ಕಡ್ಡಾಯ ಲಸಿಕೆ ಪಡೆಯಲು ಮನವಿ

ಆನೇಕಲ್‌ಏ.೭;ಮಾರಣಾಂತಿಕ ಕೋರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಮುಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು.
ಅವರು ತಾಲ್ಲೂಕಿನ ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಸಿ. ಹಳ್ಳಿ ಗ್ರಾಮದಲ್ಲಿ ಸರ್ಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆಯೋಜಿಸಿದ್ದ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ, ವದಂತಿಗಳಿಗೆ ಕಿವಿಗೊಡದೆ ತಪ್ಪದೆ ೪೫ ವರ್ಷ ಮೇಲ್ಪಟ್ಟರವರು ಲಸಿಕೆಯನ್ನು ಪಡೆದುಕೊಳ್ಳಿ ಎಂದರು.
ರಾಜ್ಯದಲ್ಲಿ ಕೋರೋನಾ ಸೋಂಕು ಎರಡನೇ ಅಲೆ ಪ್ರಾರಂಭವಾಗಿದ್ದು ತಪ್ಪದೆ ಪ್ರತಿಯೊಬ್ಬರು ಮಾಸ್ಕ್ ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿ ವಿಶೇಷವಾಗಿ ಸಾರ್ವಜನಿಕ ಸಮಾರಂಭ, ಮದುವೆ ಇತ್ಯಾದಿ ದಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುವಾಗ ಎಚ್ಚರದಿಂದರಬೇಕು ಎಂದರು.
ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಕೋವಿಡ್ ಲಸಿಕೆ ಪಡೆಯ ಬೇಕಾದರೆ ಸರ್ಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬೇಕಿತ್ತು, ಬಸ್ ಗಳ ಮೂಲಕ ಹೋಗಿ ಲಸಿಕೆ ಪಡೆಯುವ ಪರಿಸ್ಥಿತಿ ನಿರ್ಮಾವಾಗಿತ್ತು. ಸಾಕಷ್ಠು ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದು ಮನಗೊಂಡು ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿಯೇ ಕೋವಿಡ್ ಲಸಿಕೆ ಹಾಕಿಸಲು ಎಲ್ಲಾ ರೀತಿಯಾದ ವ್ಯವಸ್ಥೆ ಮಾಡಲಾಗಿದ್ದು ಪ್ರಥಮವಾಗಿ ಎಂ.ಸಿ. ಹಳ್ಳಿ ಗ್ರಾಮದಲ್ಲಿ ಕೊರೋನಾ ಲಸಿಕೆ ಹಾಕುವ ಶಿಭಿರ ಆಯೋಜಿಸಲಾಗಿದ್ದು ಜನರು ಭಯ ಪಡದೆ ಪ್ರತಿಯೊಬ್ಬರು ತಪ್ಪದೆ ಕೋವಿಡ್ ಲಸಿಕೆಯನ್ನು ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.