ಕಣ್ಣುಗಳ ಕಾಳಜಿವಹಿಸಲು ಕರೆ


ಹುಬ್ಬಳ್ಳಿ, ಸೆ 27: ನಮ್ಮ ಕಣ್ಣುಗಳು ಹೆಚ್ಚು ಒತ್ತಡಕ್ಕೆ ಸಿಲುಕುತ್ತಿವೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಅತಿಯಾಗಿದ್ದು, ತಲೆನೋವು, ಕಣ್ಣಿನ ಕೆಳಗೆ ಕಪ್ಪಾಗುವುದು, ಕಣ್ಣಿನ ಉರಿ ಇಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ದರಿಂದ ಕಣ್ಣುಗಳ ಕಾಳಜಿ ಅತ್ಯವಶ್ಯ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಉಂಟಾದಾಗ ವೈದ್ಯರ ಸಲಹೆ ಪಡೆದು ಆರೋಗ್ಯ ಕಾಪಾಡಿಕೋಳ್ಳುವಂತೆ ಡಾ. ಖ್ವಾಜಾ ಮೈನುದ್ದೀನ ಬಿಜಾಪುರ ಹೇಳಿದರು.

ಅವರು ಹಳೇಹುಬ್ಬಳ್ಳಿಯಲ್ಲಿರುವ ಪತೇಶಾ ಹಾಲಿನಲ್ಲಿ ಜಮಾತ್ ಅಹಲೇ ಸುನ್ನತ್ ಕರ್ನಾಟಕ ಹುಬ್ಬಳ್ಳಿ ಬ್ರಾಂಚ್ ಹಾಗೂ ಡಾ. ಬಿಜಾಪುರ ಆಸ್ಪತ್ರೆ ಆಶ್ರಯದಲ್ಲಿ ಪ್ರವಾದಿ ಮೊಹ್ಮದ ಪೈಗಂಬರರ ಜನ್ಮದಿನದ ಪ್ರಯುಕ್ತ ಡಾ. ಎಂ.ಎಂ. ಜೋಶಿ ಆಸ್ಪತ್ರೆ ವೈದ್ಯರೊಂದಿಗೆ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜಮಾತ್ ಅಹೆಲೇ ಸುನ್ನತ್ ಕರ್ನಾಟಕ ಹುಬ್ಬಳ್ಳಿ ಬ್ರಾಂಚ್ ಕಾರ್ಯದರ್ಶಿ ಮೌಲಾನಾ ಮುಪ್ತಿ ಮಹ್ಮದಅಲಿ ಖಾಜಿ ಮಾತನಾಡಿ ಮೊಬೈಲ್ ಹೆಚ್ಚು ಬಳಕೆ ಮಾಡದಂತೆ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಧಾರ್ಮಿಕ ಗುರುಗಳಾದ ಹಜರತ್ ಸೈಯದ ತಾಜುದ್ದೀನ ಪೀರಾ ಸಾನಿಧ್ಯ ವಹಿಸಿ ಮಾತನಾಡಿ, ಕಣ್ಣುಗಳ ಸಂರಕ್ಷಣೆಗಾಗಿ ಮಲಗುವ ಮುನ್ನ ಕಣ್ಣುಗಳನ್ನು ತಂಪಾದ ನೀರಿನಿಂದ ತೊಳೆದು ನಂತರ ಮಲಗುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮೌಲಾನಾ ನಿಯಾಜ ಆಲಂ, ಮಹ್ಮದ ಯೊಸುಫ್ ಸುಂಡಕೆ, ನಜೀರಅಹ್ಮದ ಕೋಲಕಾರ, ಸಿರಾಜಅಹ್ಮದ ಕುಡಚಿವಾಲೆ, ಡಾ.ರಾಜದೇವ, ಮೌಲಾನಾ ಅಬ್ದುಲ ಹಕಿಂ ಖಾದ್ರಿ, ಅಲಹಾಜ್ ಜಕ್ರಿಯಾ ಮದ್ದೀನ್ ಮೌಲಾನ ಅಬ್ದುಲ ಹಕ್ಮಿಂ, ಮೌಲಾನಾ ಸಾಹೇಬಜಾನ್ ಮುಂತಾದವರು ಪಾಲ್ಗೊಂಡಿದ್ದರು.