ಕಣಗಾಲ್ ಪುತ್ರ ರಾಮು ಕೋವಿಡ್‌ಗೆ ಬಲಿ

ಬೆಂಗಳೂರು, ಏ. ೨೮- ಚಿತ್ರಬ್ರಹ್ಮ ಹಾಗೂ ದಿವಂಗತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ರಾಮು ಕಣಗಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಅಂದಹಾಗೆ ರಾಮು ಕಣಗಾಲ್ ಅವರು ಪ್ರಖ್ಯಾತ ಭರತನಾಟ್ಯ ಕಲಾವಿದ ಹಾಗೂ ನಿರ್ದೇಶಕರಾಗಿದ್ದು, ಕಣಗಾಲ್ ನೃತ್ಯಾಲಯ ಎನ್ನುವ ಹೆಸರಿನಲ್ಲಿ ನಾಟ್ಯಶಾಲೆ ನಡೆಸುತ್ತಿದ್ದರು.
ರಾಮು ಕಣಗಾಲ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಭರತನಾಟ್ಯ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಮಹಾಮಾರಿ ಕೊರೋನಾ ಸೋಂಕಿಗೆ ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಇತ್ತೀಚೆಗಷ್ಟೇ ಖ್ಯಾತ ನಿರ್ಮಾಪಕ ರಾಮು ಅವರು ಕೂಡ ಸೋಂಕಿಗೆ ಬಲಿಯಾಗಿದ್ದರು