ಕಣ್ಣಿನ ರಕ್ಷಣೆಗೆ ನಿರ್ಲಕ್ಷ ಬೇಡ

ಭಾಲ್ಕಿ:ಆ.1:ಕಣ್ಣು ದೃಷ್ಟಿಹೀನವಾದಾಗ ಮನುಷ್ಯನ ಬಾಳು ಅಂಧಾಕರದಲ್ಲಿ ಕಳೆಯಬೇಕಾಗುತ್ತದೆ. ಕಣ್ಣಿನ ರಕ್ಷಣೆ ಬಗ್ಗೆ ನಿರ್ಲಕ್ಷ ಬೇಡ ಎಂದು ಭಾಲ್ಕಿ ಗ್ರಾಮೀಣ ವೃತ್ತ ಸಿಪಿಐ ವೀರಣ್ಣ ಎಸ್.ದೊಡ್ಡಿಮನಿ ತಿಳಿಸಿದರು.
ಇಲ್ಲಿನ ಡಾ.ಜಾಧವ ಆಸ್ಪತ್ರೆ ಹತ್ತಿರದ ಪವನ್ ಆಪ್ಟಿಕಲ್ಸ್‍ನಲ್ಲಿ ರೋಟರಿ ಕ್ಲಬ್ ಭಾಲ್ಕಿ ಫೋರ್ಟ್,ವ್ಹಿಜನ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಉದಯಗಿರಿ ಲಾಯನ್ಸ್ ನೇತ್ರಾಲಯ ಉದಗಿರ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಉಚಿತ ಮೋತಿ ಬಿಂದು ಶಸ್ತ್ರಕ್ರಿಯೆ,ನೇತ್ರ ಚಿಕಿತ್ಸಾ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಕಣ್ಣಿಗೆ ಪೊರೆ ಬರುವುದು ಸಾಮಾನ್ಯವಾಗಿದೆ.ಅಪೌಷ್ಟಿಕತೆಯಿಂದ ಬಾಲ್ಯದಲ್ಲೇ ಉಂಟಾಗುವ ದೃಷ್ಟಿದೋಷ ತಡೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಗ್ರಾಮೀಣ ಭಾಗದಲ್ಲಿರುವ ಹಲವಾರು ಬಡ ಜನರ ಕಣ್ಣಿನ ಸಮಸ್ಯೆಯನ್ನು ಆರಂಭದಲ್ಲಿಯೇ ಚಿಕಿತ್ಸೆ ನೀಡಿ ಅವರ ಬಾಳಿಗೆ ಬೆಳಕು ನೀಡಲು ಸಾಧ್ಯವಿದೆ. ಕಾರಣ ಚಿಕಿತ್ಸೆಗೆ ನಿರ್ಲಕ್ಷ್ಯ ಮಾಡುವುದು ಸರಿಯಿಲ್ಲ. ರೋಟರಿ ಕ್ಲಬ್‍ನವರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಪಟ್ಟಣದಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿ ಏರ್ಪಡಿಸಿ ಬಡ ಜನರ ಬಾಳಿನ ಆಶಾಕಿರಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ತಪಾಸಣೆ:70 ಜನರ ಕಣ್ಣಿನ ತಪಾಸಣೆ ನಡೆಸಿ,25 ರೋಗಿಗಳನ್ನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಹಿರಿಯ ನೇತ್ರ ಅಧಿಕಾರಿ ವೈಜಿನಾಥ ಕೋಟೆ, ನೇತ್ರ ತಜ್ಞೆ ಅಪೋರ್ವ ತೋಷ್ನಿವಾಲ, ರೋಟರಿಕ್ಲಬ್ ಅಧ್ಯಕ್ಷ ಡಾ.ಪ್ರಭು ಕೋಟೆ, ಕಾರ್ಯದರ್ಶಿ ಅಶ್ವಿನ್ ಭೋಸ್ಲೆ, ಖಜಾಂಚಿ ಡಾ.ಗುಂಡೇರಾವ ಶೆಡೋಳೆ, ಡಾ.ನಿತೀನ ಪಾಟೀಲ, ನ್ಯಾ.ಸಂಜೀವ ನಾಯಕ್, ಡಾ.ಧನರಾಜ ಹುಲಸೂರೆ, ಪ್ರಾಚಾರ್ಯ ಅಶೋಕ ರಾಜೋಳೆ, ಡಾ.ವಿಕ್ರಮ ದೇವಪ್ಪಾ, ನ್ಯಾ.ಸೌರಭ್ ನಾಯಕ್, ಡಾ.ವಿಲಾಸ ಕನಸೆ, ಉದ್ಯಮಿ ಜೈಕಿಶನ್ ಬಿಯಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಾ.ಅಮೀತ ಅಷ್ಟೂರೆ ಸ್ವಾಗತಿಸಿದರು. ನ್ಯಾ.ಉಮಾಕಾಂತ ವಾರದ ನಿರೂಪಿಸಿದರು. ಡಾ.ಅನಿಲ ಸುಕಾಳೆ ವಂದಿಸಿದರು.