ಕಣ್ಣಿನ ಉರಿ ಸಮಸ್ಯೆ

ಕಣ್ಣು ತುರಿಸುವುದು, ಕಣ್ಣು ಉರಿ ಇವೆಲ್ಲಾ ಸಾಮನ್ಯವಾದ ಸಮಸ್ಯೆಗಳು. ಆದರೆ ಈ ರೀತಿ ಉಂಟಾದಾಗ ತುಂಬಾ ಕಿರಿಕಿರಿ ಉಂಟಾಗುವುದು. ಕಣ್ಣಿಗೆ ಅಲರ್ಜಿಯಾದಾಗ ಕಂಪ್ಯೂಟರ್ ಮುಂದೆ ಕೂತಾಗ, ಟಿವಿ ನೋಡುವಾಗ ಕಣ್ಣಿನಿಂದ ನೀರು ಸುರಿಯುತ್ತಿರುತ್ತದೆ. ಈ ರೀತಿಯ ಸಮಸ್ಯೆಗಳನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು.
ರೋಸ್ ವಾಟರ್ ನಿಂದ ಕಣ್ಣು ಶುಚಿಗೊಳಿಸಿದರೆ ಕಣ್ಣು ತಂಪಾಗುವುದು, ಇದರಿಂದ ಕಣ್ಣು ಉರಿ ಉಂಟಾಗುವುದಿಲ್ಲ.
ಉರಿಯಾಗುತ್ತಿರುವಾಗ ಸೌತೆಕಾಯಿ ಕತ್ತರಿಸಿ ಕಣ್ಣಿಗೆ ಇಡುವುದು ಒಳ್ಳೆಯದು.
ಆಲೂಗೆಡ್ಡೆ ಕತ್ತರಿಸಿ ಕಣ್ಣಿಗೆ ಇಟ್ಟರೆ ಕಣ್ಣಿನ ಉರಿ ಕಡಿಮೆಯಾಗುವುದು.
ಹೊರಗಿನಿಂದ ಬಂದ ತಕ್ಷಣ ಮುಖವನ್ನು ತೊಳೆಯಿರಿ, ಕಣ್ಣುನ್ನು ಶುದ್ಧ ನೀರಿನಲ್ಲಿ ತೊಳೆಯುವುದರಿಂದ ಧೂಳಿನಿಂದ ಉಂಟಾಗುವ ಅಲರ್ಜಿ ಹೋಗಲಾಡಿಸಬಹುದು.
ಕಣ್ಣು ಉರಿ ಅಥವಾ ತುರಿಸುತ್ತಿದ್ದರೆ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಅದರಿಂದ ಕಣ್ಣನ್ನು ಶುಚಿಗೊಳಿಸಬೇಕು.
ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ ೧ ಗಂಟೆಯಲ್ಲಿ ೨-೩ ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಸ್ವಲ್ಪ ದೂರಕ್ಕೆ ನೋಡುವುದು, ಕಣ್ಣು ಮಿಟುಕಿಸುವ ವ್ಯಾಯಾಮ ಒಳ್ಳೆಯದು.
ಕಣ್ಣಿಗೆ ಲೆನ್ಸ್ ಬಳಸುವವರು ಅದನ್ನು ತುಂಬಾ ಹೊತ್ತು ಬಳಸದೆ, ಮನೆಯಲ್ಲಿರುವಾಗ ಕನ್ನಡಕ ಬಳಸುವುದು ಒಳ್ಳೆಯದು. ಲೆನ್ಸ್ ನಿರಂತರ ಬಳಸಿದರೆ ಕಣ್ಣಿನ ರೆಟಿನಾದಲ್ಲಿರುವ ಪಸೆ ಕಡಿಮೆಯಾಗುವುದು.