ಬ್ಯಾಡಗಿ,ಜೂ27 :ಕಣ್ಣುಗಳು, ದೇವರು ಮನುಷ್ಯನ ದೇಹಕ್ಕಾಗಿ ಸೃಷ್ಟಿಸಿದ ಬಹುದೊಡ್ಡ ಕೊಡುಗೆಯಾಗಿದೆ, ಆದರೆ ಇತ್ತೀಚೆಗೆ ಅತೀ ಯಾದ ಮೋಬೈಲ್ ಬಳಕೆ ಸೇರಿದಂತೆ ಪರಿಸರದ ಮಾಲಿನ್ಯದಿಂದ ಆರೋಗ್ಯವಂತ ಕಣ್ಣುಗಳಿಗಾಗಿ ಹುಡುಕುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ಖೇದ ವ್ಯಕ್ತಪಡಿಸಿದರು.
ಚಿಕ್ಕಬಾಸೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾಗಿನೆಲೆ ವಲಯದ ಚಿಕ್ಕಬಾಸೂರ ಕಾರ್ಯ ಕ್ಷೇತ್ರದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ದೇಹದಲ್ಲಿ ಕಣ್ಣುಗಳು ಸೂಕ್ಷ್ಮವಾದ ಅಂಗಾಂಗವಾಗಿದ್ದು ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದ್ದು ಇತ್ತೀಚೆಗೆ ಯಾವುದೇ ವಯಸ್ಸಿನಲ್ಲಿ ಕಣ್ಣಿನ ದೋಷಗಳು ಕಾಣುತ್ತಿದ್ದು ಇವೆಲ್ಲವೂ ನಮಗೆ ಹೊಸ ಅನುಭವವನ್ನು ನೀಡುತ್ತಿವೆ ಹೀಗಾಗಿ ಕಣ್ಣಿನ ಆರೈಕೆಯಲ್ಲಿ ನಾವು ಎಷ್ಟೇ ಜಾಗೃತವಾಗಿದ್ದರೂ ಸಹ ಕಡಿಮೆ ಎನಿಸುತ್ತದೆ ಎಂದರು.
ಹುಬ್ಬಳ್ಳಿ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ವೈದ್ಯ ಸಂಜೀವ್ ಕುಲಕರ್ಣಿ ಮಾತನಾಡಿ, ನಿಮ್ಮ ಕಣ್ಣುರೆಪ್ಪೆಗಳ ಸುತ್ತಲೂ ನೀರಿನಂಶ, ಕಣ್ಣುಗಳ ಬಿಳಿ ಬಣ್ಣದಲ್ಲಿ ಕೆಂಪಾಗುವುದು ಅಥವಾ ಕಡಿತ ಆರಂಭವಾದಲ್ಲಿ ಬೇಗನೆ ವ್ಯದ್ಯರನ್ನು ಸಂಪರ್ಕಿಸಬೇಕು, ಇಂತಹ ಲಕ್ಷಣಗಳು ಕಣ್ಣಿಗೆ ಸೋಂಕು ಅಥವಾ ಗಾಯವನ್ನು ಸೂಚಿಸುತ್ತವೆ ಯಲ್ಲದೇ ಪುರು?Àರು ಮತ್ತು ಮಹಿಳೆಯರು ಇಬ್ಬರಿಗೂ ಇಂತಹ ಲಕ್ಷಣಗಳು ಸಮಾನವಾಗಿ ಪರಿಣಾಮ ಬೀರಬಹುದು ಎಂದರು.
ಕಂಪ್ಯೂಟರ್ ಮತ್ತು ಇತರ ಡಿಜಿಟಲ್ ಪರದೆಗಳ ಮೇಲೆ ಹೆಚ್ಚು ಸಮಯ ಕಳೆಯು ವುದರಿಂದ ಉಂಟಾಗುವ ಸಮಸ್ಯೆ ಇದಾಗಿದ್ದು ಇದರಿಂದ ತಲೆನೋವು, ಕಣ್ಣಿನ ಆಯಾಸ, ಮಸುಕಾದ ದೃಷ್ಟಿ, ಒಣ ಕಣ್ಣುಗಳು ರೋಗದ ಲಕ್ಷಣಗಳಾಗಿವೆ ಎಂದರು.
ವಯಸ್ಸು ಕಳೆದಂತೆ ಕಣ್ಣುಗಳ ಆಕಾರದಲ್ಲಿ ಬದಲಾವಣೆ ಉಂಟು ಮಾಡುತ್ತವೆ, ಹಾಗೆಯೇ ನಿಮ್ಮ ಕಣ್ಣುಗಳೊಳಗಿನ ಮಸೂರಗಳಲ್ಲಿ ಬದಲಾವಣೆ ಆಗಲೂಬಹುದು, ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ದೂರದೃಷ್ಟಿ ಮತ್ತು ಸಮೀಪ ದೃಷ್ಟಿಯಲ್ಲಿ ಹೆಚ್ಚು ಕಷ್ಟಕರ ಎನಿಸಬಹುದು ಹೀಗಾಗಿ ಕಾಲಕಾಲಕ್ಕೆ ಕಣ್ಣುಗಳು ತಜ್ಞ ವೈದ್ಯರ ಅಥವಾ ಉಚಿತ ತಪಾಸಣಾ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿ ದರು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ 17 ರೋಗಿಗಳಿಗೆ ಕನ್ನಡಕ ವಿತರಿಸಲಾಯಿತಲ್ಲದೇ 87 ಜನ ರಿಗೆ ಸಾಮಾನ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಜಗದೀಶ್ ಕಣಗಲಬಾವಿ, ಗ್ರಾಪಂ.ಅಧ್ಯಕ್ಷೆ ಶಕೀಲಬಾನು, ಲೆಕ್ಕ ಪರಿಶೋಧಕ ಜೈನುಲ್ಲಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾಗಿನೆಲೆ ವಲಯದ ಮೇಲ್ವಿಚಾರಕರು ಮತ್ತು ಜ್ಞಾನ ವಿಕಾಸ ಸಮನ್ವ ಯಾಧಿಕಾರಿ ಸೇವಾ ಪ್ರತಿನಿಧಿ ನೇತ್ರಾ ಮತ್ತು ರೊಕ್ಕಯ್ಯ ಉಪಸ್ಥಿತರಿದ್ದರು.