ಕಣ್ಣಿಲ್ಲದವನಿಗೆ ಆಸರೆಯಾದ “ವಾತ್ಸಲ್ಯ ಮನೆ”ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಸಂಜೆವಾಣಿ ವಾರ್ತೆ
ಔರಾದ :ಮಾ.19: ಆರ್ಥಿಕವಾಗಿ ತೀರಾ ಹಿಂದುಳಿದ ಅತ್ಯಂತ ಕಡು ಬಡತನದ ನಿರ್ಗತಿಕರಿಗೆ ಮಾಸಾಶನ ನೀಡುವುದು ಸೇರಿ ಹಿಂದುಳಿದ ಬಡ ಕುಟುಂಬಗಳಿಗೆ ‘ವಾತ್ಸಲ್ಯ’ ಮನೆ ನಿರ್ಮಿಸಿಕೊಡಲಾಗುತ್ತಿದೆ’ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು.
ತಾಲ್ಲೂಕಿನ ಸುಂದಾಳ ಗ್ರಾಮದಲ್ಲಿ ಸೋಮವಾರ ನಿರ್ಗತಿಕ ಬಡಕುಟುಂಬದ ಎರಡು ಕಣ್ಣುಗಳ ಕಾಣದ ವೈಜಿನ್ನಾಥ ಮುಪ್ಪಾಲೆ ಅವರಿಗೆ ಎಸ್.ಕೆ.ಡಿ.ಆರ್.ಡಿಪಿ ಯೋಜನೆ ವತಿಯಿಂದ 1 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿದ ‘ವಾತ್ಸಲ್ಯ’ ಮನೆಯ ಬೀಗದ ಕೈಯನ್ನು ನೀಡಿ , ಅವರಿಗೆ ಹಣ್ಣು ಹಂಪಲು ನೀಡಿ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಅತ್ಯಂತ ನಿರ್ಗತಿಕ ಕಣ್ಣು ಕಾಣದ ಬಡವ ವೈಜಿನ್ನಾಥ ಅವರನ್ನು ಗುರ್ತಿಸಿ ಅವರ ಜೀವನ ಸಾಗಿಸಲು ಮನೆ ನಿರ್ಮಿಸಿಕೊಟ್ಟು ಆಶ್ರಯ ಮಾಡಿಕೊಡಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಈವರೆಗೆ 11 ವಾತ್ಸಲ್ಯ ಮನೆಗಳನ್ನು ನೀಡಲಾಗಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸವಾರ್ಂಗೀಣ ಅಭಿವೃದ್ದಿಗೆ ಸ್ವಸಹಾಯ ಗುಂಪುಗಳ ಮೂಲಕ ಸಂಸ್ಥೆ ಶ್ರಮಿಸುತ್ತಿದೆ’ ಎಂದರು.
ಯೋಜನಾಧಿಕಾರಿ ರಾಘವೇಂದ್ರ ಗೌಡ ಮಾತನಾಡಿ, ಸಮಾಜ ಬದಲಾವಣೆಯಾಗಬೇಕಾದರೇ ಮನುಷ್ಯನ ಬದುಕಿಗೆ ಮೂಲಭೂತ ಸೌಕರ್ಯಗಳು ಅವಶ್ಯಕಕವಾಗಿ ಬೇಕಾಗುತ್ತವೆ ಅನ್ನುವ ನಿಟ್ಟಿನಲ್ಲಿ ಮಾತೃಶ್ರೀ ಅಮ್ಮನವರ ಕನಸಿನ ಕಾರ್ಯಕ್ರಮ ವಾತ್ಸಲ್ಯ ಮನೆಯಾಗಿದೆ. ನಿರ್ಗತಿಕರಿಗೆ ನಮ್ಮ ಜೊತೆ ಯಾರು ಇಲ್ಲ ಎನ್ನುವ ಯೋಚನೆ ಬೇಡ , ನಿಮ್ಮ ಜೋತೆ ನಾವಿದ್ದೆವೆ ಎನ್ನುವ ಸಂದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಾರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಡಾ.ಶಾಲಿವಾನ ಉದಗೀರೆ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಮಲ್ಲಪ್ಪ ಗೌಡಾ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ವಲಯ ಮೇಲ್ವಿಚಾರಕ ಸಿದ್ರಾಮ, ರಾಮಾಗೌಡ, ಮಾರುತಿ, ದಯಾನಂದ ಹಳ್ಳಿಖೆಡೇ, ಸುನಿಲ್, ಸಂಗೀತಾ, ಕಾವೇರಿ, ಸುನೀತಾ, ಸುಜ್ಞಾನದೇವಿ, ಮಹಾದೇವಿ ಸ್ವಾಮಿ, ಸೇರಿದಂತೆ ಇತರರಿದ್ದರು.