ಕಣ್ಣಿನ ಕಪ್ಪು ಕಲೆ ಸಮಸ್ಯೆಯೇ…

ಕಪ್ಪು ವೃತ್ತಗಳು ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು, ಆದರೆ ಇದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಉತ್ತಮ ವಿಧಾನವೆಂದರೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು, ತಾಜಾ ಹಣ್ಣು ತಿನ್ನುವುದು ಮತ್ತು ಮೊಸರು , ಬೇಳೆಕಾಳುಗಳು, ಸಂಸ್ಕರಿಸಿದ ಧಾನ್ಯಗಳು, ಕೆನೆ ತೆಗೆದ ಹಾಲು, ಸೊಪ್ಪುಗಳು ಮತ್ತು ಬೀನ್ಸ್ ಇವುಗಳನ್ನು ಹೆಚ್ಚಾಗಿ ಬಳಸುವುದು.

ಪ್ರತಿದಿನ ವ್ಯಾಯಾಮ ಮಾಡುವುದು, ರಕ್ತ ಸಂಚಲನ ಸುಲಭವಾಗಿ ಆಗಲು ಉಸಿರಾಟದ ವ್ಯಾಯಾಮಗಳನ್ನು ಮಾಡುವುದು ಮತ್ತು ಒತ್ತಡ, ಆತಂಕಗಳನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಕಪ್ಪು ವೃತ್ತ ತಡೆಯಲು ಉತ್ತಮ ವಿಧಾನವಾಗಿದೆ.

ಪ್ರತಿದಿನ ಕಡಿಮೆ ಎಂದರೆ ೭ ತಾಸು ನಿದ್ದೆ ಮಾಡಿ. ಪ್ರತಿದಿನ ೨೦ ನಿಮಿಷ ಧ್ಯಾನ ಮತ್ತು ಸಂಗೀತ ಕೇಳುವುದರ ಮೂಲಕ ಕಳೆಯಿರಿ.

ಕ್ರೀಂ ಹಚ್ಚುವಾಗ ಮತ್ತು ಮೇಕಪ್ ಮಾಡುವಾಗ ನಿಧಾನವಾಗಿ ಹಚ್ಚಿ. ಕಣ್ಣಿನ ಕೆಳ ಭಾಗದಲ್ಲಿ ಹೆಚ್ಚು ಮಸಾಜ್ ಮಾಡಬೇಡಿ. ಕಣ್ಣಿನ ಕೆಳಗೆ ಮಸಾಜ್ ಮಾಡಲು ವೃತ್ತಿಪರ ಮಸಾಜುಗಾರರಿಗೆ ಮಾತ್ರ ಅವಕಾಶ ಕೊಡಿ.

ಕಣ್ಣಿನ ಸುತ್ತ ವಿಶೇಷವಾಗಿ ಅದಕ್ಕೆಂದೇ ತಯಾರಿಸಿದ ಕ್ರೀಮ್ ಬಳಸಿ. ೧೫ ನಿಮಿಷಗಳ ನಂತರ ಹತ್ತಿಯಿಂದ ಒರೆಸಿ ತೆಗೆಯಿರಿ. ರಾತ್ರಿ ಪೂರ್ತಿ ಕ್ರೀಂ ಅನ್ನು ಹಾಗೆಯೇ ಬಿಡಬೇಡಿ. ಬಾದಾಮಿಯನ್ನು ಒಳಗೊಂಡ ಕಣ್ಣಿನ ಕೆಳಗೆ ಬಳಸುವ ಕ್ರೀಂ ಅನ್ನು ಬಳಸಿ ಇದರಲ್ಲಿ ಪೋಷಕಾಂಶಗಳು ಅಧಿಕವಾಗಿ ಇರುತ್ತವೆ. ಇದು ರಕ್ತ ಸಂಚಲನವನ್ನು ಸುಗಮವಾಗಿಸುತ್ತದೆ. ಕಣ್ಣಿನ ಸುತ್ತ ಫೇಶಿಯಲ್ ಮಾಸ್ಕ್ ಬಳಸಬೇಡಿ.

ಕಣ್ಣಿನ ಆಯಾಸ ಕಡಿಮೆ ಮಾಡಲು ಬೆಚ್ಚಗಿನ ನೀರಿನಿಂದ ತೊಳೆಯಿರಿ ನಂತರ ತಣ್ಣನೆ ನೀರಿನಿಂದ ಕೂಡ ಕಣ್ಣನ್ನು ತೊಳೆಯಿರಿ. ಇದು ರಕ್ತ ಸಂಚಲನವನ್ನು ಸುಗಮವಾಗಿಸುವುದರ ಮೂಲಕ ಕಪ್ಪು ವೃತ್ತ ಹೋಗಲಾಡಿಸುತ್ತದೆ.

ಸೌತೆಕಾಯಿಯ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಮತ್ತು ೧೫ ನಿಮಿಷದ ನಂತರ ನೀರಿನಿಂದ ತೊಳೆಯಿರಿ.

ಕಪ್ಪು ವೃತ್ತ ಹೋಗಲಾಡಿಸಲು ಆಲುಗಡ್ಡೆ ಮತ್ತು ಸೌತೆಕಾಯಿ ಮಿಶ್ರಣದ ರಸವನ್ನು ಕೂಡ ಬಳಸಬಹುದು.

ನಿಂಬೆ ಹಣ್ಣು ಮತ್ತು ಸೌತೆ ಕಾಯಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅದರ ರಸವನ್ನು ಪ್ರತಿದಿನ ಹಚ್ಚಿ ಮತ್ತು ೧೫ ನಿಮಿಷದ ನಂತರ ನೀರಿನಲ್ಲಿ ತೊಳೆದುಕೊಂಡರೆ ಕಪ್ಪು ವೃತ್ತಕ್ಕೆ ಮುಕ್ತಿ ಸಿಗುತ್ತದೆ.

ಟೊಮೆಟೊ ಜ್ಯೂಸ್ ಕೂಡ ಅಷ್ಟೇ ಒಳ್ಳೆಯದು. ಇದನ್ನು ಹಚ್ಚಿ ೨೦ ನಿಮಿಷ ಹಾಗೆಯೇ ಬಿಡಿ. ಇದಕ್ಕೆ ಐಸ್ ಅಥವಾ ತಣ್ಣನೆಯ ನೀರನ್ನು ಹಚ್ಚಿ ೧೦ ನಿಮಿಷ ಹಾಗೆಯೇ ಬಿಡಿ.

ತಣ್ಣಗಿನ ಟೀ ಬ್ಯಾಗ್ ಅನ್ನು ಕಣ್ಣಿನ ಕೆಳಭಾಗದಲ್ಲಿ ಇಡುವುದರಿಂದ ಕೂಡ ಕಣ್ಣಿನ ಕಪ್ಪು ಕಲೆಗಳು ಮಾಯವಾಗುತ್ತವೆ.

ಬಾದಾಮಿ ಎಣ್ಣೆ ಕೂಡ ಉತ್ತಮ ಮನೆ ಮದ್ದು. ಮಲಗುವ ಮೊದಲು ಬಾದಾಮಿ ಮತ್ತು ಹಾಲನ್ನು ಮಿಶ್ರ ಮಾಡಿ ಅದನ್ನು ಕಣ್ಣಿನ ಸುತ್ತಲು ಹಚ್ಚಿ. ಮಾರನೆಯ ದಿನ ಬೆಳಗ್ಗೆ ತಣ್ಣನೆಯ ನೀರಿನಿಂದ ತೊಳೆಯಿರಿ.

ಜಜ್ಜಿದ ಪುದೀನ ಎಲೆಗಳು ಕೂಡ ಕಣ್ಣಿನ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸಲು ಉತ್ತಮ ಮದ್ದು. ಜಜ್ಜಿನ ಪುದೀನವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಮತ್ತು ೧೦ ರಿಂದ ೧೫ ನಿಮಿಷ ಬಿಟ್ಟು ತೊಳೆಯಿರಿ.

ಕಿತ್ತಳೆ ರಸವನ್ನು ಗ್ಲಿಸರಿನ್ ಜೊತೆ ಬೆರೆಸಿ ವಾರದಲ್ಲಿ ೩ ಭಾರಿ ಕಣ್ಣಿನ ಸುತ್ತ ಹಚ್ಚಿ ೨೦ ನಿಮಿಷದ ನಂತರ ತೊಳೆಯಿರಿ. ಕಣ್ಣಿನ ಸುತ್ತಲ ಕಪ್ಪು ಕಲೆಗಳನ್ನು ಹೋಗಲಾಡಿಸಿ