ಕಡ್ಡಾಯ ಮಾಸ್ಕಧರಿಸಿ ಕರೋನಾ ಓಡಿಸಿ-ರಶ್ಮೀ.ಹೆಚ್.ಜಿ.

ಸಂಡೂರು : ಏ:24: ಕರೋನಾದಂತಹ ಮಹಾಮಾರಿ ಇಂದು ದೇಶದ ತುಂಬ 2ನೇ ಅಲೆ ವ್ಯಾಪಿಸುತ್ತಿದ್ದು ಅದನ್ನು ತಡೆಯಬೇಕಾದರೆ ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ , ಸ್ಯಾನಿಟೈಸರ್ ಬಳಸಿ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದರು.
ಅವರು ಇಂದು ಪಟ್ಟಣದ ವಿಜಯ ವೃತ್ತದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ತಾಲೂಕು ಘಟಕ ಹಮ್ಮಿಕೊಂಡಿದ್ದ ಉಚಿತ ಮಾಸ್ಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸರ್ಕಾರ ಘೋಷಿಸಿರುವಂತಹ ಕಪ್ರ್ಯೂ ಅನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು, ಹೋಟಲ್‍ಗಳಲ್ಲಿ ಯಾವುದೇ ಕಾರಣಕ್ಕೂ ಊಟ ಮಾಡದೇ ಪಾರ್ಸಲ್ ಪಡೆಯಬೇಕು, ಜನ ಗುಂಪುಗುಂಪಾಗಿ ಸೇರಬಾರದು, ಇಂದು ಬಹಳಷ್ಟು ಜನ ಮಾಸ್ಕ ಇಲ್ಲದೆ ಓಡಾಡುತ್ತಿದ್ದು ದಂಡ ಹಾಕಲಾಗುತ್ತಿದೆ, ಅದನ್ನು ಮನಗಂಡ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೆ.ಖಾಜಾ ಹುಸೇನ್ ತಂಡದವರು ಉಚಿತವಾಗಿ ಮಾಸ್ಕ ಹಂಚುವ ಮೂಲಕ ಜನರಿಗೆ ಜಾಗೃತಿ ಮತ್ತು ರಕ್ಷಣೆಯನ್ನು ಮಾಡುತ್ತಿದ್ದು ಇಂತಹ ಕಾರ್ಯಗಳು ಪ್ರತಿಯೊಬ್ಬರಿಂದ ಅಗಬೇಕು ಅಗ ಸಾರ್ವಜನಿಕವಾಗಿ ಈ ರೋಗ ನಿಯಂತ್ರಣಕ್ಕೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ.ಖಾಜಾ ಹುಸೇನ್ ಮಾತನಾಡಿ ಕರೋನಾ ಯಾರನ್ನು ಬಿಡುತ್ತಿಲ್ಲ, ಸರ್ಕಾರ ಹಾಕುತ್ತಿರುವ ಲಸಿಕೆಯನ್ನು ಕಡ್ಡಾಯವಾಗಿ 45 ವರ್ಷ ಮೇಲ್ಪಟ್ಟವರು ಹಾಕಿಸಿಕೊಳ್ಳಿ ಕರೋನಾ ತಡೆಯಿರಿ, ಅಲ್ಲದೆ ಕಡ್ಡಾಯವಾಗಿ ಮಾಸ್ಕ ಧರಿಸಿ ರೋಗದಿಂದ ದೂರವಿರಿ ಎಂದು ತಮ್ಮ ಜಾಗೃತಿ ಕರೆಯನ್ನು ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸತೀಶ್. ಕರಾವೇ ಅಧ್ಯಕ್ಷ ಪಿ.ರಾಜು, ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ, ಕೆ.ದಾದಾಖಲಂದರ್, ಕೊಟ್ರೇಶ್, ಉಪಾಧ್ಯಕ್ಷ ರಾಮಾಂಜಿನಿ, ಸುಬಾನ್, ಪ್ರವೀಣ್, ಕೃಷ್ಣಪ್ಪ, ಮೆಹಬೂಬ್, ನೂರ್, ಸದ್ದಾಂ ಇತರ ಹಲವಾರು ಕಾರ್ಯಕರ್ತರು, ಸಂಘಟಕರು, ಮುಖಂಡರುಗಳು ಉಪಸ್ಥಿತರಿದ್ದರು.