ಕಣಿವೆ ಉದ್ಭವಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಪಾವಗಡ, ಮಾ. ೨೯- ತಾಲ್ಲೂಕಿನ ಕಣಿವೆ ಉದ್ಭವಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕೋವಿಡ್-೧೯ರ ಎರಡನೇ ಅಲೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಥೋತ್ಸವ ರದ್ದು ಪಡಿಸಲಾಗಿದೆ ಎಂದು ತಾಲ್ಲೂಕು ಆಡಳಿತ ಪ್ರಕಟಣೆ ನೀಡಿದ್ದರೂ ಭಕ್ತರು ಯಥಾಸ್ಥಿತಿಯಲ್ಲಿ ಜಮಾಯಿಸಿದ್ದು, ರಥೋತ್ಸವ ಸಾಂಕೇತಿಕವಾಗಿ ನಡೆಯಿತು.
ಭಕ್ತರು ರಥಾರೂಢನಾದ ಲಕ್ಷ್ಮೀನರಸಿಂಹಸ್ವಾಮಿಯನ್ನು ಕಣ್ಣುತುಂಬಿಸಿಕೊಂಡು ರಥಕ್ಕೆ ಹೂ ಧವನ ಬಾಳೆಯಣ್ಣು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿ, ದೇವರ ದರ್ಶನ ಪಡೆದು ಪುನೀತರಾದರು.
ರಥೋತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಕಂದಾಯ ಇಲಾಖಾ ಅಧಿಕಾರಿಗಳು ವಿವಿಧ ಇಲಾಖಾ ಅಧಿಕಾರಿಗಳು ಗಣ್ಯರು ಭಕ್ತರು ಭಾಗವಹಿಸಿದ್ದರು.