ಬೀದರಃಜೂ.3: ಭೀಕರ ರಸ್ತೆ ಅಪಘಾತಗಳಲ್ಲಿ ಅಥವಾ ಇನ್ನಿತರ ದುರಂತ ಘಟನೆಗಳಲ್ಲಿ ಕಣ್ಣುಗಳನ್ನು ಕಳೆದುಕೊಂಡವರಿಗೆ ಮತ್ತು ಹುಟ್ಟಿನಿಂದಲೇ ಅಂಧತ್ವರಾಗಿರುವವರಿಗೆ ಬೆಳಕು ಕೊಡಲು ಒಮದೇ ಒಂದು ದಾರಿ, ಅದುವೇ ಸ್ವಯಂ ಪ್ರೇರಿತ, ಮಹಾದಾನ ಮಾಡುವ ಶ್ರೇಷ್ಠದಾನ ನೇತ್ರದಾನದಿಂದಲೇ ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬ ನಾನರಿಕನು ಮಹತ್ವವನ್ನರಿತು ತಮ್ಮ ಮರಣನಂತ ಇತತರಿಗೆ ಪ್ರಕಾಶ ಕೊಡುವ ಕನ್ಣುಗಳನ್ನು ದಾನ ಮಆಡಲು ಮುಂದೆ ಬರಬೇಕೆಂದು ಬೀದರ ಜಿಲ್ಲಾ ಅಮಧತ್ವ ನಿಯಂತ್ರಣ ಸೂಸೈಟಿಯ ಕಾರ್ಯಕ್ರಮದ ಅಧಿಕಾರಿ ಡಾ. ಕಿರಣ ಪಾಟೀಲ ಅವರು ಸಮಸ್ತ ಮಹಾಜನತೆಗೆ ಕರೆ ನೀಡಿದರು.
ಅವರು ಇಂದು ದಿನಾಂಕ 2-6-2023 ರಂದು ಬೆಳಿಗ್ಗೆ 10-30 ಗಂಟೆಗೆ ಬಿದರ ನಗರದ ಐಎಂಎ ಹಾಲ್‍ನಲ್ಲಿ ಬೀದರ ಐ ಡೋನÀರ್ಸ್ ಫೆಸಿಲೆಟೆಶನ ಫೆÇರಂ (ರಿ) ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು. ಯಾವುದೆ ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗಾಗಿ ಸಮೀಪದ ಆಸ್ಪತ್ರೆ ಸ್ವಯಂ ಸೆವಾ ಸಂಸ್ಥೆಗಳಿಗೆ ಸಂಬಂಧಿತ ನೇತ್ರ ತಜ್ಞರುಗಳಿಗೆ ಅಂಧತ್ವ ನಿವಾರಣೆ ಕೆಂದ್ರಗಳಿಗೆ ತಿಳಿಸಬೇಕು. ತಕ್ಷಣವೆ ಅಲ್ಲಿಗೆ ತೆರಳಿದ ತಜ್ಷರು ಅವರ ಕಣ್ಣುಗಳನ್ನು ಐ ಬ್ಯಾಂಕಿನಲ್ಲಿ ಸ್ಟೋರ್ ಮಾಡಿ ಇಬ್ಬರು ಅಂಧರಿಗೆ ಬೆಳಕು ನೀಡುವ ಕೆಲಸ ಮಾಡುವರು. ಎಂದ ಅವರು ನೇತ್ರ ದಾನದಿಮದ ದೇಹಕ್ಕೆ ಯಾವುದೇ ಹಾನಿಯಿಲ್ಲ. ಈ ನಿಟ್ಟಿನಲ್ಲಿ ಈ ಸಂಸ್ಥೆ ಉತ್ತಮವಾದಂತಹ ಸಮಾಜ ಸೇವೆಯ ಹೆಜ್ಜೆ ಇರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಬೀದರನಲ್ಲಿ ಈವರೆಗೆ 359 ಜನ ನೇತ್ರದಾನ ಮಾಡಿರುತ್ತಾರೆ. ತಾವುಗಳು ಸಹ ತಕ್ಷಣವೇ ತಮ್ಮ ಹೆಸರು ನೊಂದಾಯಿಸಬೇಕೆಂದು ಡಾ. ಕಿರಣ ಪಾಟೀಲ ಕರೆ ನೀಡಿದರು.
ಹೈದ್ರಾಬಾದಿನ ಎಲ್.ವಿ. ಪ್ರಸಾದ ಐ ಇನಿಸ್ಟೂಟ್ ಅಡಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಐ ಬ್ಯಾಂಕ್‍ನ ಅಧಿಕಾರಿಯಾಗಿರುವ ಕಿಶನರೆಡ್ಡಿ ಥೋಟಾ ಅವರು ಮಾತನಾಡಿ, 1989 ರಲ್ಲಿ ಪ್ರಾರಂಭವಾದ ತಮ್ಮ ಸಂಸ್ಥೆ ಜನಜಾಗೃತಿ ಮಾಡುತ್ತಾ ಜನತೆಯ ಕಣ್ಣುಗಳನ್ನು ತಪಾಸಣೆ ಮಾಡಿ ಅವರಿಗೆ ಶಸ್ತ್ರಚಿಕಿತ್ಸೆಯೊಮದಿಗೆ ದೃಷ್ಟಿ ನೀಡುವ ಕಾರ್ಯ ಮಾಡುತ್ತಿದೆ. ಒಬ್ಬ ಮೃತ ವ್ಯಕ್ತಿಯ ಕನ್ಣುಗಳು ಇಬ್ಬರು ಕುರುಡರಿಗೆ ಬೆಳಕು ನೀಡುತ್ತದೆ. ಕಣ್ಣುಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುವುದಿಲ್ಲ. ಆದ್ದರಿಂದ ಇದರ ಮಹತ್ವ ಅರಿತು ದೇಶ ಮತ್ತು ಸಮಾಜ ಸೇವೆಗೋಸ್ಕರ ಅಂಧರಿಗೆ ಬೆಳಕು ಕೊಡುವಂತಹ ಶ್ರೇಷ್ಠ ಕಾರ್ಯಕ್ಕಾಗಿ ತಾವುಗಳು ಉಚಿತವಾಗಿ ಕಣ್ಣುಗಳು ದಾನ ಮಾಡಲು ಆಯಾ ಸಂಸ್ಥೆಗಳಲ್ಲಿ ತಮ್ಮ ಹೆಸರು ನೋಂದಾಯಿಸಿ ಕಣ್ಣು ದಾನ ಮಾಡಲು ಕಂಕಣಬದ್ದರಾಗಬೇಕೆಂದುಯ ಕರೆ ನೀಡಿದರು.
ಸಂಸ್ಥೆಯ ಕಾರ್ಯದಶಿ ಎನ್. ಆರ್. ವರ್ಮಾ ಅವರು ಮಾತನಾಡಿ, ಮರತ ವ್ಯಕ್ತಿಯ ಕಣ್ಣುಗಳು 6 ಗಂಟೆಯೊಳಗಾಗಿ ನೀಡಲು ತಮ್ಮ ಸಂಸ್ಥೆಗೆ ಜiಟಿಜ 24 ತಾಸುಗಳ ಕಾಲ ದೂರವಾಣಿ ಮುಖಂತರ ಕರೆ ಮಾಡಿ ತಿಳಿಸಬೇಕು. ರೆಫ್ರಿಜಿರೆಟರ್ ಇದ್ದರೆ 24 ತಾಸುಗಳ ಕಾಲ ಆ ಕಣ್ಣುಗಳ ಸಂರಕ್ಷಣೆ ಮಾಡಿ ಕೊಡಬಹುದು ಎಂದ ಅವರು ತಮ್ಮ ಸಂಸ್ಥೆಯಲ್ಲಿ ಮೂರು ಜನ ತಜ್ಞ ವೈದ್ಯರಿದ್ದಾರೆ, ಡಾ. ಅಬ್ದುಲ್ ಖದೀರ, ಅಶೊಕ ರೆಜೆಂತಲ, ಡಾ. ದೀಪಕ ಮೇಗೂರ, ಡಾ. ಸಿಬಿಲ್, ಡಾ. ಜಯಶ್ರೀ ಗೌರಿಶಂಕರ, ಸಚಿನ ಗೋಯಲ್, ಶಿವರತನ ಮಾಲಾಣಿ, ಆರ್. ಆರ್. ಮುನಿಗ್ಯಾಲ ಅವರು ನಮ್ಮ ಸಂಸ್ಥೆಯ ನಿರ್ದೇಶಕರುಗಳಿದ್ದಾರೆ ಎಂದರು. ಸಮಘದ ಅಧ್ಯಕ್ಷ ಸುಹಾಶ ಸಾಬಾದೆ, ಉಪಧ್ಯಕ್ಷ ಡಾ. ಸುಭಾಷ ಕರಪುರ ಅವರುಗಳು ಮಾತನಾಡಿ, ನೇತ್ರದಾನ ಮಾಡಲು ಮುಂದೆ ಬನ್ನಿ ಎಂದರು.