ಕಡ್ಡಾಯ ಮಾರ್ಗಸೂಚಿ ಪಾಲಿಸಿ: ಸಿದ್ದರಾಮಯ್ಯ

ಬಾದಾಮಿ, ಮೇ3: ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಕೋವಿಡ್ ತಡೆಗಟ್ಟಲು ಎ.27 ರಿಂದ ಮೇ 12ರ ವರೆಗೆ ಜಾರಿ ಮಾಡಿರುವ ಜನತಾ ಕಫ್ರ್ಯೂನ್ನು ಕಡ್ಡಾಯವಾಗಿ ಪಾಲಿಸಿ ಕೊರೊನ ವೈರಸ್ ತಡೆಗಟ್ಟಲು ಸಾರ್ವಜನಿಕರಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಶಾಸಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊರೊನ ಸೋಂಕು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿμÁ್ಟಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ. ಹಾಗೂ ಬಾದಾಮಿ ಮತ್ತು ಗುಳೇದಗುಡ್ಡ ನಗರಗಳಲ್ಲಿ ಕೋವಿಡ್ ಚಿಕಿತ್ಸಾ ಆಸ್ಪತ್ರೆಗಳನ್ನು ತೆರೆಯಲು ಸೂಚಿಸಿರುತ್ತಾರೆ.
ಬಾದಾಮಿ ತಾಲೂಕಾಮಟ್ಟದ ಅಧಿಕಾರಿಗಳಾದ ತಹಶೀಲ್ದಾರ್, ತಾಲೂಕಾ ಆರೋಗ್ಯಾಧಿಕಾರಿ, ಪೆÇಲೀಸ್ ಇಲಾಖೆಯವರಿಗೆ ಸಾರ್ವಜನಿಕರು ಮನೆಯಲ್ಲಿಯೇ ಇದ್ದು, ಹೊರಗಡೆ ಬಾರದಂತೆ ಅಗತ್ಯ ತಿಳುವಳಿಕೆ ನೀಡಬೇಕೆಂದು ಸೂಚಿಸಿದ್ದಾರೆ. ಸಾರ್ವಜನಿಕರಿಗೆ ಜೀವನ ಅವಶ್ಯಕ ವಸ್ತುಗಳು ಸಿಗುವಂತೆ ತಾಲೂಕಾಡಳಿತ ವ್ಯವಸ್ಥೆ ಮಾಡಬೇಕು, ಚಿಕಿತ್ಸೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳು ಆಸ್ಪತ್ರೆಯಲ್ಲಿ ಸಿಗುವಂತೆ ನೋಡಿಕೊಳ್ಳಬೇಕೆಂದು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿ, ಏನಾದರೂ ಕೊರತೆ ಇದ್ದಲ್ಲಿ ಕೂಡಲೇ ತಿಳಿಸುವಂತೆ ಸೂಚಿಸಿರುತ್ತಾರೆ.
ನಗರಗಳಲ್ಲಿ ಪುರಸಭೆ, ಪಟ್ಟಣ ಪಂಚಾಯತ ಮತ್ತು ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯತನವರು ಸ್ವಚ್ಚತೆ ಕಾಪಾಡಲು ಮತ್ತು ಎಲ್ಲ ಚರಂಡಿ ಮತ್ತು ರಸ್ತೆಗಳಲ್ಲಿ ಔಷಧವನ್ನು ಸಿಂಪರಣೆ ಮಾಡಲು ತುರ್ತಾಗಿ ಕ್ರಮ ತೆಗೆದುಕೊಳ್ಳಲು ಸೂಚಿಸಿರುತ್ತಾರೆ ಎಂದು ಮುಖಂಡರಾದ ಹೊಳಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಪಿ.ಆರ್.ಗೌಡರ, ಎಂ.ಬಿ.ಹಂಗರಗಿ, ಮಹೇಶ ಹೊಸಗೌಡ್ರ, ಎಂ.ಡಿ.ಯಲಿಗಾರ, ರಾಜಮಹ್ಮದ ಬಾಗವಾನ, ಮಧು ಯಡ್ರಾಮಿ, ಡಾ.ಎಂ.ಎಚ್.ಚಲವಾದಿ, ಮಂಜುನಾಥ ಹೊಸಮನಿ, ಡಾ.ಎಂ.ಜಿ.ಕಿತ್ತಲಿ, ರೇವಣಸಿದ್ದಪ್ಪ ನೋಟಗಾರ, ಕಾಮಣ್ಣ ಪೂಜಾರ, ಶಿವು ಮಣ್ಣೂರ, ರಂಗು ಗೌಡರ, ನಾಗಪ್ಪ ಅಡಪಟ್ಟಿ, ಹನಮಂತ ದೇವರಮನಿ, ಪ್ರಕಾಶ ಮೇಟಿ, ಸೇರಿದಂತೆ ಕಾಂಗ್ರೇಸ್ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.