ಕಣ್ಣಿಗೆ ಮನೆಮದ್ದು

೧. ಪ್ರತಿದಿನ ಊಟದ ಜೊತೆ ೧ ಈರುಳ್ಳಿ ಸೇವಿಸುತ್ತಾ ಬಂದರೆ ಕಣ್ಣುರಿ, ಕಣ್ಣು ಚುಚ್ಚುವಿಕೆ, ತಲೆನೋವು ಕಡಿಮೆ ಆಗುತ್ತದೆ. ಈರುಳ್ಳಿ ಹೆಚ್ಚುವಾಗ ಕಣ್ಣಿನಲ್ಲಿ ನೀರು ತರಿಸಿದರೂ ಕಣ್ಣಿನ ಸಮಸ್ಯೆಗೆ ಇದರಲ್ಲಿ ಒಳ್ಳೆಯ ಪರಿಹಾರವಿದೆ.
೨. ಹಸಿಕ್ಯಾರೆಟ್ ರಸ ಪ್ರತಿನಿತ್ಯ ಸೇವಿಸುತ್ತಿದ್ದರೆ, ಕಣ್ಣುಗಳ ದೃಷ್ಟಿ ಉತ್ತಮವಾಗುತ್ತದೆ. ಕಣ್ಣಿನ ನರಗಳಿಗೆ ಶಕ್ತಿ ಬರುತ್ತದೆ.
೩. ಗುಲಾಬಿ ಜಲವನ್ನು ಹತ್ತಿಯಲ್ಲಿ ನೆನೆಸಿ, ಕಣ್ಣಿನ ಮೇಲೆ ಇಟ್ಟುಕೊಂಡು ೧೦ ನಿಮಿಷ ಮಲಗಿದರೆ ಕಣ್ಣುರಿ, ಕಣ್ಣು ಕೆಂಪಾಗುವಿಕೆ ಎಲ್ಲಾ ಕಡಿಮೆ ಆಗುತ್ತದೆ.
೪. ನಂದಬಟ್ಟಲು ಹೂವಿನ ರಸವನ್ನು ಕಣ್ಣಿಗೆ ಹಾಕುತ್ತಾ ಬಂದರೆ, ಕಣ್ಣಿನ ಆಯಸ್ಸು ಚೆನ್ನಾಗಿರುತ್ತದೆ, ಪರೆ ಬರುವುದಿಲ್ಲ. ನಂದಬಟ್ಟಲು ಹೂವಿನ ರಸದಿಂದ ಕಾಡಿಗೆ ಮಾಡಿಟ್ಟುಕೊಂಡು ಕಣ್ಣಿಗೆ ಹಚ್ಚುತ್ತಾ ಬಂದರೆ ಕಣ್ಣಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ.
೫. ಹೊನೆಗೊನೆ ಸೊಪ್ಪಿನ ರಸ ೪ ಭಾಗ, ೧ ಭಾಗ ಎಳ್ಳೆಣ್ಣೆ ಬೆರೆಸಿ ಸಣ್ಣಉರಿಯಲ್ಲಿ ಕುದಿಸಿ ಇಂಗಿಸಿ ಬರೀ ಎಣ್ಣೆ ಉಳಿದ ಮೇಲೆ ತೆಗೆದಿಟ್ಟುಕೊಳ್ಳಿ. ಅದನ್ನು ತಲೆಗೆ ಹಚ್ಚುವುದರಿಂದ ಕಣ್ಣು ಉರಿ, ಕಣ್ಣು ಕೆಂಪಾಗುವಿಕೆ ಹಾಗೂ ಕಣ್ಣಿನ ದೃಷ್ಟಿಯ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ.
೬. ಪರಂಗಿಹಣ್ಣನ್ನು ಮೇಲಿಂದ ಮೇಲೆ ಸೇವನೆ ಮಾಡುವುದರಿಂದ ಕಣ್ಣುಗಳಿಗೆ ಒಳ್ಳೆಯ ಶಕ್ತಿ ಬರುತ್ತದೆ. ಕಣ್ಣಿನ ದೃಷ್ಟಿಯ ಸಮಸ್ಯೆ ಬರದಂತೆ ಕಾಪಾಡುತ್ತದೆ. ಪರಂಗಿಹಣ್ಣಿನಲ್ಲಿ ಜೀವಸತ್ವ ಅಧಿಕವಾಗಿರುವುದರಿಂದ ಕಣ್ಣಿನ ನರಗಳಿಗೆ ಚೈತನ್ಯ ಬರುತ್ತದೆ.
೭. ಕಣ್ಣಿನಲ್ಲಿ ಕಸ ಅಥವಾ ಸಣ್ಣಕ್ರಿಮಿಗಳು ಬಿದ್ದಾಗ ನೀರಿಗೆ ಸ್ವಲ್ಪ ಸಕ್ಕರೆ ಹಾಕಿ ಕರಗಿಸಿ ೨-೨ ಹನಿ ಹಾಕಿದರೆ ಒಳಗಿರುವ ಕಸವನ್ನು ಹೊರಕ್ಕೆ ತಳ್ಳುತ್ತದೆ.
೮. ಗುಲಾಬಿ ನೀರಲ್ಲಿ ಕಣ್ಣು ತೊಳೆಯುತ್ತಿದ್ದರೆ ಕಣ್ಣು ಚುಚ್ಚುವಿಕೆ, ಕಣ್ಣು ಕೆಂಪಾಗುವಿಕೆ ಕಡಿಮೆ ಆಗುತ್ತದೆ.
೯. ಕಣ್ಣಿನಲ್ಲಿ ಕಸ ಹೋದಾಗ ಹಸಿಈರುಳ್ಳಿಯನ್ನು ಮೂಸಿ ನೋಡಿದರೆ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿದು ಕಸ ಹೊರಗೆ ಬರುತ್ತದೆ.
೧೦. ಕಣ್ಣಿನಲ್ಲಿ ಗೀಜು ಬರುತ್ತಿದ್ದರೆ ಅಥವಾ ಬೆಳಿಗ್ಗೆ ಏಳುವಾಗ ಕಣ್ಣು ಮೆತ್ತಿಕೊಂಡಿದ್ದರೆ ಅದಕ್ಕೆ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ, ಶೋಧಿಸಿ ಆ ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸಿದರೆ ಅದರಿಂದ ಗೀಜು ಕಟ್ಟುವುದು ನಿಲ್ಲುತ್ತದೆ.
೧೧. ಉಪ್ಪಿನ ದ್ರಾವಣದಲ್ಲಿ ಕಣ್ಣನ್ನು ಮುಳುಗಿಸಿ ಕಣ್ಣುರೆಪ್ಪೆ ಬಡಿಯುತ್ತಿದ್ದರೆ ಕಣ್ಣುಗಳ ಆಯಸ್ಸು ಹೆಚ್ಚಾಗುತ್ತದೆ.
೧೨. ಕಣ್ಣು ಉರಿ, ನೋವು, ನೆವೆ ಉಂಟಾದರೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ, ಶೋಧಿಸಿ, ಆ ನೀರನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಮೇಲೆ ಇಡುತ್ತಾ ಬಂದರೆ ಉಪಶಮನವಾಗುತ್ತದೆ.
೧೩. ಸೇಬುಹಣ್ಣನ್ನು ತುರಿದು ಕಣ್ಣಿನ ಮೇಲೆ ಇಟ್ಟು ಒಂದು ಬಟ್ಟೆಯನ್ನು ಕಟ್ಟಿಕೊಳ್ಳಿ. ಪ್ರತಿನಿತ್ಯ ೨೧ ದಿನ ಮಾಡಿದರೆ ಕಣ್ಣಿನ ದೃಷ್ಟಿ ಹಾಗೂ ಕಣ್ಣಿನ ಇನ್ನಿತರ ಸಮಸ್ಯೆಗಳು ನಿವಾರಣೆಯಾಗುತ್ತದೆ.
೧೪. ಕರಿಬೇವಿನ ಸೊಪ್ಪಿನ ರಸವನ್ನು ಕಣ್ಣಿಗೆ ಹಾಕುತ್ತಾ ಬಂದರೆ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ.
೧೫. ಒಣಶುಂಠಿಯನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ನೀರಿನಲ್ಲಿ ಕಲಸಿ ಕಣ್ಣಿನ ಮೇಲೆ ಪಟ್ಟು ಹಾಕುತ್ತಾ ಬಂದರೆ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆ ಆಗುತ್ತದೆ.
೧೬. ಕಣ್ಣಿನ ಪೊರೆಗೆ: ಬದನೆಗಿಡದ ಬೇರನ್ನು ತೇಯ್ದು ಕಾಡಿಗೆ ರೀತಿಯಲ್ಲಿ ಹಚ್ಚುತ್ತಾ ಬಂದರೆ ಕಣ್ಣಿನ ಪೊರೆಯು ಕಳಚಿಬೀಳುತ್ತದೆ.
೧೭. ಬಿಳಿಈರುಳ್ಳಿ ರಸವನ್ನು ಶುದ್ಧ ಜೇನುತುಪ್ಪದೊಡನೆ ಸೇರಿಸಿ ಕಣ್ಣಿಗೆ ೨ ತೊಟ್ಟು ಹಾಕುತ್ತಾ ಬಂದರೆ ಕಣ್ಣಿನ ಪೊರೆ ಬರುವುದಿಲ್ಲ ಅಥವಾ ಈರುಳ್ಳಿ ರಸವನ್ನು ಹತ್ತಿಯ ಬತ್ತಿಯಲ್ಲಿ ಅದ್ದಿ ಕಣ್ಣಿನ ಕಪ್ಪು ತಯಾರಿಸುವಂತೆ ಮಾಡಿ ಬೆಣ್ಣೆಯಲ್ಲಿ ಕಲಸಿ ಪ್ರತಿನಿತ್ಯ ಕಾಡಿಗೆ ಇಡುತ್ತಾ ಬಂದರೆ ಮುಂದೆ ಕಣ್ಣಿನ ಪೊರೆ ಬರುವುದಿಲ್ಲ.
೧೮. ಕಣ್ಣು ಕೆಂಪಾಗುವಿಕೆ ಹಾಗೂ ಉರಿ: ದಾಳಿಂಬೆ ಚಿಗುರೆಲೆ ಹಾಗೂ ಸೀಬೆಹಣ್ಣಿನ ಹೂ ಎರಡನ್ನೂ ಹಿಸುಕಿ ರಸ ತೆಗೆದು ಕಣ್ಣಿಗೆ ಹಾಕುವುದರಿಂದ ಅನುಕೂಲವಾಗುತ್ತದೆ.
೧೯. ಲಕ್ಕಿಸೊಪ್ಪಿನ ರಸವನ್ನು ಗೋಮೂತ್ರದಲ್ಲಿ ಬೆರೆಸಿ ಕಣ್ಣಿಗೆ ಹಚ್ಚುವುದರಿಂದ ಕಣ್ಣಿನ ಇತರ ಸಮಸ್ಯೆಗಳು ದೂರಾಗುತ್ತವೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧