ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.03: ಯಾವುದೇ ಕಾರಣಕ್ಕೂ ಕಣ್ಣಿನ ಆರೈಕೆ ನಿರ್ಲಕ್ಷ್ಯ ತೋರಿದ ತಪಾಸಣೆಗೆ ಒಳಪಡಿಸಲು ಮುಂದಾಗಬೇಕಿದೆ ಎಂದು ಕಣ್ಣಿನ ವೈದ್ಯರಾದ ಅನುಪಮ ಹೇಳಿದರು.
ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ,
ಜನನಿ ಫೌಂಡೇಶನ್, ಅಮ್ಮ ಕ್ರಿಯೇಷನ್ಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೊಟ್ಟೂರಿನ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಾ ವಯೋಮಾನದವರು ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅಂಧಕಾರವನ್ನು ಹೋಗಲಾಡಿಸಿ ಎಂದು ಹೇಳಿದರು.
ಎಲ್ಲಾ ದಾನಕ್ಕಿಂತ ಕಣ್ಣಿನ ದಾನ ಶ್ರೇಷ್ಠವಾದುದು ಎಂದು ಆರೋಗ್ಯ ಇಲಾಖೆ ಸಮನ್ವಯ ಅಧಿಕಾರಿ ತಿಳಿಸಿದರು.
ಶಂಕರ ಕಣ್ಣಿನ ಆಸ್ಪತ್ರೆ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಚಿಕಿತ್ಸಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ ಪಿ ಪ್ರಕಾಶ್, ಯೋಗೀಶ್ವರ್ ದಿನ್ನೆ, ಡಾ. ನಾರಾಯಣ ಮೂರ್ತಿ ,
ಪರಿಮಳ ಇತರರು ಇದ್ದರು