
ಕಲಬುರಗಿ,ಏ.26- ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವದ ಕರ್ತವ್ಯ ನಿಭಾಯಿಸಲು ಮತದಾರರಲ್ಲಿ ಜಾಗೃತಿ ಮೂಡಿಲು ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಕಾಂಬಳೆ ಅವರು ಕರೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ-2023 ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಮತದಾರರು ಯಾವುದೇ ಆಮಿಷ ಹಾಗೂ ಇತರೆ ದುರಾಶೆಗೆ ಒಳಗಾಗದೆ ದೇಶದ ಪ್ರಜಾಪ್ರಭುತ್ವ ಕರ್ತವ್ಯವಾದ ಕಡ್ಡಾಯ ಮತದಾನ ಮಾಡುವ ಮೂಲಕ ಸದೃಢ ಭಾರತ, ಸುಂದರ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗಬೇಕು.
ನಗರದ ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆಯ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮತದಾನದ ಮಹತ್ವ ಮತ್ತು ಜಾಗೃತಿಯ ಕುರಿತು ಮಾತನಾಡಿದ ಅವರು, ಮತದಾನದಿಂದ ಭೃಷ್ಟ ಆಡಳಿತ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಲ್ಲಿ ಜೊತೆಗೆ ದೇಶದ ಪ್ರಜಾಪ್ರಭುತ್ವ ಮತ ಮೌಲ್ಯವನ್ನು ಹೆಚ್ಚಿಸುವುದು ಸಮಾಜವನ್ನು ದಿಕ್ಸೂಚಿ ಮಾರ್ಗದರ್ಶನ ಮಾಡಲು ಮತದಾರರು ತಮ್ಮ ಹಕ್ಕನ್ನು ಚಾಲಾಯಿಸಬೇಕು.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರೀತಿಸುವ, ಗೌರವಿಸುವ ಪ್ರತಿಯೊಬ್ಬ ನಾಗರಿಕನನ್ನೂ ಈ ಪ್ರಶ್ನೆ ಕಾಡಲೇಬೇಕಿದೆ. ವೋಟಿಗಾಗಿ ನೋಟು ಅಥವಾ ಒಂದು ಸೋಟಿಗೆ ಒಂದು ವೋಟು ಎನ್ನುವ ಒಂದು ಪರಂಪರೆಯನ್ನು ವ್ಯವಸ್ಥಿತಗೊಳಿಸಿರುವ ಸಮಾಜವನ್ನು ಸುಧಾರಿಸುವತ್ತ ಪ್ರಜ್ಞಾವಂತ ಸಮಾಜ ಯೋಚಿಸಲು ಇದು ಸಕಾಲ.
ಶೋಷಿತರಿಗೆ ಸಮಾಜಿಕ ನ್ಯಾಯ ಮತ್ತು ಸಮಾನತೆ ಪಡೆಯಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಿ.ಎಂ. ರಾವೂರ, ಹುಸೇನ, ಸುಭಾಶ್ಚಂದ್ರ ಮೇಲಿನಮನಿ, ಮಾರ್ಕ, ರತನಚಂದ, ಅವಿನಾಶಗೌಳಿ, ಬಸವರಾಜ ಹಡಪದ, ದೇವೇಂದ್ರಪ್ಪ ಕುಂಬಾರ, ವೀರೇಶ ಪತ್ತಾರ, ವಿಜಯಕುಮಾರ ಸುತಾರ, ಸಚೀನ ಬಿ. ರಾಜಾಪೂರ, ಚಂದ್ರಕಾಂತ ಮರತೂರ, ಮಾಯಾ ಪ್ರಕಾಶ ವಾಮನೆ, ಶ್ರೀದೇವಿ ಗಾಯಕವಾಡ, ಗೀತಾ ಸಿಂಗೆ, ವಿಜಯಕುಮಾರ ಮತ್ತಿತರು ಭಾಗವಹಿಸಿದ್ದರು.