ಕಣ್ಣಿನ ತಪಾಸಣೆ ಬಡವರಿಗೆ ಆಸರೆ

ಗೌರಿಬಿದನೂರು.ಮಾ೧೨:ನಗರದ ಮುನೇಶ್ವರ ಬಡಾವಣೆಯಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ ವತಿಯಿಂದ ೨೦೩ ನೇ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಶಿಬಿರದಲ್ಲಿ ಒಟ್ಟು ೬೫ ಮಂದಿ ಕಣ್ಣಿನ ತಪಾಸಣೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ೩೦ ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.
ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ರಘುಬಾಬು ಮಾತನಾಡಿ, ಸಂಸ್ಥೆಯ ಅಡಿಯಲ್ಲಿ ನಿರಂತರವಾಗಿ ನಡೆಯುವ ಸೇವಾ ಕಾರ್ಯಗಳು ಅನೇಕ ಮಂದಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿವೆ. ಕಣ್ಣಿನ ತಪಾಸಣೆ ಶಿಬಿರದಲ್ಲಿ ೬೫ ಮಂದಿ ಭಾಗವಹಿಸಿದ್ದು, ಅದರಲ್ಲಿ ೩೦ ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಇದರಿಂದಾಗಿ ದೃಷ್ಟಿದೋಷದಿಂದ ಬಳಲುವವರಿಗೆ ನೆರವಾಗಲಿದೆ. ಲಯನ್ಸ್ ಸಂಸ್ಥೆಯು ವಿವಿಧ ಸೇವಾ ಕಾರ್ಯಗಳ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಲಯನ್ಸ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಆಕಾಶ್ ಎ.ಸುವರ್ಣ, ಕಾರ್ಯದರ್ಶಿ ಕೆ.ಜೆ.ರಾಮಮೂರ್ತಿ, ಖಜಾಂಚಿ ವಿಶ್ವನಾಥ್ ರಂಗಧೂಲ್, ಎಚ್.ಎಸ್.ಸೋಮಶೇಖರ್, ಲಯನ್ಸ್ ಬಂಧುಗಳಾದ ಹರೀಶ್ ರೆಡ್ಡಿ, ಪ್ರದೀಪ್, ಡಾ.ಕೆ.ಎನ್.ಗುಂಡೂರಾವ್, ಪ್ರೊ.ಕೆ.ರಾಮಾಂಜನೇಯಲು, ರಮೇಶ್, ಜಭೀ, ವಿ.ರವೀಂದ್ರನಾಥ್, ಶ್ರೀಧರ್, ಜಿ.ಎನ್.ಸೂರಜ್, ರವಿಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.