ಕಡ್ಡಾಯ ಮತದಾನ ಮಾಡುವ ಕುರಿತು ಕೊಂಕಲ್ ಗ್ರಾಮದಲ್ಲಿ ಜಾಗೃತಿ ಅಭಿಯಾನ

ಗುರುಮಠಕಲ್:ಎ.12:ತಾಲೂಕ ಕೊಂಕಲ್ ಗ್ರಾಮದಲ್ಲಿ ಸ್ವೀಪ್ ಸಮಿತಿ ವತಿಯಿಂದ ಕಡ್ಡಾಯ ಮತದಾನ ಮಾಡುವ ಕುರಿತು ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತ ಯಾದಗಿರಿ ಯೋಜನಾ ನಿರ್ದೇಶಕರು ಲಕ್ಷ್ಮಣ ಶೃಂಗೇರಿ ಹಾಗೂ ಗುರುಮಠಕಲ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೋಳಿ ಅವರು ಚಾಲನೆ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು ಮತ್ತು ಕಡ್ಡಾಯವಾಗಿ ಎಲ್ಲರೂ ಮತಗಟ್ಟೆಗೆ ಹೋಗಿ ಮತದಾನದ ದಿನಾಂಕದಂದು ಮತ ಚಲಾಯಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್(ಗ್ರಾಉ) ಸಹಾಯಕ ನಿರ್ದೇಶಕರು ರಾಮಚಂದ್ರ ಬಸೂದೆ . ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಶ್ರೀ ಮತಿ ವನಜಾಕ್ಷಿ ಬೆಂಡಿಗೇರಿ, ಮತ್ತು ಅಂಗನವಾಡಿಕಾರ್ಯಕರ್ತರು, ಆಶಾ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಸಿಬ್ಬಂದಿಯರು. ಸ್ವಸಹಾಯ ಸಂಘದ ಸದಸ್ಯರುಗಳು, ಮತ್ತು ಸಾರ್ವಜನಿಕರು, ತಾಂತ್ರಿಕ ಸಿಬ್ಬಂದಿರವರು. ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಆವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ಸ್ವಸಾಯ ಸಂಘಗಳ, ಸದಸ್ಯರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರಂಗೋಲಿ ಬಿಡಿಸುವ ಮುಖಾಂತರ ಗ್ರಾಮಸ್ಥರಲ್ಲಿ ಮತದಾನದ ಕುರಿತು ಅರಿವು ಕಾರ್ಯಕ್ರಮವನ್ನು ಮೂಡಿಸಿದರು ಹಾಗೂ ಜಾತ ಕಾರ್ಯಕ್ರಮವನ್ನು ಮಾನ್ಯ ಯೋಜನಾ ನಿರ್ದೇಶಕರು ಚಾಲನೆ ನೀಡಿದರು ಗ್ರಾಮದ ಮುಖ್ಯಬೀದಿಗಳಲ್ಲಿ ಜಾತ ಕಾರ್ಯಕ್ರಮವನ್ನು ಮಾಡಿ ಕೊನೆಗೆ ಸ್ಥಳೀಯ ಶಾಲಾ ಆವರಣದಲ್ಲಿ ಎಲ್ಲರೂ ಮಾನವ ಸರಪಳಿ ಏರ್ಪಡಿಸಿ ಮತದಾನದ ಅರಿವು ಕಾರ್ಯವನ್ನು ಗ್ರಾಮಸ್ಥರಲ್ಲಿ ಮಾಡಲು ಮನವಿ ಮಾಡಿ ಶೇಕಡ 100% ಮತದಾನ ಮಾಡಲು ಅರಿವು ಮೂಡಿಸಲು ವಿನಂತಿಸಲಾಯಿತು ಮತ್ತು ಸದರಿ ಗ್ರಾಮದಲ್ಲಿ ಮತಗಟ್ಟೆಗಳನ್ನು ಮಾದರಿ ಮತಗಟ್ಟೆ ಮತ್ತು ಪಿಂಕ್ ಮತಗಟ್ಟೆಗಳನ್ನು ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಲು ಅತಿ ಆಸಕ್ತಿಯಿಂದ ಕಾರ್ಯನಿರ್ವಹಿಸಲು ಮಾನ್ಯೆಯೋಜನ ನಿರ್ದೇಶಕರು ವಿನಂತಿಸಿದರು ನಂತರ ವಂದನಾರ್ಪಣೆ ಮಾಡಿ ಸಭೆ ಮುಕ್ತಾಯವಾಯಿತು.