ಕಡ್ಲೆಬೇಳೆ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳು:
ಎಣ್ಣೆ – ೧ ಸೌಟು
ಸಾಸಿವೆ – ೧ ಚಮಚ
ಕಡ್ಲೆಬೇಳೆ – ೧ ಚಮಚ
ಉದ್ದಿನಬೇಳೆ – ೧ ಚಮಚ
ಶುಂಠಿ – ೨ ಇಂಚು
ಕರಿಬೇವು – ಸ್ವಲ್ಪ
ಅರಿಶಿನ – ೧ ಚಮಚ
ಹಸಿಮೆಣಸಿನಕಾಯಿ – ೪ – ೬
ದಪ್ಪಮೆಣಸಿನಕಾಯಿ, ಕ್ಯಾರೆಟ್, ಬೀನ್ಸ್, ಎಲೆಕೋಸು, ಮೊಳಕೆ ಹೆಸರುಕಾಳು, ಇವುಗಳೆಲ್ಲಾ ಸೇರಿ ೧ ಲೋಟ.
ಈರುಳ್ಳಿ – ೧
ಟೊಮೊಟೊ – ೧
ಕಡ್ಲೆಬೇಳೆ – ೨ ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆರಸ – ರುಚಿಗೆ ತಕ್ಕಷ್ಟು
ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
ಕಾಯಿತುರಿ – ರುಚಿಗೆ ತಕ್ಕಷ್ಟು
ಕ್ಯಾರೆಟ್ ತುರಿ – ರುಚಿಗೆ ತಕ್ಕಷ್ಟು
ವಿಧಾನ: ಕಡ್ಲೆಬೇಳೆಯನ್ನು ನೀರಿನಲ್ಲಿ ನೆನೆಸಿ ತರಿತರಿಯಾಗಿ ರುಬ್ಬಬೇಕು. ಎಣ್ಣೆಗೆ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು, ಅರಿಶಿನ ಹಾಕಿ ಕೆಂಪಗಾದ ಮೇಲೆ ತುರಿದ ಶುಂಠಿ, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೊಟೊ ಹಾಕಿ ಬಾಡಿಸಿ, ನಂತರ ಚಿಕ್ಕದಾಗಿ ಹೆಚ್ಚಿದ ತರಕಾರಿಗಳಾದ ಕ್ಯಾಪ್ಸಿಕಮ್, ಕ್ಯಾರೆಟ್, ಬೀನ್ಸ್, ಎಲೆಕೋಸು ಹಾಕಿ ಬಾಡಿಸಿ ನಂತರ, ಮೊಳಕೆ ಹೆಸರುಕಾಳು ಹಾಕಿ ಎಣ್ಣೆಯಲ್ಲಿಯೇ ಬೇಯಿಸಿ, ತರಿತರಿಯಾಗಿ ರುಬ್ಬಿದ ಕಡ್ಲೆಬೇಳೆ ಹಾಕಿ ಬಾಡಿಸಿ, ಬೆಂದ ಮೇಲೆ ಉಪ್ಪು, ನಿಂಬೆರಸ ಹಾಕಿ ರುಚಿಗೆ, ಅಲಂಕಾರಕ್ಕೆ ಕೊತ್ತಂಬರಿಸೊಪ್ಪು, ಕಾಯಿತುರಿ, ಕ್ಯಾರೆಟ್ ತುರಿಹಾಕಿ ಕಲೆಸಬೇಕು.