ಮೂಡುತ್ತದೆ ಎಂದರು. ದೇಶದಲ್ಲಿ ದಿನಕ್ಕೆ 65 ಸಾವಿರ ಜನ ಜನ್ಮ ತಾಳುತ್ತಾರೆ ಅಷ್ಟೇ ಜನತೆ ಮರಣ ಹೊಂದುತ್ತಾರೆ ಇವರೆಲ್ಲರೂ ತೀರಿಕೊಂಡವರ ನೇತ್ರ ದಾನ ಮಾಡಿದರೆ ಎಲ್ಲರ ಕಣ್ಣುಗಳನ್ನು ಸರಿಪಡಿಸಬಹುದಾಗಿದೆ ಎಂದರು. ಇಂತಹ ಕಾರ್ಯವಾಗುತ್ತಿಲ್ಲಾವೆಂದು ವಿಷಾದ ವ್ಯಕ್ತಪಡಿಸಿದ ಡಾ.ಪ್ರಭುಗೌಡ ಅವರು ಸುಶಿಕ್ಷೀತರಾದ ನಾವು ಈ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದರು. ನಮ್ಮ ದೇಶದಲ್ಲಿ ಕೇವಲ ವರ್ಷಕ್ಕೆ 2 ಲಕ್ಷ ಕಣ್ಣುಗಳು ಸಿಗುತ್ತವೆ ಬೇಕಾದುದ್ದು 20 ಲಕ್ಷ ಆದರೆ ಶ್ರೀಲಂಕಾ ದೇಶದಲ್ಲಿ ಕಣ್ಣುಗಳನ್ನು ಸಾಕಷ್ಟು ದಾನ ಮಾಡಿದ್ದಾರೆ ಹೆಚ್ಚಾದ ಕಣ್ಣುಗಳನ್ನು ನಮ್ಮ ದೇಶಕ್ಕೆ ರಪ್ತು ಮಾಡುತ್ತಾ ಸಾಗಿದ್ದಾರೆಂದರು. ಅಗಸ್ಟ 25 ರಿಂದ ಸಪ್ಟಂಬರ್ 8ರ ವರೆಗೆ ನೇತ್ರದ ದಿನದ ವಾರ್ಷಿಕ ಆಚರಣೆ ಮಾಡಲಾಗುತ್ತಿದೆ ಈ ಕುರಿತು ಪ್ರತಿ ಜಿಲ್ಲೆ, ಪ್ರತಿ ತಾಲೂಕು ಹೋಬಳಿ ಮಟ್ಟದಲ್ಲಿಯೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದರು. ಕಣ್ಣಿನೊಂದಿಗೆ ಆರೋಗ್ಯ ಅಷ್ಟೇ ಮುಖ್ಯವಾಗಿದೆ ಎಂದು ನಾಲಿಗೆಯ ರುಚಿಯಂತೆ ಇಲ್ಲದ್ದನ್ನು ಸೇವನೆ ಮಾಡುತ್ತಾ ಸಾಗಿದರೆ ಆರೋಗ್ಯ ಕೆಟ್ಟು ಹೋಗುತ್ತದೆ ಕಾರಣ ಶಕ್ತಿದಾಯಕವಾದಂತಹ ಆಹಾರಗಳನ್ನು ಸೇವನೆ ಮಾಡಬೇಕೆಂದು ಈ ಮುಂದಿನ ಹಾಗೂ ಇಂದು ನಡೆದಂತಹ ಊಟದ ವ್ಯವಸ್ಥೆ ಕುರಿತು ಡಾ.ಪ್ರಭುಗೌಡ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಆರೋಗ್ಯ ಕಾಪಾಡಿಕೊಂಡು ವಿಧ್ಯಾರ್ಥಿಗಳು ಮುನ್ನಡೆಯಬೇಕೆಂದು ಆಶಿಸಿದರು.

ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಎಸ್.ಕೆ.ಕಲಾ ಹಾಗೂ ವಾಣಿಜ್ಯ ವಿಜ್ಞಾನ ಮಹಾ ವಿಧ್ಯಾಲಯದ ಅಧ್ಯಕ್ಷರಾದ ವ್ಹಿ.ಸಿ.ಹಿರೇಮಠ ಅವರು ಮಾತನಾಡಿ ಕಣ್ಣಿನ ವ್ಯವಸ್ಥೆ ಕುರಿತು ಸಂರಕ್ಷಣೆ ಮಾಡಿಕೊಳ್ಳಲು ಉಪನ್ಯಾಸ ನೀಡಿದ ಡಾ.ಪ್ರಭುಗೌಡ ಅವರಿಗೆ ದನ್ಯವಾದ ತಿಳಿಸಿದ ಅವರು ಡಾ.ಪ್ರಭುಗೌಡ ಅವರು ಉತ್ತರ ಕರ್ನಾಟಕದ ಎಂ.ಸಿ.ಮೋದಿ ಅವರ ಸ್ಥಾನ ಮಾನ ನೀಡಿದರೆ ಸಲ್ಲುತ್ತದೆ ಎಂದ ಅವರು ಡಾ.ಪ್ರಭುಗೌಡ ಅವರು ಕಣ್ಣಿನ ಕುರಿತು ನೀಡಿದ ಉಪನ್ಯಾಸವನ್ನು ವಿಧ್ಯಾರ್ಥಿಗಳು ಅಳವಡಿಸಿಕೊಂಡು ಆರೋಗ್ಯವಂತರಾಗಿ ಬಾಳಿರಿ ಎಂದು ಆಶಿಸಿದರು.

ಇನ್ನೋರ್ವ ವೀ.ವಿ.ಸಂಘದ ಅಧ್ಯಕ್ಷ ಸಿ.ಆರ್.ಕತ್ತಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಆರ್.ವ್ಹಿ.ಜಾಲವಾದಿ ಅವರು ಮಾತನಾಡಿ ದೇಹದ ಆರೋಗ್ಯ, ಶಿಕ್ಷಣದ ಬಗ್ಗೆ ಅಲ್ಲದೇ ಕಣ್ಣಿನ ಆರೋಗ್ಯ ಕುರಿತು ಉಪನ್ಯಾಸ ನೀಡಿದ ಡಾ.ಪ್ರಭುಗೌಡ ಅವರ ಈ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ನಾಲಿಗೆ ರುಚಿಗೆ ಮಾರುಹೋಗದೇ ಆರೋಗ್ಯವನ್ನು ಹಾಳುಗೆಡುವಿಸಿಕೊಳ್ಳಬಾರದೆಂದು ಕೂಡಾ ವಿಧ್ಯಾರ್ಥಿಗಳು ಅದನ್ನು ಮನದಟ್ಟನೆ ಮಾಡಿಕೊಳ್ಳಬೇಕು ದೇಹದಲ್ಲಿಯ ಗುಲಕೋಜ್ ಕಡಿಮೆಯಾಗದಂತೆ ನೋಡಿಕೊಂಡು ವಿಧ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

ವೇದಿಕೆಯ ಮೇಲೆ ವೀ.ವಿ.ಸಂಘದ ನಿರ್ದೇಶಕ ರಮೇಶ ಸಾಲಂಕಿ, ಎನ್.ಎಸ್.ಎಸ್.ಘಟಕ ಕಾರ್ಯಕ್ರಮದ ರೂವಾರಿ ರಮೇಶ ಜಾಧವ, ಎನ್.ಎಸ್.ಎಸ್.ಘಟಕ ಸಮನ್ವಯ ಅಧಿಕಾರಿ ಡಾ.ದೀಪಾ, ಕಾಲೇಜ್ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕುಮಾರಿ ಸುಷ್ಮಾ ಬಡಿಗೇರ ಸ್ವಾಗತಿಸಿದರು. ಕು.ತೇಜಸ್ವೀನಿ ಡಿಸಲೆ ನಿರೂಪಿಸಿದರು.