
ಬೆಂಗಳೂರು,ಅ.೯-ಟೊಮ್ಯಾಟೊ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬಾ ಹುಳಿಯಾಗಿ ಪರಿಣಮಿಸಿದ ಕಾರಣ ಅದರ ತಂಟೆಗೆ ಹೋಗದೆ ಇರುವ ತರಕಾರಿಗಳಲ್ಲೇ ನಿತ್ಯದ ಜೀವನ ಸಾಗಿಸುವ ಯೋಜನೆ ಇದುವರೆಗೆ ಈಗ ಈರುಳ್ಳಿ ಬೆಲೆ ಕಣ್ಣೀರು ತರಿಸುವ ಹಾದಿಯಲ್ಲಿ ಸಾಗುತ್ತಿದೆ.
ಒಂದು ಕೆ.ಜಿ ಟೊಮ್ಯಾಟೊಗೆ ೧೦೦, ೨೦೦, ೩೦೦ ರೂ. ಕೊಟ್ಟು ಖರೀದಿಸುವ ಸ್ಥಿತಿ ಇರುವ ಹಿಂದೆಯೇ ಮತ್ತೊಂದು ಬೆಲೆಯೇರಿಕೆಯ ಬಿಸಿ ಜನರನ್ನು ಕಾಡಲಿದೆ. ಕಳೆದ ನಾಲ್ಕು ತಿಂಗಳಿನಲ್ಲಿ ಕೆಜಿಗೆ ೨೫-೩೦ ರೂ. ಇದ್ದ ಈರುಳ್ಳಿ ಬೆಲೆ ಪೂರೈಕೆಯ ಕೊರತೆಯಿಂದಾಗಿ ಸೆಪ್ಟೆಂಬರ್ ಆರಂಭದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ೬೦-೭೦ ರೂ.ಗೆ ಏರುವ ನಿರೀಕ್ಷೆಯಿದೆ ಎಂದು ಕ್ರಿಸಿಲ್ ಸಂಶೋಧನಾ ವರದಿಯಲ್ಲಿ ತಿಳಿಸಿದೆ. ಆದಾಗ್ಯೂ, ಅಕ್ಟೋಬರ್‌ನಲ್ಲಿ ಸರಬರಾಜು ಸುಧಾರಿಸುವುದರಿಂದ ಬೆಲೆಗಳು ಇಳಿಯಬಹುದು ಎನ್ನಲಾಗಿದೆ. ಮೊದಲೇ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪರದಾಡುವಂತಾದ ಜನತೆಗೆ ಈರುಳ್ಳಿ ಬೆಲೆ ಏರಿಕೆ ತಿಂಗಳ ಖರ್ಚಿಗೆ ಭಾರಿ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.ಈರುಳ್ಳಿ ಉತ್ಪಾದನೆಯು ದೇಶಾದ್ಯಂತ ಅಂದಾಜಿಸಿದಷ್ಟು ಹೆಚ್ಚಿಲ್ಲ. ಮುಂಗಾರು ವಿಳಂಬದಿಂದ ಮುಂಗಾರು ಹಂಗಾಮಿನಲ್ಲೂ ಉತ್ಪಾದನೆ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ.
ಅಕ್ಟೋಬರ್‌ನಲ್ಲಿ ಮಾನ್ಸೂನ್ ಈರುಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಲವೆಡೆ ಭಾರಿ ಮಳೆಯಿಂದಾಗಿ ದಾಸ್ತಾನು ಮಾಡಿದ್ದ ಈರುಳ್ಳಿ ಹಾಳಾಗಿದೆ. ಇದರಿಂದಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಈರುಳ್ಳಿ ಬೆಲೆ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ಸಧ್ಯಕ್ಕೆ ಈರುಳ್ಳಿ ಸಾಧ್ಯವಾದಷ್ಟು ಶೇಖರಿಸಿ ಇಟ್ಟುಕೊಳ್ಳುವುದು ಒಳ್ಳೆಯದು ಇಲ್ಲದಿದ್ದರೆ ಕಣ್ಣೀರು ಖಾತ್ರಿ ಯಾಗಲಿದೆ.