ಕಣ್ಣಿನ ಶಸ್ರ್ತ ಚಿಕಿತ್ಸೆ,ಕನ್ನಡಕ ವಿತರಣೆ

ಮಾಲೂರು, ಮಾ೧೭:ಮನುಷನಿಗೆ ಅತಿಮುಖ್ಯವಾದುದು ಆರೋಗ್ಯ ಕಣ್ಣುಗಳು ಆರೋಗ್ಯದ ಒಂದು ಭಾಗ ಕಣ್ಣು ಕಾಣಿಸದಿದ್ದಲ್ಲಿ ಅಂಗವಿಕಲತೆ ಉಂಟಾಗಿ ಆರೋಗ್ಯದಲ್ಲಿ ಏರು ಪೇರು ಆಗುತ್ತದೆ.
ವಯಸ್ಸಾದ ತಂದೆ ತಾಯಿ ಸಮಾನರಾದವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಹಾಗೂ ಮಾಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯ ಸಭಾಂಗಣದಲ್ಲಿ ಇತ್ತೀಚಿಗೆ ವಯಸ್ಸಾದವರ ಕಣ್ಣಿನ ದೃಷ್ಟಿ ದೋ? ಇರುವವರ ಶಸ್ತ್ರ ಚಿಕಿತ್ಸೆ ಮಾಡಿಸಿ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಿ ಮಾತನಾಡಿದರು.
ವಯಸ್ಸಾದ ತಾಯಂದಿರು ತಂದೆ ಸಮಾನರಾದವರು ಕಣ್ಣಿನ ದೃಷ್ಟಿ ಕಡಿಮೆಯಾಗಿ ಓಡಾಡಲು ತೊಂದರೆ ಅನುಭವಿಸುತ್ತಿದ್ದರು ಅಂತಹವರನ್ನು ಗುರುತಿಸಿ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಿ ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ೨೬ ಮಂದಿ ಕಣ್ಣಿನ ದೃಷ್ಟಿ ದೋ? ಇರುವವರನ್ನು ಗುರುತಿಸಿ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ನಡೆಸಿ ಕನ್ನಡಕಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಹೆಚ್ಚಾಗಿ ವಯಸ್ಸಾದ ಹಿರಿಯರನ್ನು ಗುರುತಿಸಿ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗುವುದು, ಮನು?ನಿಗೆ ಅತಿ ಮುಖ್ಯವಾದದ್ದು ಆರೋಗ್ಯ, ಕಣ್ಣುಗಳು ಆರೋಗ್ಯದ ಒಂದು ಭಾಗವಾಗಿದೆ ಕಣ್ಣುಗಳು ಕಾಣಿಸದಿದ್ದಲ್ಲಿ ಅಂಗವಿಕಲತೆ ಉಂಟಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಚ್‌ವಿ ಚಂದ್ರಶೇಖರ್ ಗೌಡ, ತಾಲೂಕು ಅಧ್ಯಕ್ಷ ಬಲ್ಲಳ್ಳಿ ನಾರಾಯಣಸ್ವಾಮಿ, ರವಿಕುಮಾರ್, ಸಂಪತ್, ಮಂಗಳ, ಇನ್ನಿತರರು ಹಾಜರಿದ್ದರು.