ಕಡ್ಡಾಯ ಮತದಾನ ಮಾಡಲು ಸಲಹೆ

ಭಾಲ್ಕಿ:ಏ.17:ತಾಲ್ಲೂಕಿನ ತೂಗಾಂವ (ಎಚ್) ಗ್ರಾಮ ಪಂಚಾಯಿತಿ ಯಲ್ಲಿ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ ಕೌಟಗೆ ಮಾತನಾಡಿ, ಸಂವಿಧಾನ ದೇಶದ ನಾಗರಿಕರಿಗೆ ನೀಡಿರುವ ಮತದಾನ ಹಕ್ಕನ್ನು ಮತದಾರರು ಚುನಾವಣೆಯಲ್ಲಿ ತಪ್ಪದೇ ಚಲಾಯಿಸುವ ಮೂಲಕ ತಮಗಿಷ್ಟವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತೂಗಾಂವ (ಎಚ್) ನಲ್ಲಿ ಮತದಾನ ಕಡಿಮೆ ಆಗಿದೆ. ಈ ಸಲ ಮತದಾನ ಪ್ರಮಾಣ ಹೆಚ್ಚಿಸಲು ಎಲ್ಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ನುಡಿದರು.
ವ್ಯವಸ್ಥಾಪಕ ವಿನೋದ ರೆಡ್ಡಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದ್ದಿ ಹಾಜರಿದ್ದರು.