ಕಣ್ಣಿನ ಆರೋಗ್ಯಕ್ಕೆ ಸಲಹೆ

ಬೆಳಿಗ್ಗೆ ಎದ್ದ ಕೂಡಲೆ ಮುಖ ತೊಳೆಯುವಾಗ, ಬಾಯಲ್ಲಿ ನೀರನ್ನು ತುಂಬಿಸಿಕೊಂಡು ಕಣ್ಣುಗಳಿಗೆ ನೀರನ್ನು ಸಿಂಪಡಿಸುವುದರಿಂದ ಕಣ್ಣುಗಳು ಶುದ್ದ ಹಾಗೂ ಫ್ರೆಶ್ ಆಗುತ್ತದೆ. ಆದರೆ ಅತಿಯಾದ ಶೀತ ಮತ್ತು ಬಿಸಿನೀರಿನಿಂದ ಕಣ್ಣನ್ನು ಶುದ್ದಮಾಡಬಾರದು.

ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ ದೃಷ್ಥಿ ಉತ್ತಮವಾಗುತ್ತದೆ. ಅಲ್ಲದೆ ಮೂರನೆ ಕಣ್ಣು ಎಂದು ತಿಳಿಸುವ ಪೀನಲ್ ಗ್ರಂಥಿಯು ಪ್ರಚುರವಾಗುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳನ್ನು ನೋಡಬಾರದು.

ಕಣ್ಣಿನ ತೊಂದರೆಗಳನ್ನು ನಿವಾರಿಸಲು ಬಹು ಉಪಕಾರಿ. ಕಣ್ಣುಗಳನ್ನು ಮಿಟುಕಿಸದೆ ಕತ್ತಲೆ ಕೋಣೆಯಲ್ಲಿ ತುಪ್ಪದ ದೀಪದ ಜ್ಯೋತಿಯನ್ನು ೨-೩ ನಿಮಿಷ ಸತತವಾಗಿ ನೋಡುವುದರಿಂದ ದೃಷ್ಟಿಯ ಶಕ್ತಿ ಮತ್ತುಕಣ್ಣಿನ ಕಾಂತಿ ಹೆಚ್ಚುವುದು.

ಪಾದಗಳನ್ನು ಗಿಡಮೂಲಿಕೆಯುಕ್ತವಾದ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿ, ಮೃದುವಾಗಿ ಅಭ್ಯಂಜನ ಮಾಡುವುದರಿಂದ ರಕ್ತಸಂಚಾರ ಹೆಚ್ಚಾಗಿ, ದೃಷ್ಠಿಯ, ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿ ಉತ್ತಮಗೊಳ್ಳುತ್ತದೆ. ಅಭ್ಯಂಜನದಿಂದ ಪಾದಗಳಲ್ಲಿನ ದೃಷ್ಟಿಗೆ ಸಂಬಂದಿಸಿದ ಕೆಲವು ನಿರ್ದಿಷ್ಠ ಬಿಂದುಗಳನ್ನು ಪ್ರಚುರವಾಗುತ್ತದೆ. ಆದ್ರೆ ಜ್ವರ, ಶೀತ, ನೆಗಡಿ ಇದ್ದಾಗ ಮಾಡಬಾರದು.

ಅಕ್ಷಿ ತರ್ಪಣ, ಕ್ರಿಯಾ ಕಲ್ಪ ಚಿಕಿತ್ಸೆಗಳು, ನಶ್ಯ ಕರ್ಮ ಬಹು ಉಪಯೋಗಿ ? ಆದರೆ ಆಯುರ್ವೇದ ವೈದ್ಯರ ನಿರ್ದೇಶನದ ಮೇಲೆ ಚಿಕಿತ್ಸೆ ಪಡೆಯಬೇಕು.